Video: 50 ಅಡಿ ಆಳದ ಬಾವಿಗೆ ಬಿದ್ದ ಮಹಿಳೆ..; ಆಕೆಯನ್ನು ರಕ್ಷಿಸಿದ ದೃಶ್ಯ ರೋಚಕ
50 ಅಡಿ ಆಳಕ್ಕೆ ಬಿದ್ದ ಮಹಿಳೆ ಅಕ್ಷರಶಃ ಶಾಕ್ಗೆ ಒಳಗಾಗಿದ್ದರು. ಬಾವಿಯಿಂದ ಎದ್ದು ಬಂದಾದಮೇಲೆ ಕೂಡ ಅವರು ತುಂಬ ಕಷ್ಟಪಡುತ್ತಿದ್ದರು. ಪೂರ್ತಿ ದೇಹ ನಡುಗುತ್ತಿತ್ತು.
50 ಅಡಿ ಆಳದ ಬಾವಿಗೆ ಬಿದ್ದ ಮಹಿಳೆಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಈ ಭಯಾನಕ ಘಟನೆ ನಡೆದದ್ದು ಕೇರಳದ ವಯಾನಾಡಿನಲ್ಲಿ. ಮಂಗಳವಾರ ಮಹಿಳೆ ಬಾವಿಗೆ ಬಿದ್ದಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಪೊಲೀಸರು, ಅಗ್ನಿಶಾಮಕದಳದ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಧಿಕಾರಿಗಳು ಹಗ್ಗ, ದೊಡ್ಡದಾದ ಬಲೆಗಳ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.
50 ಅಡಿ ಆಳಕ್ಕೆ ಬಿದ್ದ ಮಹಿಳೆ ಅಕ್ಷರಶಃ ಶಾಕ್ಗೆ ಒಳಗಾಗಿದ್ದರು. ಬಾವಿಯಿಂದ ಎದ್ದು ಬಂದಾದಮೇಲೆ ಕೂಡ ಅವರು ತುಂಬ ಕಷ್ಟಪಡುತ್ತಿದ್ದರು. ಪೂರ್ತಿ ದೇಹ ನಡುಗುತ್ತಿತ್ತು. ಅಧಿಕಾರಿಗಳೇ ಅವರನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸಿ, ನಿಲ್ಲಲು ಸಹಾಯ ಮಾಡಿದ್ದಾರೆ. ಹಾಗೇ ಬಾವಿಗೆ ಬಿದ್ದ ಮಹಿಳೆಯನ್ನು ಅಧಿಕಾರಿಗಳು ರಕ್ಷಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
#WATCH | Kerala: Fire Department officials and locals rescued a woman after she fell into a 50-feet deep well in Wayanad (10.08) pic.twitter.com/5tG6Jq0vx3
— ANI (@ANI) August 10, 2021
ಇದನ್ನೂ ಓದಿ: ಗಡಂಗ್ ರಕ್ಕಮನ ಮೇಲೆ ಕೊಲೆ ಆರೋಪ ಇದೆ ಎಂಬುದನ್ನು ತಿಳಿಸಿಯೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸುದೀಪ್
Published On - 4:19 pm, Wed, 11 August 21