AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀಸಲಾತಿ ಬಗ್ಗೆ ಮಾತನಾಡುವುದು ನಮಗೂ ಕಷ್ಟವೇ, ಮಾತನಾಡಿದರೆ ನಾನು ದಾರಿ ತಪ್ಪಿಸಿದೆ ಅಂತಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಎಲ್ಲದಕ್ಕೂ ಕಾಂಗ್ರೆಸ್​ ವಿರುದ್ಧ ಆರೋಪಿಸುತ್ತಾರೆ. ಪೆಟ್ರೋಲ್ ಬೆಲೆ ಏರಿಕೆಗೆ ರಾಜ್ಯಗಳ ಸೆಸ್ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ­ಆಯಮ್ಮನಿಗೆ ಸೆಸ್ ಬಗ್ಗೆ ಏನಾದ್ರೂ ಗೊತ್ತಿದ್ಯಾ ಎಂದು ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.

ಮೀಸಲಾತಿ ಬಗ್ಗೆ ಮಾತನಾಡುವುದು ನಮಗೂ ಕಷ್ಟವೇ, ಮಾತನಾಡಿದರೆ ನಾನು ದಾರಿ ತಪ್ಪಿಸಿದೆ ಅಂತಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ಸಿದ್ದರಾಮಯ್ಯ
TV9 Web
| Updated By: guruganesh bhat|

Updated on:Jul 17, 2021 | 8:05 PM

Share

ಬೆಂಗಳೂರು: ಮೀಸಲಾತಿ ಬಗ್ಗೆ ಮಾತನಾಡಬೇಕಾದವರೇ ಮಾತನಾಡುತ್ತಿಲ್ಲ. ಮಂಡಲ್ ವರದಿ ವಿರೋಧಿಸಿದವರು ಈಗ ಸುಮ್ಮನಾಗಿದ್ದಾರೆ. ಮೀಸಲಾತಿ ಬಗ್ಗೆ ಮಾತನಾಡುವುದು ನಮಗೂ ಕಷ್ಟವೇ. ಮಾತನಾಡಿದರೆ ಸಿದ್ದರಾಮಯ್ಯ ದಾರಿ ತಪ್ಪಿಸಿದ ಅಂತಾರೆ, ಆದರೆ ಬಸವಣ್ಣನವರ ವಿಚಾರಧಾರೆ ಇಂದು ಪ್ರಸ್ತುತವಾಗಿವೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದ್ದಾರೆ.  

ಏಳು ವರ್ಷದಲ್ಲಿ ಮೋದಿ ಏನು ಮಾಡಿದ್ದಾರೆಂದು ಹೇಳಲಿ. ದೇಶದ ಆರ್ಥಿಕ ಪರಿಸ್ಥಿತಿ ಏನಾಗಿದೆ, ಜಿಡಿಪಿ ಏನಾಗಿದೆ? ಬಡತನ ರೇಖೆಯಲ್ಲಿರುವವರು ಮೇಲೆ ಬಂದಿದ್ದಾರಾ? ಪೆಟ್ರೋಲ್ ದರ ಪ್ರತಿ ಲೀಟರ್​ಗೆ 105 ರೂಪಾಯಿ ಆಗಿದೆ. ಡೀಸೆಲ್​ ದರ ಪ್ರತಿ ಲೀಟರ್​ಗೆ 95 ರೂಪಾಯಿ ಆಗಿದೆ. ಇವರು ಅಧಿಕಾರಕ್ಕೆ ಬಂದ ಮೇಲೆ ಎಲ್ಲವೂ ಹಾಳಾಗಿದೆ. ಆದರೆ ಎಲ್ಲದಕ್ಕೂ ಕಾಂಗ್ರೆಸ್​ ವಿರುದ್ಧ ಆರೋಪಿಸುತ್ತಾರೆ. ಪೆಟ್ರೋಲ್ ಬೆಲೆ ಏರಿಕೆಗೆ ರಾಜ್ಯಗಳ ಸೆಸ್ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ­ಆಯಮ್ಮನಿಗೆ ಸೆಸ್ ಬಗ್ಗೆ ಏನಾದ್ರೂ ಗೊತ್ತಿದ್ಯಾ ಎಂದು ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.

ಇದನ್ನೂ ಓದಿ: 

ಮುಂದಿನ ವಾರ ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್​ರನ್ನ ರಾಹುಲ್ ಗಾಂಧಿ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ

ಸುಮಲತಾ ಹೆಚ್​ಡಿಕೆ ಪುತ್ರನನ್ನ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

(Opposition leader Siddaramaiah says Its difficult for us to talk about the reservation)

Published On - 3:10 pm, Sat, 17 July 21