ಇವರ ಆಟೋ ರಿಕ್ಷಾದಲ್ಲಿ ಟಿವಿ, ಫ್ರಿಡ್ಜ್, ಮೊಬೈಲ್ ಜತೆಗೆ ದಾರಿ ಮಧ್ಯೆ ತಿನ್ನಲು ತಿಂಡಿಗಳೂ ಸಿಗುತ್ತವೆ! ರಿಕ್ಷಾ ಹತ್ತುವುದಾದ್ರೆ ಚೆನ್ನೈಗೆ ಹೋಗ್ಬೇಕು
ದುರೈ ಅವರು ಬಡತನದಿಂದ ಬಂದವರು. ಈ ಕಾರಣದಿಂದ ಅವರಿಗೆ ಶಿಕ್ಷಣ ಪಡೆಯಲು ಆಗಲಿಲ್ಲ. ಅವರು ದೊಡ್ಡ ಉದ್ಯಮಿಯಾಗಬೇಕು ಎಂಬ ಆಸೆ ಹೊಂದಿದ್ದರು. ಆದರೆ ಸಾಧ್ಯವಾಗಲಿಲ್ಲ. ಅದರ ಬದಲಾಗಿ ಆಟೋ ಚಾಲಕನ ಕೆಲಸ ಹಿಡಿದರು. ಅದರಲ್ಲಿಯೇ ಏನಾದರೂ ಸಾಧನೆ ಮಾಡಬೇಕೆಂಬ ಆಸೆ ಅವರಲ್ಲಿದ್ದು ವಿಶ್ವದಲ್ಲಿಯೇ ಹೆಸರುವಾಸಿಯಾಗುವಂತೆ ಮಾಡಬೇಕು ಎಂದು ನಿರ್ಧರಿಸಿದರು.
ಚೆನ್ನೈನ ಅಣ್ಣಾ ದುರೈ ಅವರು ಆಟೋ ಚಾಲಕ, ಸಾಮಾಜಿಕ ಉದ್ಯಮಿ, ಒಳ್ಳೆಯ ಮಾತುಗಾರ, ಕಾರ್ಪೊರೇಟ್ ತರಬೇತುದಾರ. ಇವರ ಹೊಸ ಹೊಸ ಪ್ಲಾನ್ಗಳು ಎಲ್ಲರಿಗೂ ಇಷ್ಟವಾಗುತ್ತಿದೆ. ವಿಶ್ವದಲ್ಲೇ ಪ್ರಸಿದ್ಧತೆ ಪಡೆಯುವಂತೆ ತಮ್ಮ ಆಟೋ ರಿಕ್ಷಾವನ್ನು ರೆಡಿ ಮಾಡಬೇಕು ಎಂಬ ಉದ್ದೇಶದಿಂದ ಹೊಸ ಪ್ರಯತ್ನವನ್ನು ಮಾಡಿದ್ದಾರೆ. ಇದೀಗ ಇವರ ಹೆಸರು ಎಲ್ಲೆಲ್ಲೂ ಕೇಳಿ ಬರುತ್ತಿದೆ.
ಅವರ ಆಟೋದಲ್ಲಿ ಮುಖಗವಸು, ಸ್ಯಾನಿಟೈಸರ್, ಪತ್ರಿಕೆ, ನಿಯತಕಾಲಿಕೆ ಜತೆಗೆ ಜನರು ಪ್ರಯಾಣ ಕೈಗೊಳ್ಳುವಾಗ ಹಸಿವಾದರೆ ತಿಂಡಿಗಳನ್ನೂ ಸಹ ಇಟ್ಟಿದ್ದಾರೆ. ಮನರಂಜನೆಗಾಗಿ ಟಿವಿ ಇದೆ. ಜತೆಗೆ ಫ್ರಿಡ್ಜ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಆಟೋ ಅಣ್ಣಾ ಎಂದು ಕರೆಯುವ ದುರೈ ಅವರ ಫೇಮಸ್ಆದ ಆಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದು ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.
ದುರೈ ಅವರು ಬಡತನದಿಂದ ಬಂದವರು. ಈ ಕಾರಣದಿಂದ ಅವರಿಗೆ ಶಿಕ್ಷಣ ಪಡೆಯಲು ಆಗಲಿಲ್ಲ. ಅವರು ದೊಡ್ಡ ಉದ್ಯಮಿಯಾಗಬೇಕು ಎಂಬ ಆಸೆ ಹೊಂದಿದ್ದರು. ಆದರೆ ಸಾಧ್ಯವಾಗಲಿಲ್ಲ. ಅದರ ಬದಲಾಗಿ ಆಟೋ ಚಾಲಕನ ಕೆಲಸ ಹಿಡಿದರು. ಅದರಲ್ಲಿಯೇ ಏನಾದರೂ ಸಾಧನೆ ಮಾಡಬೇಕೆಂಬ ಆಸೆ ಅವರಲ್ಲಿದ್ದು ವಿಶ್ವದಲ್ಲಿಯೇ ಹೆಸರುವಾಸಿಯಾಗುವಂತೆ ಮಾಡಬೇಕು ಎಂದು ನಿರ್ಧರಿಸಿದರು. ಹಾಗಾಗಿ ಹೊಸ ಹೊಸ ಯೋಚನೆ ಹುಡುಕುತ್ತಾ ಹೊಸ ಮಾರ್ಗಗಳನ್ನು ಅಳವಡಿಸಿದರು. ಗ್ರಾಹಕರು ಸುಖಕರವಾದ ಪ್ರಯಾಣ ಕೈಗೊಳ್ಳುವಂತೆ ಆಟೋದಲ್ಲಿ ಪತ್ರಿಕೆಗಳು, ಐಪ್ಯಾಡ್, ಚಾರ್ಜಿಂಗ್ ಪಾಯಿಂಟ್, ಕಾರ್ಡ್ ಸ್ವೈಪಿಂಗ್ ಮಷಿನ್, ಮುಖಗವಸು, ಸ್ಯಾನಿಟೈಸರ್, ಮಿನಿ-ಪ್ರಿಜ್ ಮತ್ತು ತಿಂಡಿಗಳನ್ನು ಇಡಲು ಪ್ರಾರಂಭಿಸಿದರು.
ನಾನು ಗ್ರಾಹಕರೊಟ್ಟಿಗೆ 9 ಭಾಷೆಗಳಲ್ಲಿ ಹಲೋ.. ಎಂದು ಮಾತನಾಡಬಲ್ಲೆ. ಪ್ರತಿ ದಿನವೂ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಜುಲೈ 15ರಂದು ಹಂಚಿಕೊಳ್ಳಲಾದ ಈ ವಿಡಿಯೋ ಕ್ಲಿಪ್ 1.4 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ನೂರಾರು ಕಾಮೆಂಟ್ಸ್ಗಳೂ ಸಹ ಬಂದಿವೆ. ಅವರ ಆಟೋ ರಿಕ್ಷಾದಲ್ಲಿನ ಸೌಲಭ್ಯಕ್ಕಾಗಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram
ಇದನ್ನೂ ಓದಿ:
ಆಟೋ ಚಾಲಕ ವಿರಳ ಕಾಯಿಲೆಯಿಂದ ಬಳಲುತ್ತಿದ್ದಾನೆ.. ಚಿಕಿತ್ಸೆಗೆ ನೆರವಾಗಿ: ನಟ ವಿನೋದ್ ರಾಜ್ ಮನವಿ
(Snacks fridge tv mobile facilities in auto rickshaw anna durai auto famous in chennai video viral)