Viral Video: ಇಂತಹ ಡ್ರೈವಿಂಗ್ ಕೌಶಲ್ಯ ನಾಸಾದವರೇ ಕಲಿಸಿರಬೇಕು! ವಿಡಿಯೋ ನೋಡಿದ್ರೆ ನೀವೂ ಹೀಗನ್ನಬಹುದು

Funny Video: ಅಪಘಾತವೂ ಆಗಿಲ್ಲ. ವಾಹನಕ್ಕೆ ಯಾವ ಹಾನಿಯೂ ಸಂಭವಿಸಿಲ್ಲ ಎಂಬುದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ವಾಹನ ಚಾಲಕನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಕಮೆಂಟ್​ಗಳ ಹೊಳೆಯೇ ಹರಿದಿದೆ.

Viral Video: ಇಂತಹ ಡ್ರೈವಿಂಗ್ ಕೌಶಲ್ಯ ನಾಸಾದವರೇ ಕಲಿಸಿರಬೇಕು! ವಿಡಿಯೋ ನೋಡಿದ್ರೆ ನೀವೂ ಹೀಗನ್ನಬಹುದು
ಡ್ರೈವಿಂಗ್ ಸ್ಕಿಲ್

ನೋಡಲು ಬಹಳ ಸುಲಭದಂತೆ ಕಂಡರೂ ನಿಜವಾಗಿಯೂ ಕಷ್ಟದ ಮತ್ತು ಹೆಚ್ಚು ಶ್ರಮ ಬೇಡುವ ಕೆಲಸ ಅಂದರೆ ಅದು ಡ್ರೈವಿಂಗ್ ಕೂಡ ಹೌದು. ವಾಹನ ಚಲಾಯಿಸುವುದರಲ್ಲಿ ಏನಿದೆ? ಯಾರು ಬೇಕಾದರೂ ಗಾಡಿ ಬಿಡಬಹುದು ಎಂದು ನೋಡುವಾಗ ಅಂದುಕೊಳ್ಳಬಹುದು. ಆದರೆ, ವಾಹನ ಚಲಾಯಿಸುವುದು ಅಂದುಕೊಂಡಷ್ಟು ಸುಲಭ ಅಲ್ಲ. ಏಕಾಗ್ರತೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ದೃಢತೆ, ಧೈರ್ಯ, ತಾಳ್ಮೆ ಇವೆಲ್ಲಾ ಒಬ್ಬ ಉತ್ತಮ ಡ್ರೈವರ್​ಗೆ ಇರಬೇಕಾದ ಗುಣಲಕ್ಷಣಗಳು ಎನ್ನಬಹುದು.

ಇಷ್ಟೆಲ್ಲಾ ಗುಣಗಳು ಇದ್ದಾಗ ಜೊತೆಗೆ ಉತ್ತಮ ಕೌಶಲ್ಯ ಕೂಡ ಇದ್ದಾಗ ಮಾತ್ರ ಒಳ್ಳೆಯ ವಾಹನ ಚಾಲಕ ಆಗಬಹುದು. ರಸ್ತೆಯಲ್ಲಿ ನಾವು ಗಮನಿಸಬಹುದು. ಕೆಲವರು ಕೇರ್​ಲೆಸ್ ಡ್ರೈವಿಂಗ್ ಮಾಡುತ್ತಾರೆ. ಇನ್ನು ಕೆಲವರು ಕಾರ್ ಆಗಲಿ ಅಥವಾ ಬೈಕ್ ಆಗಲಿ ಬಹಳ ಜಾಗ್ರತೆಯಿಂದ ವಾಹನ ಚಲಾಯಿಸುತ್ತಾರೆ. ತಮ್ಮ ಜೀವದ ಜೊತೆಗೆ ಮತ್ತೊಬ್ಬರ ಜೀವ, ಜೀವನವನ್ನು ಕೂಡ ಉಳಿಸುತ್ತಾರೆ. ನೀವು ಈಗಾಗಲೇ ಅಪಘಾತದ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಆದರೆ, ಇಲ್ಲಿ ಒಬ್ಬ ಡ್ರೈವರ್ ತನ್ನ ಸಾಮರ್ಥ್ಯದಿಂದ ಆಗಲಿದ್ದ ಅಪಘಾತವನ್ನು ತಪ್ಪಿಸಿದ್ದಾನೆ.

