ಗನ್​ ತೋರಿಸಿ ಡಾನ್​ ಆಗ್ತೇನೆ ಎಂದು ಪೋಸ್​ ಕೊಟ್ಟವನು ಅರೆಸ್ಟ್​! ಬಿಲ್ಡಪ್​ ಕೊಟ್ಟು ಪೊಲೀಸರಿಗೆ ಅಥಿತಿಯಾದ

ಘಾಜಿಯಾಬಾದ್​ನ ರಿತಿಕ್​ ಮಲ್ಲಿಕ್,​ ಗನ್​ ಹಿಡಿದು ಪೋಸ್​ ಕೊಟ್ಟಿದ್ದಾನೆ. ಅರೆಸ್ಟ್​ ಆದ ಬಳಿಕ ರಿತಿಕ್​ನಿಂದ ಗನ್​ ವಶಪಡಿಸಿಕೊಳ್ಳಲಾಗಿದೆ. ಈ ಕುರಿತಂತೆ ಪೊಲೀಸ್​ ಅಧಿಕಾರಿ ಸಂದೀಪ್​ ಕುಮಾರ್​ ಸಿಂಗ್ ​ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ.

ಗನ್​ ತೋರಿಸಿ ಡಾನ್​ ಆಗ್ತೇನೆ ಎಂದು ಪೋಸ್​ ಕೊಟ್ಟವನು ಅರೆಸ್ಟ್​! ಬಿಲ್ಡಪ್​ ಕೊಟ್ಟು ಪೊಲೀಸರಿಗೆ ಅಥಿತಿಯಾದ
ಗನ್​ ತೋರಿಸಿ ಡಾನ್​ ಆಗ್ತೇನೆ ಎಂದು ಪೋಸ್​ ಕೊಟ್ಟವನು ಅರೆಸ್ಟ್​!
TV9kannada Web Team

| Edited By: shruti hegde

Jul 21, 2021 | 12:00 PM

ಸಾಮಾಜಿಕ ಜಾಲತಾಣಗಳು ಪ್ರತಿಭೆಗಳಿಗೆ ಒಂದೊಳ್ಳೆ ವೇದಿಕೆಯಾಗಿದೆ. ಆದರೆ ತಮಾಷೆಯಾಗಿ ಮಾಡುವ ಕೆಲವು ವಿಡಿಯೋಗಳಿಂದ ಪಜೀತಿ ಉಂಟಾಗಬಹುದು ಎಂಬುದಕ್ಕೆ ಇಲ್ಲೊಂದು ಸಾಕ್ಷಿ ಇದೆ. ಉತ್ತರ ಪ್ರದೇಶದ ಘಾಸಿಯಾಬಾದ್​ನ(Ghaziabad) ವ್ಯಕ್ತಿಯೋರ್ವ ಗನ್(Gun)​ ತೋರಿಸುತ್ತಾ ನಾನು ಡಾನ್(Don)​ ಆಗ್ತೇನೆ ಎಂದು ಬಾಲಿವುಡ್​(Bollywood) ಸ್ಟೈಲ್​ನಲ್ಲಿ ಪೋಸ್​ ಕೊಟ್ಟಿದ್ದಾನೆ. ಅಷ್ಟಕ್ಕೇ ಮುಗಿದಿಲ್ಲ ಬಿಲ್ಡ್​ಅಪ್​ ಕೊಡುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದೀಗ ಪೋಲೀಸರ ಅಥಿತಿಯಾಗಿದ್ದಾನೆ.

ಘಾಜಿಯಾಬಾದ್​ನ ರಿತಿಕ್​ ಮಲ್ಲಿಕ್,​ ಗನ್​ ಹಿಡಿದು ಪೋಸ್​ ಕೊಟ್ಟಿದ್ದಾನೆ. ಅರೆಸ್ಟ್​ ಆದ ಬಳಿಕ ರಿತಿಕ್​ನಿಂದ ಗನ್​ ವಶಪಡಿಸಿಕೊಳ್ಳಲಾಗಿದೆ. ಈ ಕುರಿತಂತೆ ಪೊಲೀಸ್​ ಅಧಿಕಾರಿ ಸಂದೀಪ್​ ಕುಮಾರ್​ ಸಿಂಗ್ ​ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ.

ಓರ್ವ ವ್ಯಕ್ತಿ ಬಂದೂಕಿನ ಮೇಲಿನ ಪ್ರೀತಿಯಿಂದ ಜೈಲಿಗೆ ಬಂದಿದ್ದಾನೆ. ಅದಾಗ್ಯೂ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಟ್ವೀಟ್​ ಮಾಡಲಾಗಿದೆ. ಮಲ್ಲಿಕ್​ ಜನರಲ್ಲಿ ಭಯವನ್ನು ಉಂಟು ಮಾಡಲು ಎರಡು ಪಿಸ್ತೂಲ್​ ಹಿಡಿದು ಡಾನ್​ ಆಗುತ್ತೇನೆ ಎಂದು ಪೋಸ್​ ಕೊಟ್ಟಿದ್ದಾರೆ. ಜತೆಗೆ ಕ್ರಿಮಿನಲ್​ ಗ್ಯಾಂಗ್ ಸೇರುತ್ತೇನೆ ಎಂದು ಹೇಳಿರುವ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

ಮುಖ್ಯಮಂತ್ರಿ ಜಗನ್​ ಮೋಹನ್ ರೆಡ್ಡಿ ವಿರುದ್ಧ 11 ಸುವೋ ಮೋಟು ಪ್ರಕರಣಗಳನ್ನು ದಾಖಲಿಸಿಕೊಂಡ ಆಂಧ್ರ ಪ್ರದೇಶ ಹೈಕೋರ್ಟ್!

100 ಕೋಟಿ ಪಡೆಯುವ ಶಾರುಖ್​ ಖಾನ್​ರನ್ನೂ ಮೀರಿಸಿದ ಅಜಯ್​ ದೇವಗನ್​; ಹಾಗಾದ್ರೆ ಅವರ ಸಂಭಾವನೆ ಎಷ್ಟು?

(Man build up to want become a don and show gun arrested after video goes viral )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada