AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಬೈಕ್ ಹ್ಯಾಂಡಲ್​ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ 5 ಅಡಿ ಉದ್ದದ ನಾಗರಹಾವು!

ಬೈಕ್ ವೇಗವನ್ನು ಹೆಚ್ಚಿದ ತಕ್ಷಣ ವಿಚಿತ್ರವಾದ ಶಬ್ದ ಕೇಳಿಸಿದೆ. ಬಳಿಕ ಹ್ಯಾಂಡಲ್ ಕಡೆ ನೋಡಿದಾಕ್ಷಣ ಏನೋ ಅಂಟಿಕೊಂಡಂತೆ ಭಾಸವಾಗಿದೆ.

Shocking News: ಬೈಕ್ ಹ್ಯಾಂಡಲ್​ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ 5 ಅಡಿ ಉದ್ದದ ನಾಗರಹಾವು!
ಬೈಕ್ ಹ್ಯಾಂಡಲ್​ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ ದೈತ್ಯಾಕಾರದ ನಾಗರಹಾವು!
TV9 Web
| Edited By: |

Updated on:Aug 10, 2021 | 1:41 PM

Share

ಮಹಾರಾಷ್ಟ್ರದ ಪುಣೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿ ಬೈಕ್​ನಲ್ಲಿ ಮನೆಗೆ ತೆರಳುತ್ತಿರುವಾಗ ಇದ್ದಕ್ಕಿದ್ದಂತೆ ಬೈಕ್​ನಿಂದ ವಿಚಿತ್ರ ಶಬ್ದವೊಂದು ಕೇಳಿಸಲು ಪ್ರಾರಂಭಿಸಿದೆ. ತಕ್ಷಣವೇ ಬೈಕ್ ನಿಲ್ಲಿಸಿ ಹ್ಯಾಂಡಲ್ ತೆರೆದು ನೋಡುವಷ್ಟರಲ್ಲಿ ದೈತ್ಯಾಕಾರದ ನಾಗರ ಹಾವು ಅಡಗಿರುವುದು ಕಂಡು ಬಂದಿದೆ.

ಘಟನೆ ಪುಣೆಯ ಇಂದಾಪುರ ನಿಮಗಾಂವ್ ಕೆಟ್ಟಿ ಗ್ರಾಮದ ಬಳಿ ನಡೆದಿದೆ. ಮಂಗಳವಾರ ಎಂದಿನಂತೆ ಕೃಷಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಘಟನೆ ನಡೆದಿದೆ. ಬೈಕ್ ವೇಗವನ್ನು ಹೆಚ್ಚಿದ ತಕ್ಷಣ ವಿಚಿತ್ರವಾದ ಶಬ್ದ ಕೇಳಿಸಿದೆ. ಬಳಿಕ ಹ್ಯಾಂಡಲ್ ಕಡೆ ನೋಡಿದಾಕ್ಷಣ ಏನೋ ಅಂಟಿಕೊಂಡಂತೆ ಭಾಸವಾಗಿದೆ. ಬೈಕ್ ನಿಲ್ಲಿಸಿದ ತಕ್ಷಣ ನಾಗರ ಹಾವು ಅಡಿಗಿ ಕುಳಿತಿರುವುದು ಕಂಡು ಬಂದಿದೆ.

Pune black cobra

ನಾಗರ ಹಾವು

ಹಾವು ಬೈಕ್ ಹ್ಯಾಂಡಲ್​ನ ಪೈಪ್​ನಲ್ಲಿ ಸಿಲುಕಿಕೊಂಡಿರುವುದರಿಂದ ಹೊರಬರಲು ಕಷ್ಟವಾಗುತ್ತಿತ್ತು. ಹಾವನ್ನು ನೋಡಿ ಸವಾರ ಕಂಗಾಲಾಗಿದ್ದಾರೆ. ಆದರೂ ಸಹ ಧೈರ್ಯದಿಂದ ಗ್ಯಾರೇಜ್​ವರೆಗೆ ಬೈಕ್ಅನ್ನು ತಳ್ಳಿಕೊಂಡು ಸಾಗಿದ್ದಾರೆ. ಹಾವು ಹಿಡಿಯುವವರನ್ನು ಕರೆಸಿ ಬೈಕ್​ ಹೆಡ್​ಲೈಟ್​ ತೆರೆದು ಹಾವನ್ನು ಹೊರತೆಗೆಯಲಾಗಿದೆ. ಹ್ಯಾಂಡಲ್​ ಕೊಳವೆಯಲ್ಲಿ ಸಿಲುಕಿದ್ದ ಹಾವನ್ನು ಹೊರತೆಗೆಯಲಾಗಿದೆ. ಹಾವು ಸುಮಾರು 5 ಅಡಿ ಉದ್ದವಾಗಿದೆ. ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.

ಇದನ್ನೂ ಓದಿ:

5 ಅಡಿ ಉದ್ದದ ಹಾವು ಸೆರೆ ಹಿಡಿದ ಮಹಾರಾಷ್ಟ್ರದ ಬಿಜೆಪಿ ನಾಯಕ ಗಿರೀಶ್ ಮಹಾಜನ್; ಧೈರ್ಯಕ್ಕೆ ನೆಟ್ಟಿಗರ ಶ್ಲಾಘನೆ

ಕಾಳಿಂಗ ಸರ್ಪಗಳು ದುರ್ಬಲ ಹಾವುಗಳನ್ನೇ ತಮ್ಮ ಆಹಾರ ಮಾಡಿಕೊಂಡಿರುವುದು ನಿಮಗೆ ಗೊತ್ತಾ?

Published On - 1:29 pm, Tue, 10 August 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್