SSLC exam 2021: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕಡ್ಡಾಯ – ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟನೆ

SSLC exam hall ticket must: ಹಾಲ್‌ ಟಿಕೆಟ್ ಪರೀಕ್ಷೆಗೆ ಪ್ರವೇಶವಿದ್ದಂತೆ. ಹಾಗಾಗಿ ಹಾಲ್ ಟಿಕೆಟ್ ಇಲ್ಲದೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. 

SSLC exam 2021: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕಡ್ಡಾಯ - ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟನೆ
SSLC exam 2021: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕಡ್ಡಾಯ - ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟನೆ
TV9kannada Web Team

| Edited By: sadhu srinath

Jul 17, 2021 | 1:33 PM

ಬೆಂಗಳೂರು: ಹಾಲ್‌ ಟಿಕೆಟ್ ಇಲ್ಲದೆ ಪರೀಕ್ಷೆಗೆ ಅವಕಾಶ ನೀಡಲು ರಾಜ್ಯದ ಅನೇಕ ಕಡೆಗಳಿಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಪೋಷಕರು ಮನವಿ ಮಾಡಿದ್ದಾರೆ. ಆದ್ರೆ ಅವರ ಮನವಿ  ಒಪ್ಪಲು ಸಾಧ್ಯವಿಲ್ಲ.  ಹಾಲ್‌ ಟಿಕೆಟ್ ಪರೀಕ್ಷೆಗೆ ಪ್ರವೇಶವಿದ್ದಂತೆ. ಹಾಗಾಗಿ ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ​

ಇದರೊಂದಿಗೆ ಕೊನೆಯ ಘಳಿಗೆಯಲ್ಲಿ ಪರೀಕ್ಷೆಗೆ ಅವಕಾಶ ನೀಡಬಹುದು ಎಂದು ಕಾತುರದಿಂದ ಕಾಯುತ್ತಿದ್ದ, ನಾನಾ ಕಾರಣಗಳಿಂದ ಹಾಲ್​ ಟಿಕೆಟ್ ವಂಚಿತರಾದ ವಿದ್ಯಾರ್ಥಿಗಳ ಆಸೆ ಕಮರಿದೆ.

ಶಾಲಾ ಶುಲ್ಕ ಪಾವತಿ ವಿಚಾರವಾಗಿ ಕೆಲವು ಶಾಲೆಗಳು ಹಾಲ್ ಟಿಕೆಟ್ ನೀಡುತ್ತಿಲ್ಲ. ಫೀಸ್ ಕಟ್ಟಿಸಿಕೊಂಡೇ ಹಾಲ್ ಟಿಕೆಟ್ (SSLC exam hall ticket) ನೀಡುತ್ತಿವೆ. ಹೀಗಾಗಿ ಹಾಲ್ ಟಿಕೆಟ್ ಇಲ್ಲದೇ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೋಷಕರು ಮನವಿ ಮಾಡುತ್ತಿದ್ದಾರೆ. ಆದರೆ ಹಾಲ್ ಟಿಕೆಟ್ ಪರೀಕ್ಷೆಗೆ ಪ್ರವೇಶ ಇದ್ದಂತೆ. ಹಾಗಾಗಿ ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯಲು (SSLC exam 2021) ಅವಕಾಶ ಇಲ್ಲ ಎಂದು ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

SSLC ಪರೀಕ್ಷೆ ವಂಚಿತ ವಿದ್ಯಾರ್ಥಿನಿ ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ; ಆಗಸ್ಟ್​ ತಿಂಗಳ ಪರೀಕ್ಷೆಗೆ ತಯಾರಾಗಲು ಕಿವಿಮಾತು

(hall ticket for sslc exam 2021 must clarifies education minister s suresh kumar)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada