ಆಟೋ ಚಾಲಕ ವಿರಳ ಕಾಯಿಲೆಯಿಂದ ಬಳಲುತ್ತಿದ್ದಾನೆ.. ಚಿಕಿತ್ಸೆಗೆ ನೆರವಾಗಿ: ನಟ ವಿನೋದ್‌ ರಾಜ್ ಮನವಿ

Actor Vinod Raj: ಚಾಲಕ ಶಿವಕುಮಾರ್‌ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯಯಿದೆ ಅವರಿಗೆ. ಆದ್ರೆ ಹಣಕಾಸಿನ ತೊಂದರೆಯಿಂದ ಬಳಲುತ್ತಿರುವ ಶಿವಕುಮಾರ್ ಪ್ರಥಮ ಚಿಕಿತ್ಸೆಗೆ ವಿನೋದ್ ರಾಜ್ ಸಹಾಯ ಹಸ್ತ ಚಾಚಿದ್ದಾರೆ.

ಆಟೋ ಚಾಲಕ ವಿರಳ ಕಾಯಿಲೆಯಿಂದ ಬಳಲುತ್ತಿದ್ದಾನೆ.. ಚಿಕಿತ್ಸೆಗೆ ನೆರವಾಗಿ: ನಟ ವಿನೋದ್‌ ರಾಜ್ ಮನವಿ
ಆಟೋ ಚಾಲಕ ವಿರಳ ಕಾಯಿಲೆಯಿಂದ ಬಳಲುತ್ತಿದ್ದಾನೆ.. ಚಿಕಿತ್ಸೆಗೆ ನೆರವಾಗಿ: ನಟ ವಿನೋದ್‌ ರಾಜ್ ಮನವಿ

ನೆಲಮಂಗಲ: ಸುಂಕದಕಟ್ಟೆಯ ಆಟೋ ಚಾಲಕರೊಬ್ಬರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ನೆರವಾಗುವಂತೆ ನಟ ವಿನೋದ್‌ ರಾಜ್ ಮನವಿ ಮಾಡಿಕೊಂಡಿದ್ದಾರೆ. ಸುಂಕದಕಟ್ಟೆ ನಿವಾಸಿ ಆಟೋ ಚಾಲಕ ಶಿವಕುಮಾರ್‌ಗೆ ವಿಚಿತ್ರ ಖಾಯಿಲೆಯಿದ್ದು, ರಕ್ತ ಹಾಗೂ ಕೊಬ್ಬಿನ ಸೋಂಕಿನಿಂದ ಬಳಲುತ್ತಿದ್ದಾರೆ.

ಚಾಲಕ (Auto Driver) ಶಿವಕುಮಾರ್‌ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯಯಿದೆ ಅವರಿಗೆ. ಆದ್ರೆ ಹಣಕಾಸಿನ ತೊಂದರೆಯಿಂದ ಬಳಲುತ್ತಿರುವ ಶಿವಕುಮಾರ್ ಪ್ರಥಮ ಚಿಕಿತ್ಸೆಗೆ ವಿನೋದ್ ರಾಜ್ (Vinod Raj) ಸಹಾಯ ಹಸ್ತ ಚಾಚಿದ್ದಾರೆ.

ಶಿವಕುಮಾರ್‌ ಹೆಚ್ಚಿನ ಚಿಕಿತ್ಸೆಗೆ ದಾನಿಗಳು ಸಹಕರಿಸುವಂತೆಯೂ ವಿನೋದ್ ರಾಜ್ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್ ತೋಟದಲ್ಲಿ ಶಿವಕುಮಾರ್ ಕೆಲಸಕ್ಕಿದ್ದರು.

(Actor Vinod Raj pleads for medical financial assistance to auto driver in nelamangala)