ಇದು ಮಳೆಗಾಲದ ಸಮಯ. ಅಪಘಾತದ ಅಪಾಯ ತುಸು ಹೆಚ್ಚೇ ಇರುತ್ತದೆ. ಈ ಮಧ್ಯೆ, ಇಲ್ಲಿ ವಾಹನ ಚಾಲಕ ಅಪಘಾತ ತಪ್ಪಿಸಿ, ಅನಾಹುತ ಆಗುವುದನ್ನು ತಡೆದಿದ್ದಾನೆ. ವಿಡಿಯೋದಲ್ಲಿ ನೀವು ನೋಡಬಹುದು. ರಸ್ತೆ ತುಂಬೆಲ್ಲಾ ನೀರು ತುಂಬಿಕೊಂಡಿದೆ. ಆ ರಸ್ತೆಯಲ್ಲಿ ಒಂದು ಸರಕು ಸಾಗಾಣಿಕೆ ವಾಹನ ಬರುತ್ತಿದೆ. ಅದಕ್ಕೆ ಎದುರಾಗಿ ಒಂದು ಕಾರ್ ಬರುತ್ತದೆ. ಆದರೆ, ಕಾರ್ ಹಾಗೂ ಸರಕು ವಾಹನದ ನಡುವೆ ಅಪಘಾತ ಸಂಭವಿಸುವುದರ ಒಳಗಾಗಿ ಗೂಡ್ಸ್ ವಾಹನದ ಚಾಲಕ ಅಪಘಾತ ತಪ್ಪಿಸಿದ್ದಾನೆ.

ಸರಕು ಸಾಗಾಣಿಕೆ ವಾಹನ ಇನ್ನೇನು ಅಪಘಾತ ಸಂಭವಿಸುವುದರಲ್ಲಿತ್ತು. ಆದರೆ, ಆತ ಅದರಿಂದ ಪಾರಾಗಿದ್ದಾನೆ. ಅಷ್ಟೇ ಅಲ್ಲದೆ, ಎರಡು ಬಾರಿ ಗೂಡ್ಸ್ ವಾಹನ ಬೀಳುವುದರಲ್ಲಿತ್ತು. ಆದರೆ, ಚಾಲಕನ ಸಾಮರ್ಥ್ಯದಿಂದ ಹಾಗೇನು ಆಗದೆ, ವಾಹನ ನೆಟ್ಟಗೆ ಸವಾರಿ ನಡೆಸಿದೆ. ಸನ್ನಿವೇಶವನ್ನು ಸೂಕ್ತವಾಗಿ ನಿಭಾಯಿಸಿದ ವಾಹನ ಚಾಲಕ ನೆಟ್ಟಿಗರ ಪ್ರಶಂಸೆ ಪಡೆದುಕೊಂಡಿದ್ದಾನೆ.

 

View this post on Instagram

 

A post shared by Gaddiyan Wale (@gaddiyan_wale)

ಅಪಘಾತವೂ ಆಗಿಲ್ಲ. ವಾಹನಕ್ಕೆ ಯಾವ ಹಾನಿಯೂ ಸಂಭವಿಸಿಲ್ಲ ಎಂಬುದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ವಾಹನ ಚಾಲಕನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಕಮೆಂಟ್​ಗಳ ಹೊಳೆಯೇ ಹರಿದಿದೆ. ವಿಡಿಯೋ ನೋಡಿವರೆಲ್ಲಾ ಸರಕು ಸಾಗಾಣಿಕೆ ವಾಹನದ ಚಾಲಕ ಎಲ್ಲಿ ಟ್ರೈನಿಂಗ್ ಪಡೆದಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ಈ ಡ್ರೈವರ್ ನಾಸಾದಿಂದ ವಾಹನ ಚಲಾಯಿಸುವ ವಿಶೇಷ ಸ್ಕಿಲ್ ಪಡೆದು ಬಂದಿರಬೇಕು ಎಂದು ಕಮೆಂಟ್ ಮಾಡಿದ್ದಾರೆ. ವಿಡಿಯೋ ಕುತೂಹಲಕಾರಿ ಆಗಿದೆಯಾದರೂ ಇದು ಎಲ್ಲಿನದು ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ: Viral Video: ನವಿಲಿಗೆ ಕೈಯಾರೆ ಕಾಳು ತಿನ್ನಿಸಿದ ತರಕಾರಿ ಮಾರುವ ಮಹಿಳೆ; ವೈರಲ್ ವಿಡಿಯೋಗೆ ಭಾರೀ ಮೆಚ್ಚುಗೆ

ಲೈವ್​ನಲ್ಲೇ ಯಾಮಾರಿದ ದಿವ್ಯಾ ಸುರೇಶ್​; ವೈರಲ್​ ಆಯ್ತು ವಿಡಿಯೋ

(Viral Video Funny Video of vehicle Driving just missed Accident Perfect Driving Skills)

Read Full Article

Click on your DTH Provider to Add TV9 Kannada