ಚೀನಾದ ವ್ಯಾನ್​ಶೆಂಗ್​ ಆರ್ಡೋವಿಸಿಯನ್ ಥೀಮ್ ಪಾರ್ಕ್ ಕೇವಲ ಸಾಹಸಿ ಪ್ರವೃತ್ತಿಯವರಿಗೆ ಮಾತ್ರ ಮಾಡಿದ್ದಿರಬೇಕು!

1000 ಅಡಿ ಎತ್ತರದಲ್ಲಿ ಕೇವಲ ಹಗ್ಗಗಳಿಂದ ಕಟ್ಟಿ ನೇತಾಡಲು ಬಿಟ್ಟಿರುವ ಹಾಸಿಗೆಯಲ್ಲಿ (ಇದನ್ನು ಹಮ್ಮೋಕ್ ಬೆಡ್ ಅಂತ ಕರೆಯುತ್ತಾರೆ) ಮಲಗುವುದು ದುಸ್ವಪ್ನವಲ್ಲದೆ ಮತ್ತೇನೂ ಅಲ್ಲ

ಚೀನಾದ ವ್ಯಾನ್​ಶೆಂಗ್​ ಆರ್ಡೋವಿಸಿಯನ್ ಥೀಮ್ ಪಾರ್ಕ್ ಕೇವಲ ಸಾಹಸಿ ಪ್ರವೃತ್ತಿಯವರಿಗೆ ಮಾತ್ರ ಮಾಡಿದ್ದಿರಬೇಕು!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 12, 2021 | 12:16 AM

ನೀವು ಅಕ್ರೊಫೋಬಿಯಾ ಅಥವಾ ವರ್ಟಿಗೊ ಸಮಸ್ಯೆಯಿಂದ ಬಳಲುತ್ತಿದ್ದರೆ ದಯವಿಟ್ಟು ಚೀನಾದ ಚಾಂಗಿಂಗ್ನಲ್ಲಿರುವ ವ್ಯಾನ್ಶೆಂಗ್ ಆರ್ಡೋವಿಸಿಯನ್ ಥೀಮ್ ಪಾರ್ಕ್​ಗೆ ಭೇಟಿ ನೀಡಲೇ ಬೇಡಿ. ಈ ಪಾರ್ಕ್ನಲ್ಲಿ ಒಂದು ಬೆಡ್ ಅನ್ನು ಹಗ್ಗಗಳಿಂದ ಕಟ್ಟಿ ನೇತುಹಾಕಿದ್ದಾರೆ. ಇದು ಭೂಮಿಯಿಂದ 300 ಮೀಟರ್ ಅಂದರೆ 984 ಅಡಿಗಳಷ್ಟು ಎತ್ತರದಲ್ಲಿ ಹೊಯ್ದಾಡುತ್ತಿದೆ. ಹಿಂದೆ-ಮುಂದೆ, ಅಕ್ಕ-ಪಕ್ಕ ಯಾವುದೇ ಸಪೋರ್ಟ್ ಇಲ್ಲ. ಅದರೊಳಗೆ ಎಂಟ್ರಿ ಹೇಗೆ ಪಡೆಯುತ್ತಾರೋ? ನೀವೇ ನೋಡಿ, ಭಯ ಉಂಟಾಗುವಷ್ಟು ಎತ್ತರದಲ್ಲಿ ಹಾಸಿಗೆ ನೇತಾಡುತ್ತಿದೆ! ತ್ರಿಶಂಕು ಸ್ಥಿತಿಯಲ್ಲಿ ಮಲಗಿ ನೋಡುವ ಅನುಭವಕ್ಕಾಗಿ ಮಾತ್ರ ಈ ಹಾಸಿಗೆಯನ್ನು ತೂಗುಹಾಕಲಾಗಿದೆಯಂತೆ.

ಅದರಲ್ಲಿ ರಾತ್ರಿಯಿಡೀ ಮಲಗುವಂತೆಯೂ ಇಲ್ಲ ಬಿಡಿ. 1000 ಅಡಿ ಎತ್ತರದಲ್ಲಿ ಕೇವಲ ಹಗ್ಗಗಳಿಂದ ಕಟ್ಟಿ ನೇತಾಡಲು ಬಿಟ್ಟಿರುವ ಹಾಸಿಗೆಯಲ್ಲಿ (ಇದನ್ನು ಹಮ್ಮೋಕ್ ಬೆಡ್ ಅಂತ ಕರೆಯುತ್ತಾರೆ) ಮಲಗುವುದು ದುಸ್ವಪ್ನವಲ್ಲದೆ ಮತ್ತೇನೂ ಅಲ್ಲ. ಗಾಳಿ ಜೋರಾಗಿ ಬೀಸಿದರೆ ಹಾಸಿಗೆ ಭೀತಿಹುಟ್ಟುವಷ್ಟು ಓಲಾಡುತ್ತದೆ. ಆ ಹೊಯ್ದಾಟದಲ್ಲಿ ಮೊಬೈಲ್ ಫೋನ್ ಕೈಯಿಂದ ಜಾರಿ ಭೂಮಿಗೆ ಬಿದ್ದರೆ, ಪೋನ್ ಬಿಡಿ ಸಿಮ್ ಕಾರ್ಡ್ ಸಹ ಚೂರಾಗುತ್ತದೆ. ಮತ್ತೊಂದು ಸಂಗತಿ, ಮಲಗಲು ಅಣಿಯಾಗುವಾಗ ವಾಷ್ ರೂಮ್ಗೆ ಹೋಗಬೇಕಾದ ತುರ್ತು ಎದುರಾದರೆ ಏನು ಮಾಡೋದು?

ಇವುಗಳೊಟ್ಟಿಗೆ ಇನ್ನೊಂದು ಸಂಗತಿಯೂ ಇದೆ. ಎಲ್ಲ ಅಡಚಣೆಗಳನ್ನು ಮೆಟ್ಟಿ ಒಬ್ಬ ಸಾಹಸಿ ಅಲ್ಲಿ ರಾತ್ರಿಯಿಡೀ ಮಲಗಿಯೇಬಿಟ್ಟ ಅಂದುಕೊಳ್ಳೋಣ. ಬೆಳಗಿನ ಹೊತ್ತು ಚಿಲಿಪಿಲಿಗುಡುವ ಪಕ್ಷಿಗಳು ಹಮ್ಮೋಕ್ ಬೆಡ್ ಮೇಲೆ ಮಲಗಿದವನ ತೆರದ ಬಾಯಿಯನ್ನೇ ತಾವು ಫ್ರೆಶ್ ಅಗಲು ಬಳಸಿದರೆ ಏನು ಮಾಡೋದು? ಅಲ್ಲಿ ಮಲಗುವ ಸಾಹಸ ಮಾಡದಿದ್ದರೆ ಯಾವುದೇ ಸಮಸ್ಯೆಯಿಲ್ಲ, ಆದರೆ ಮಲಗಲು ನಿರ್ಧರಿಸಿದರೆ ನೂರೆಂಟ್ ಸಮಸ್ಯೆಗಳು.

ಯಾರಿಗಪ್ಪ ಬೇಕು ಅದೆಲ್ಲ?

ಇದನ್ನೂ ಓದಿ: Viral Video: ಇಂತಹ ಡ್ರೈವಿಂಗ್ ಕೌಶಲ್ಯ ನಾಸಾದವರೇ ಕಲಿಸಿರಬೇಕು! ವಿಡಿಯೋ ನೋಡಿದ್ರೆ ನೀವೂ ಹೀಗನ್ನಬಹುದು 

Follow us
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