ಎಮ್ಮೆಯ ಸಂದರ್ಶನ ಮಾಡಿದ ಪಾಕಿಸ್ತಾನದ ವರದಿಗಾರ! ಪ್ರಶ್ನೆಗೆ ಎಮ್ಮೆಯ ಉತ್ತರ ಏನಿತ್ತು? ವಿಡಿಯೋ ವೈರಲ್
ಪಾಕಿಸ್ತಾನದ ವರದಿಗಾರ ಅಮೀನ್ ಹಫೀಜ್ ಈ ಹಿಂದೆಯೂ ಎಮ್ಮೆಯ ಸಂದರ್ಶನ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಪ್ರಾಣಿಗಳ ಪ್ರತಿಕ್ರಿಯೆ ನೋಡಿ ಆಶ್ಚರ್ಯಚಕಿತರಾಗುವಂತೆ ಮಾಡಿತ್ತು. ಇದೀಗ ಮತ್ತೊಮ್ಮೆ ಅಮೀನ್ ಹಫೀಜ್ ಎಮ್ಮೆಯ ಸಂದರ್ಶನ ಮಾಡಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಲಾಹೋರ್: ಎಮ್ಮೆಯ ಸಂದರ್ಶನ ಮಾಡಿದ ಪಾಕಿಸ್ತಾನದ ವರದಿಗಾರನ(Pakistan reporter) ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡುತ್ತಿದೆ. ವರದಿಗಾರ ಪ್ರಶ್ನೆ ಕೇಳುತ್ತಿದ್ದಂತೆಯೇ ಎಮ್ಮೆ ಉತ್ತರಿಸುತ್ತಾ ಇದೆ. ಎಮ್ಮೆಯ ಪ್ರತಿಕ್ರಿಯೆ ನೆಟ್ಟಿಗರಿಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ. ಪ್ರಶ್ನೆ ಕೇಳಿದಾಕ್ಷಣ ಎಮ್ಮೆಯ(Buffalo) ರಿಯಾಕ್ಷನ್ ಇದೀಗ ವೈರಲ್ ಆಗಿದೆ.
ಪಾಕಿಸ್ತಾನದ ವರದಿಗಾರ ಅಮೀನ್ ಹಫೀಜ್ ಈ ಹಿಂದೆಯೂ ಎಮ್ಮೆಯ ಸಂದರ್ಶನ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಪ್ರಾಣಿಗಳ ಪ್ರತಿಕ್ರಿಯೆ ನೋಡಿ ಆಶ್ಚರ್ಯಚಕಿತರಾಗುವಂತೆ ಮಾಡಿತ್ತು. ಇದೀಗ ಮತ್ತೊಮ್ಮೆ ಅಮೀನ್ ಹಫೀಜ್ ಎಮ್ಮೆಯ ಸಂದರ್ಶನ ಮಾಡಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಅಮೀಜ್ ಹಫೀಜ್ ಮೈಕ್ ಹಿಡಿದು ಎಮ್ಮೆಗೆ ಪ್ರಶ್ನೆ ಕೇಳಿದ್ದಾರೆ. ನಿಮಗೆ ಈ ಲಾಹೋರ್ ಹೇಗೆ ಕಾಣಿಸುತ್ತಿದೆ? ಎಂದಿದ್ದಾರೆ. ಇದಕ್ಕೆ ಎಮ್ಮೆ ಅದರ ಭಾಷೆಯಲ್ಲಿಯೇ ಪ್ರತಿಕ್ರಿಯೆ ನೀಡಿದೆ. ಪ್ರತಿಕ್ರಿಯೆ ನೋಡಿದ ಅಮೀನ್ ಹಫೀಸ್ ಅಶ್ಚರ್ಯಗೊಂಡು.. ಎಮ್ಮೆ, ಲಾಹೋರ್ಅನ್ನು ಇಷ್ಟಪಡುತ್ತದೆ ಎಂದು ಪ್ರತಿಕ್ರಿಯಿಸಿದೆ ಎಂದು ಹೇಳಿದ್ದಾರೆ.
ಬಳಿಕ ಅಮೀನ್ ಮತ್ತೊಂದು ಪ್ರಶ್ನೆಯನ್ನು ಎಮ್ಮೆಯ ಮುಂದಿಟ್ಟಿದ್ದಾರೆ. ಲಾಹೋರ್ನ ಆಹಾರವನ್ನು ನೀವು ಇಷ್ಟಪಡುತ್ತೀರಾ? ಎಂದು ಕೇಳಿದ್ದಾರೆ. ಎಮ್ಮೆ ಅದಕ್ಕೂ ತಲೆಯಾಡಿಸಿದೆ. ಅದನ್ನು ನೋಡಿದ ವರದಿಗಾರ, ಹೌದು.. ಲಾಹೋರ್ನ ಆಹಾರ ಇಷ್ಟವಾಗುತ್ತದೆಯಂತೆ ಎಂದು ಹೇಳುತ್ತಾರೆ.
ಇದೀಗ ವರದಿಗಾರ ಮಾಡಿದ ಎಮ್ಮೆಯ ಸಂದರ್ಶನದ ವಿಡಿಯೋ ಭಾರೀ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡಲಾಗುತ್ತಿದ್ದಂತೆಯೇ 8,000ಕ್ಕೂ ಹೆಚ್ಚು ವೀಕ್ಷಣಗಳನ್ನು ಗಳಿಸಿಕೊಂಡಿದೆ. ವಾಹ್! ಎಮ್ಮೆ ಪ್ರತಿಯೊಂದನ್ನೂ ಅರ್ಥ ಮಾಡಿಕೊಂಡಿದೆ ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಕಾಮೆಟ್ಸ್ ವಿಭಾಗದಲ್ಲಿ ನೆಟ್ಟಿಗರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Now what is Eid without Amin Hafeez interviewing cattle.. pic.twitter.com/5r2sfh5Ua7
— Naila Inayat (@nailainayat) July 21, 2021
ಇದನ್ನೂ ಓದಿ:
ಆಕಳು ಕರುವಿಗೆ ಹಾಲುಣಿಸಿ ಮುದ್ದು ಮಾಡಿದ ಎಮ್ಮೆ; ಬಾಗಲಕೋಟೆಯಲ್ಲೊಂದು ಅಪರೂಪದ ಘಟನೆ
Viral Video: ಒಂದೇ ಕೈಯಲ್ಲಿ ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ಎತ್ತುವ ಈತನೇ ಕಲಿಯುಗದ ಭೀಮ!