Viral Video: ಗಾಲ್ಫ್ ಆಡಲು ಮೈದಾನಕ್ಕೆ ಬಂದ ಮೂರು ತುಂಟ ಕರಡಿ ಮರಿಗಳು; ವಿಡಿಯೊ ನೋಡಿ

ಮೂರು ಕರಡಿ ಮರಿಗಳು ಗಾಲ್ಫ್ ಮೈದಾನಕ್ಕೆ ನುಗ್ಗಿ, ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ಆಟವಾಡುತ್ತಿವೆ. ಟ್ವಿಟರ್​ನಲ್ಲಿ ಕರಡಿ ಮರಿಗಳ ತುಂಟಾಟದ ವಿಡಿಯೊ ವೈರಲ್ ಆಗಿದೆ.

Viral Video: ಗಾಲ್ಫ್ ಆಡಲು ಮೈದಾನಕ್ಕೆ ಬಂದ ಮೂರು ತುಂಟ ಕರಡಿ ಮರಿಗಳು; ವಿಡಿಯೊ ನೋಡಿ
ಆಟವಾಡುತ್ತಿರುವ ಕರಡಿ ಮರಿಗಳು
Follow us
TV9 Web
| Updated By: shivaprasad.hs

Updated on: Aug 10, 2021 | 5:51 PM

ಇನ್ನೇನು ಒಲಂಪಿಕ್ಸ್ ಮುಗಿಯಿತು, ಯಾವ ಕ್ರೀಡೆ ನೋಡಬಹುದು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಉತ್ತರ. ಮನುಷ್ಯರಿಗಿಂತ ತಾವೇನು ಕಡಿಮೆ ಇಲ್ಲ ಎಂಬಂತೆ ಗಾಲ್ಫ್ ಕೋರ್ಟ್​ನಲ್ಲಿ ಆಟವಾಡುತ್ತಿರುವ ಈ ಕರಡಿ ಮರಿಗಳನ್ನು ನೋಡಿ. ಇಡೀ ಕ್ರೀಡಾಂಗಣದಲ್ಲಿ ಯಾರ ಹಂಗೂ ಇಲ್ಲದೇ ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ಆಡಿಕೊಂಡಿವೆ; ಆದರೆ ಗಾಲ್ಫ್ ಅಲ್ಲ. ತಮಗೆ ತೋಚಿದ, ತಮ್ಮದೇ ‘ಬೇಟೆ’ಯ ಆಟವನ್ನು. ಹೌದು. ಗಾಲ್ಫ್ ಕೋರ್ಟ್ ಒಂದಕ್ಕೆ ನುಗ್ಗಿದ ಮೂರು ಕರಡಿ ಮರಿಗಳು ಅಲ್ಲಿದ್ದ ಧ್ವಜದೊಂದಿಗೆ ಆಟವಾಡುತ್ತಿವೆ. ಒಂದು ಕರಡಿ ಮರಿಯಂತೂ ಆ ಧ್ವಜದ ಕಂಬದ ಮೇಲೆ ಹತ್ತುತ್ತಾ, ಇಳಿಯುತ್ತಾ, ಕಚ್ಚುತ್ತಾ ಆಟವಾಡುತ್ತಿದ್ದರೆ, ಮತ್ತೆರಡು ಮರಿಗಳು ಇದರ ಪರಿವೆಯೇ ಇಲ್ಲದೇ ತಮ್ಮಷ್ಟಕ್ಕೆ ತಾವೇ ಆಟವಾಡುತ್ತಿವೆ.

ಟ್ವಿಟರ್​ನಲ್ಲಿ ವೈರಲ್ ಆಗಿರುವ ಈ ವಿಡಿಯೊಕ್ಕೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಡ್ಯಾನಿ ಡೆರೆನಿ ಎಂಬುವವರು ಹಂಚಿಕೊಂಡ ಈ ವಿಡಿಯೊ ಈಗ ವೈರಲ್ ಆಗಿದೆ.

ಮರಿಗಳು ಆಟವಾಡುತ್ತಿರುವ ವಿಡಿಯೊ ಇಲ್ಲಿದೆ.

ನಿನ್ನೆ(ಆಗಸ್ಟ್ 9)ರಂದು ಹಂಚಿಕೊಳ್ಳಲಾದ ಈ ವಿಡಿಯೊಕ್ಕೆ ಈಗಾಗಲೇ 1.5ಲಕ್ಷಕ್ಕೂ ಅಧಿಕ ವೀಕ್ಷಣೆ ದೊರಕಿದೆ. ಹಲವು ಪ್ರಾಣಿ ಪ್ರಿಯರು ವಿಧವಿಧವಾಗಿ ಕಾಮೆಂಟ್ ಮಾಡಿದ್ದಾರೆ. ‘‘ನಾವೂ ಅದರೊಂದಿಗೆ ಆಟವಾಡಬೇಕು, ಆದರೆ ಬಹುಶಃ ಅದರ ಅಮ್ಮ ಹತ್ತಿರದಲ್ಲಿರಬಹುದು’’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, ‘‘ಆ ಧ್ವಜದೊಂದಿಗೆ ಆಟವಾಡುತ್ತಿರುವ ಮರಿ ಕರಡಿಗೆ ನಾನು ನೋಡಿದ್ದೇನೆಂದು ತಿಳಿದೇ ಇಲ್ಲ’’ ಎಂದು ನಕ್ಕಿದ್ದಾರೆ. ‘‘ಬಹಳ ಮುದ್ದಾಗಿದೆ. ನಾನೂ ಆ ಮರಿಯಂತೆ ಸ್ವಚ್ಛಂದವಾಗಿ ಮೈದಾನದಲ್ಲಿ ಆಟ ಆಡಬೇಕಿತ್ತು’’ ಎಂದು ಮತ್ತೋರ್ವರು ಬರೆದಿದ್ದಾರೆ.

ಇದನ್ನೂ ಓದಿ:

WhatsApp: ಹೊಸ ಟ್ರಿಕ್: ನಿಮ್ಮ ವಾಟ್ಸ್ಆ್ಯಪ್ ಡಿಪಿಯನ್ನು ಯಾರು ನೋಡಿದ್ದಾರೆಂದು ಹೀಗೂ ತಿಳಿಯಬಹುದು!

ಕರಾಟೆ ಬೆಲ್ಟ್​ನಿಂದ ತಾಯಿಯ ಕತ್ತು ಹಿಸುಕಿ ಕೊಂದ ಮಗಳು; ಪೊಲೀಸರಿಗೆ ಫೋನ್​ ಮಾಡಿ ಸುಳ್ಳು ಹೇಳಿ, ಸಿಕ್ಕಿಬಿದ್ದಳು

(Three baby Bears spotted on Playing in Golf Course)

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್