ಕಾಳಿಂಗ ಸರ್ಪಗಳು ದುರ್ಬಲ ಹಾವುಗಳನ್ನೇ ತಮ್ಮ ಆಹಾರ ಮಾಡಿಕೊಂಡಿರುವುದು ನಿಮಗೆ ಗೊತ್ತಾ?
‘ಒಫಿಯೋಫೇಗಸ್ ಹನ್ನಾ. ಕಾಳಿಂಗ ಸರ್ಪವೊಂದು ಕನ್ನಡಕ ಧರಿಸಿದಂತೆ ಕಾಣುವ ಮತ್ತೊಂದು ಹಾವನ್ನು ತಿನ್ನುತ್ತಿದೆ. ಈ ಸರ್ಪಗಳು ನಮಗಿಂತ ದುರ್ಬಲವಾಗಿರುವ ಹಾವುಗಳನ್ನು ತಿಂದು ಜೀವಿಸುತ್ತವೆ,’ ಎಂದು ಅವರು ಚಿತ್ರದ ಕೆಳಗೆ ಬರೆದಿದ್ದಾರೆ.
ನಿಸರ್ಗ ಅಥವಾ ಪ್ರಕೃತಿ ಸುಂದರವಾಗಿರುವಷ್ಟೇ ಕ್ರೂರಿಯೂ ಆಗಬಲ್ಲದು ಎನ್ನುವುದು ನಮಗೆಲ್ಲ ಗೊತ್ತಿರುವ ಅಂಶವೇ. ನಾವು ಕಂಡು ಅನುಭವಿಸಿರುವ ಈಗಲೂ ಕಂಡುಕೊಳ್ಳುವ ಜಾಗತಿಕ ಸತ್ಯ ಇದು. ಇಂಟರ್ನೆಟ್ನಲ್ಲಿ ನಿಯಮಿತವಾಗಿ ವಿಡಿಯೋಗಳನ್ನು ನೋಡುವವರಿಗೆ ಸೃಷ್ಟಿಯ ಕೆಲ ಕ್ರೌರ್ಯಗಳೊಂದಿಗೆ ಕೌತುಕ, ವೈಚಿತ್ರ್ಯ, ನಂಬಲಾಗದಂಥ ವಿಸ್ಮಯಗಳ ಪರಿಚಯ ಆಗಿರುತ್ತದೆ. ಪ್ರತಿನಿತ್ಯ ದಿಗಿಲು, ಸೋಜಿಗ ಮತ್ತು ದಿಗ್ಭ್ರಮೆ ಹುಟ್ಟಿಸುವಂಥ ವಿಡಿಯೋಗಳು ಇಂಟರ್ನೆಟ್ನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪಲೋಡ್ ಆಗುತ್ತಿರುತ್ತವೆ. ಈ ಕೌತುಕ ಮತ್ತು ಭೀತಿ ಹುಟ್ಟಿಸುವ ವಿಡಿಯೋಗಳ ಪಟ್ಟಿಗೆ ಮತ್ತೊಂದು ಕೆಟಗೆರಿ ಸೇರಿಕೊಂಡಿದೆ. ಕಾಳಿಂಗ ಸರ್ಪವೊಂದು ಮತ್ತೊಂದು ಸರ್ಪವನ್ನು ತಿನ್ನುತ್ತಿರುವ ಒಂದು ಫೋಟೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು ಜನರು ಭಯಮಿಶ್ರಿತ ಕುತೂಹಲದಿಂದ ಅದನ್ನು ನೋಡಿ ಕಾಮೆಂಟ್ ಮಾಡುತ್ತಿದ್ದಾರೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿಯಾಗಿರುವ ಪ್ರವೀಣ್ ಕಾಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿದ್ದಾರೆ.
‘ಒಫಿಯೋಫೇಗಸ್ ಹನ್ನಾ. ಕಾಳಿಂಗ ಸರ್ಪವೊಂದು ಕನ್ನಡಕ ಧರಿಸಿದಂತೆ ಕಾಣುವ ಮತ್ತೊಂದು ಹಾವನ್ನು ತಿನ್ನುತ್ತಿದೆ. ಈ ಸರ್ಪಗಳು ನಮಗಿಂತ ದುರ್ಬಲವಾಗಿರುವ ಹಾವುಗಳನ್ನು ತಿಂದು ಜೀವಿಸುತ್ತವೆ,’ ಎಂದು ಅವರು ಚಿತ್ರದ ಕೆಳಗೆ ಬರೆದಿದ್ದಾರೆ.
