Tokyo Olympic: ಒಲಿಂಪಿಕ್ಸ್ನಿಂದ ಮರಳಿದ ಬಳಿಕ ನಾವು ಒಟ್ಟಿಗೆ ಐಸ್ಕ್ರೀಂ ತಿನ್ನೊಣ: ಪಿವಿ ಸಿಂಧು ಜೊತೆ ಮೋದಿ ಮಾತುಕತೆ
ಪ್ರಧಾನಿ ಮೋದಿಯವರೊಂದಿಗೆ ಪಿವಿ ಸಿಂಧು ಒಲಂಪಿಕ್ಸ್ ಸಿದ್ಧತೆ ಕುರಿತು ಹಾಗೂ ಭಾರತಕ್ಕೆ ಪದಕ ತರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.
ಟೋಕಿಯೋಗೆ (Tokyo) ಹೊರಡಲು ಸಜ್ಜಾಗಿರುವ ಭಾರತದ ಪ್ರಮುಖ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ಆತ್ಮೀಯ ಮಾತುಕತೆ ನಡೆಸಿದರು. ಜನರ ನಿರೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನದ ಜೊತೆ ನಿಮ್ಮಲ್ಲಿರುವ ಶೇ. 100 ರಷ್ಟು ಪ್ರಯತ್ನ ನೀಡಿ ಎಂದು ಧೈರ್ಯ ತುಂಬಿದ್ದಾರೆ.
ಈ ವೇಳೆ ಪ್ರಮಖ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಜೊತೆ ಮೋದಿ ತುಂಬಾನೆ ಆತ್ಮೀಯವಾಗಿ ಮಾತನಾಡಿದರು. ಪಿವಿ ಸಿಂಧುಗೆ ಐಸ್ಕ್ರೀಂ ಎಂದರೆ ತುಂಬಾ ಇಷ್ಟ ಎಂದು ತಿಳಿದ ಪ್ರಧಾನಿ ಅವರು, ತಾವು ಈ ಒಲಂಪಿಕ್ಸ್ ಕ್ರೀಡೆ ಮುಗಿದ ಬಳಿಕ ಒಟ್ಟಿಗೆ ಐಸ್ಕ್ರೀಂ ತಿನ್ನೋಣ ಎಂದು ನಗುತ್ತಾ ಹೇಳಿದರು.
ಒಲಂಪಿಕ್ಸ್ ಸಿದ್ಧತೆಯಲ್ಲಿರುವ ಬ್ಯಾಡ್ಮಿಂಟನ್ ತಾರೆ ಸಿಂಧು ಡಯಟ್ ದೃಷ್ಟಿಯಿಂದ ಐಸ್ ಕ್ರೀಂ ತಿನ್ನುವುದನ್ನು ಸದ್ಯಕ್ಕೆ ತ್ಯಜಿಸಿರುವುದಾಗಿ ತಿಳಿಸಿದರು. ಇದನ್ನು ಕೇಳಿದ ಪ್ರಧಾನಿಗಳು ಟೋಕಿಯಾದಿಂದ ಮರಳಿದ ಬಳಿಕ ಭೇಟಿಯಾದಾಗ ಒಟ್ಟಿಗೆ ಐಸ್ಕ್ರೀಂ ಸವಿಯೋಣ ಎಂದಿದ್ದಾರೆ.
ಪ್ರಧಾನಿ ಮೋದಿಯವರೊಂದಿಗೆ ಪಿವಿ ಸಿಂಧು ಒಲಂಪಿಕ್ಸ್ ಸಿದ್ಧತೆ ಕುರಿತು ಹಾಗೂ ಭಾರತಕ್ಕೆ ಪದಕ ತರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭ ಕುಸ್ತಿಪಟು ವಿನೇಶ್ ಪೋಗಟ್ ಜೊತೆಗೂ ಕೆಲ ಸಮಯ ಮಾತನಾಡಿದರು. ನಿಮ್ಮ ಬಯೋಪಿಕ್ ಶೀಘ್ರದಲ್ಲೇ ನಿರೀಕ್ಷಿಸಬಹುದೇ ಎಂದು ವಿನೇಶ್ ಪೋಗಟ್ ಬಳಿ ಪಿಎಂ ಕೇಳಿದ್ದು ವಿಶೇಷವಾಗಿತ್ತು. ಅಂತೆಯೆ ಪೋಗಟ್ ಕುಟುಂಬದ ಸದಸ್ಯರೊಂದಿಗೂ ಮಾತನಾಡಿದರು. ‘ನಿಮ್ಮ ಹೆಣ್ಣುಮಕ್ಕಳಿಗೆ ಯಾವ ಬೀಸುಕಲ್ಲಿನಲ್ಲಿ ಸಿದ್ಧವಾದ ಹಿಟ್ಟಿನ ಆಹಾರ ನೀಡುತ್ತೀರಿ‘ ಎಂದು ಕೇಳಿದರು. ಕುಸ್ತಿಕ್ರೀಡೆಗೆ ತಮ್ಮ ಕುಟುಂಬದ ಹುಡುಗಿಯರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ವಿಶ್ವ ನಂ.1 ಬಿಲ್ಗಾರ್ತಿ ದೀಪಿಕಾ ಕುಮಾರಿ ಮೋದಿ ಜೊತೆ ಕೆಲವು ಮಾಹಿತಿಯನ್ನು ಹಂಚಿಕೊಂಡರು. ನನ್ನ ಕ್ರೀಡಾಜೀವನ ಆರಂಭ ದಿಂದಲೂ ಉತ್ತಮವಾಗಿತ್ತು. ಮೊದಲು ಬಿದಿರಿನ ಬಿಲ್ಲು ಬಳಸುತ್ತಿದ್ದೆ. ನಮ್ಮಿಂದ ಇತರರು ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಅಭ್ಯಾಸದ ಮೇಲೆ ಬಹಳ ಗಮನ ಹರಿಸಿದ್ದೇನೆ. ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯಿದೆ ಎಂದರು.
ಈ ವೇಳೆ ಇತರೆ ಸ್ಪರ್ಧಿಗಳೊಂದಿಗೂ ಮಾತನಾಡಿದ ಪ್ರಧಾನಿಗಳು, ಒಲಂಪಿಕ್ಸ್ನಲ್ಲಿ ನಿಮ್ಮಿಂದ ದೇಶದ ಹೆಮ್ಮೆಯನ್ನು ನಾವು ಬಯಸುತ್ತಿದ್ದೇವೆ ಎಂದು ತಿಳಿಸಿದರು.
Virat Kohli: ಕಿಂಗ್ ವಿರಾಟ್ ಕೊಹ್ಲಿ ದಾಖಲೆಯನ್ನು ಅಳಿಸಿ ಹಾಕಿದ ಪಾಕ್ ನಾಯಕ ಬಾಬರ್ ಅಜಂ
Milkha Singh : ಶೆಲ್ಫಿಗೇರುವ ಮುನ್ನ ; ಕಾಲದೊಂದಿಗೆ ಓಟದ ಮುಖಾಮುಖಿ
(PM Narendra Modi Tokyo pep talk Ice-cream for Sindhu and biopic on Vinesh)