Ice Cream: ಜಗತ್ತಿನ ಅತಿ ದುಬಾರಿ ಐಸ್ ಕ್ರೀಂ ಟೇಸ್ಟ್ ಮಾಡಬೇಕಾ?; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರ
Viral News | ದುಬೈನಲ್ಲಿರುವ ಸ್ಕೂಪಿ ಕೆಫೆ ಎಂಬ ಡೆಸರ್ಟ್ ಪಾರ್ಲರ್ನಲ್ಲಿ ಈ ವಿಶೇಷವಾದ ಐಸ್ ಕ್ರೀಂ ಲಭ್ಯವಿದೆ. ಈ ಐಸ್ ಕ್ರೀಂ ಅನ್ನು ತಿನ್ನಲು ಬೆಳ್ಳಿ ಚಮಚ ನೀಡಲಾಗುತ್ತದೆ.
ನೀವು ಐಸ್ಕ್ರೀಂ ಪ್ರಿಯರಾ? ಮಳೆಯಿರಲಿ, ಬೇಸಿಗೆಯಿರಲಿ, ಐಸ್ ಕ್ರೀಂ (Ice Cream) ಇದ್ದರೆ ಸಾಕು ಎನ್ನುವವರು ಸಾಕಷ್ಟು ಜನರಿದ್ದಾರೆ. ಇಡೀ ದಿನ ಐಸ್ಕ್ರೀಂ ಕೊಟ್ಟರೂ ತಿನ್ನಬಲ್ಲೆ ಎನ್ನುವವರೂ ಇದ್ದಾರೆ. ಅವರಲ್ಲಿ ನೀವೂ ಒಬ್ಬರಾಗಿದ್ದರೆ ಅಚ್ಚರಿಯೇನೂ ಇಲ್ಲ. ದಿನಕ್ಕೊಂದು ಫ್ಲೇವರ್ನ, ಹೊಸ ಹೊಸ ಬಗೆಯ ಐಸ್ಕ್ರೀಂಗಳನ್ನು ಟೇಸ್ಟ್ ಮಾಡುವವರು ನೀವಾಗಿದ್ದರೆ ಈ ಐಸ್ ಕ್ರೀಂ ಮಿಸ್ ಮಾಡಲೇಬೇಡಿ. ಯಾಕೆಂದರೆ ಇದು ಇಡೀ ವಿಶ್ವದ ದುಬಾರಿ ಐಸ್ ಕ್ರೀಂ (World Expensive Ice Cream)! ಇದರದಲ್ಲಿ ಅಂತಹ ವಿಶೇಷತೆ ಏನಿದೆ? ಎಂಬ ಕುತೂಹಲ ನಿಮಗಿದ್ದರೆ ಈ ಸುದ್ದಿ ಓದಿ…
ಜಗತ್ತಿನ ಅತಿ ದುಬಾರಿ ಬಿರಿಯಾನಿ, ಅತಿ ದುಬಾರಿ ಪಿಜ್ಜಾಗಳ ಬಗ್ಗೆಯೆಲ್ಲ ನಿಮಗೆ ತಿಳಿದಿರಬಹುದು. ಆದರೆ, ವಿಶ್ವದ ಅತಿ ದುಬಾರಿ ಐಸ್ ಕ್ರೀಂ ಯಾವುದೆಂದು ನಿಮಗೆ ಗೊತ್ತಾ? 2 ರೂ.ನಿಂದ ನಾಲ್ಕೈದು ಸಾವಿರ ರೂ.ವರೆಗೂ ಐಸ್ ಕ್ರೀಂಗಳು ಸಿಗುತ್ತವೆ. ಅದಕ್ಕಿಂತಲೂ ಹೆಚ್ಚು ಹಣ ನೀಡುವಂಥದ್ದು ಐಸ್ಕ್ರೀಂನಲ್ಲಿ ಏನಿರಲು ಸಾಧ್ಯ? ಎಂದು ಯೋಚಿಸುತ್ತಿದ್ದೀರಾ? ವಿಶ್ವದ ಅತಿ ದುಬಾರಿಯಾದ ಈ ಐಸ್ ಕ್ರೀಂ ಬೆಲೆ ಒಂದು ಸ್ಕೂಪ್ಗೆ 60,00 ರೂ.! ಇದು ಅಂತಿಂಥ ಐಸ್ಕ್ರೀಂ ಅಲ್ಲ. ಇದಕ್ಕೆ ಚಿನ್ನದ ತುಣುಕುಗಳನ್ನು ಹಾಕಲಾಗಿರುತ್ತದೆ!