Ophiophagus hannah. A king cobra eating a spectacled cobra. They feed on lesser mortals. pic.twitter.com/LL8xzQoIww
— Parveen Kaswan (@ParveenKaswan) July 19, 2021
ಸದರಿ ಚಿತ್ರವನ್ನು ಅವರು ಶೇರ್ ಮಾಡಿದ್ದು ಕೆಲವೇ ದಿನಗಳ ಹಿಂದೆಯಾದರೂ ಈಗಾಗಲೇ 1,700 ಕ್ಕಿಂತ ಹೆಚ್ಚು ಜನ ಅದನ್ನು ಲೈಕ್ ಮಾಡಿದ್ದಾರೆ ಮತ್ತು ಈ ಸಂಖ್ಯೆ ಬೆಳೆಯುತ್ತಲೇ ಇದೆ.
ತಮ್ಮ ಪೋಸ್ಟ್ಗೆ ಮತ್ತಷ್ಟು ವಿವರಣೆಯನ್ನು ಸೇರಿಸಿರುವ ಪ್ರವೀಣ್ ಅವರು, ‘ಈ ಕಾಳಿಂಗ ಸರ್ಪದ ವೈಜ್ಞಾನಿಕ ಹೆಸರು ಒಫಿಯೋಫೇಗಸ್ ಹನ್ನಾ ಅಗಿದೆ. ಒಫಿಯೋಫೇಗಸ್ ಗ್ರೀಕ್ ಭಾಷೆಯಿಂದ ಎತ್ತಿಕೊಳ್ಳಲಾಗಿದ್ದು ಅದರರ್ಥ ಹಾವು-ತಿನ್ನುವುದು; ಮತ್ತು ಹನ್ನಾ ಗ್ರೀಕ್ ಪುರಾಣದ ಪ್ರಕಾರ ಮರಗಳಲ್ಲಿ ವಾಸಿಸುವ ದೇವತೆಯಾಗಿದೆ. ಹಾಗಾಗಿ ಕಾಳಿಂಗ ಸರ್ಪ ತನ್ನ ಹೆಸರಿಗೆ ತಕ್ಕಂತೆ ಬದುಕುತ್ತದೆ. ಗೂಡುಗಳನ್ನು ನಿರ್ಮಿಸಿಕೊಳ್ಳುವ ಏಕೈಕ ಹಾವು ಇದಾಗಿದೆ,’ ಎಂದು ಬರೆದಿದ್ದಾರೆ.
King Cobra is in the news for his king like behaviour. Another fun fact majority of their diet consist of other snakes. https://t.co/pILOjvZTGI
— Parveen Kaswan (@ParveenKaswan) July 20, 2021
ಅವರ ಪೋಸ್ಟ್ಗೆ ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ. ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಬೇರೆ ಕೆಲವರು ಅದಕ್ಕೆ ಸಂಬಂಧಿಸಿದ ಮತ್ತಷ್ಟು ವಿವರಣೆಯನ್ನು ಕೇಳಿದ್ದಾರೆ.
ಒಬ್ಬರು, ‘ಹಾವನ್ನು ತಿನ್ನುವ ಹಾವುಗಳಿರೋದು ಗೊತ್ತಿರಲಿಲ್ಲ. ವಿಷಯವನ್ನು ವಿವರಿಸಿದ್ದಕ್ಕೆ ಥ್ಯಾಂಕ್ಸ್,’ ಅಂತ ಟ್ವೀಟ್ ಮಾಡಿದ್ದರೆ ಮತ್ತೊಬ್ಬರು, ‘ಅದರ ಕಣ್ಣುಗಳನ್ನೊಮ್ಮೆ ಗಮನಿಸಿ.’ ಎಂದು ಹೇಳಿದ್ದಾರೆ, ಇನ್ನೊಬ್ಬರು, ‘ಉತ್ತಮ ಮಾಹಿತಿ,’ ಎಂದು ಹೇಳಿದ್ದಾರೆ.
Apart of Spectacled, Monocled & King…. Any other variety of cobra found in India??
— Sanjan Banerjee (@HornbillSanjan) July 19, 2021
Sir,is it also called as HAMADRYAD?
— WestManCOLOR (@arindamchakrab) July 19, 2021