ನಾವೇನೂ ತಮಾಷೆ ಮಾಡುತ್ತಿಲ್ಲ ಸ್ವಾಮಿ! ಈ ಚಿನ್ನದ ಐಸ್ಕ್ರೀಂ ಇಡೀ ಪ್ರಪಂಚದ ಅತಿ ದುಬಾರಿ ಐಸ್ಕ್ರಿಂ ಆಗಿದೆ. ನೀವೇನಾದರೂ ಒಂದು ಸ್ಕೂಪ್ಗೆ 60 ಸಾವಿರ ರೂ. ನೀಡಲು ರೆಡಿಯಾಗಿದ್ದರೆ ಈ ಐಸ್ ಕ್ರೀಂ ರುಚಿ ನೋಡಬಹುದು. ಈ ವಿಶೇಷವಾದ ಐಸ್ ಕ್ರೀಂ ದುಬೈನಲ್ಲಿ ಸಿಗುತ್ತದೆ. ಈ ಐಸ್ ಕ್ರೀಂಗೆ ಬ್ಲಾಕ್ ಡೈಮಂಡ್ ಎಂದು ಹೆಸರಿಡಲಾಗಿದೆ. ವೆನಿಲ್ಲಾ ಫ್ಲೇವರ್ನಲ್ಲಿರುವ ಈ ಐಸ್ ಕ್ರೀಂ ಮೇಲೆ 23 ಕ್ಯಾರೆಟ್ನ ತಿನ್ನಬಹುದಾದ ಚಿನ್ನದ ತುಣುಕುಗಳನ್ನು ಹಾಕಿಕೊಡಲಾಗುತ್ತದೆ. ಐಸ್ಕ್ರೀಂ ಸ್ಕೂಪ್ ಮೇಲೆ ಕೇಸರಿ ಎಸಳು, ಡ್ರೈಫ್ರೂಟ್ಗಳನ್ನು ಉದುರಿಸಿಕೊಡುವಂತೆ ಈ ಐಸ್ ಕ್ರೀಂ ಮೇಲೆ ಚಿನ್ನದ ಪೀಸ್ಗಳನ್ನು ಹಾಕಿ ಕೊಡಲಾಗುತ್ತದೆ.
View this post on Instagram
ದುಬೈನಲ್ಲಿರುವ ಸ್ಕೂಪಿ ಕೆಫೆ ಎಂಬ ಡೆಸರ್ಟ್ ಪಾರ್ಲರ್ನಲ್ಲಿ ಈ ವಿಶೇಷವಾದ ಐಸ್ ಕ್ರೀಂ ಲಭ್ಯವಿದೆ. ಈ ಐಸ್ ಕ್ರೀಂ ಅನ್ನು ತಿನ್ನಲು ಬೆಳ್ಳಿ ಚಮಚ ನೀಡಲಾಗುತ್ತದೆ. ಇಂಡಿಯನ್ ವ್ಲಾಗರ್ ಒಬ್ಬರು ಈ ಕೆಫೆಗೆ ಭೇಟಿ ನೀಡಿ, ಐಸ್ಕ್ರೀಂ ಬಗ್ಗೆ ರಿವ್ಯೂ ಹಾಕಿದ ಮೇಲೆ ಈ ದುಬಾರಿ ಐಸ್ ಕ್ರೀಂ ಬಹಳ ಫೇಮಸ್ ಆಗಿದೆ.
ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!
(World’s Most Expensive Ice Cream Topped with 23 Karat Gold Flakes what is the Ice Cream Price)