AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಒಂದೇ ಕೈಯಲ್ಲಿ ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ಎತ್ತುವ ಈತನೇ ಕಲಿಯುಗದ ಭೀಮ!

150 ಕೆಜಿ ತೂಕದ ಎಮ್ಮೆಯನ್ನು ಸಲೀಸಾಗಿ ಎತ್ತಿಕೊಂಡಿದ್ದಾರೆ. ಒಂದಲ್ಲ ಎರಡಲ್ಲ..ಬರೋಬ್ಬರಿ 63 ಗಿನ್ನಿಸ್ ರೆಕಾರ್ಡ್​ಗಳನ್ನು ಇವರು ಮಾಡಿದ್ದಾರೆ. ಈ ಮೂಲಕ ಸಾಧನೆಯ ಪರ್ವತ ಹತ್ತಿದ್ದಾರೆ.

Viral Video: ಒಂದೇ ಕೈಯಲ್ಲಿ ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ಎತ್ತುವ ಈತನೇ ಕಲಿಯುಗದ ಭೀಮ!
ಅಬ್ಬಬ್ಬಾ..ಈ ವ್ಯಕ್ತಿಯ ಶಕ್ತಿಯೇ!
guruganesh bhat
| Edited By: |

Updated on:Mar 09, 2021 | 5:39 PM

Share

ನೀವು ಭೀಮನ ಶಕ್ತಿಯ ಕಥೆಯನ್ನು ಕೇಳಿದ್ದೀರಿ..ಶಕ್ತಿಯ ಕುರಿತು ಬಲ ಭೀಮನ ಎಂಬ ವಿಶೇಷಣವನ್ನೇ ಬಳಸುತ್ತೇವೆ. ದೈತ್ಯದೇಹಿಗಳನ್ನು ಭೀಮಕಾಯ ಎಂದು ಕರೆಯುತ್ತೇವೆ. ಹೌದಪ್ಪಾ ಹೌದು, ಭೀಮನ ಕಥೆ ನಮಗೂ ಗೊತ್ತು. ಆದರೆ ಈಗ ಭೀಮನಂತ ಇರುವವರು ಯಾರು ತಾನೇ ಸಿಗ್ತಾರೆ? ಎಂದು ಕೇಳಿದರೆ ಈ ವ್ಯಕ್ತಿಯೇ ಉತ್ತರ. ಉಕ್ರೇನ್ ಮೂಲದ ಡಿಮಿಟ್ರೋ ಖಲಾಝಿ ಎಂಬ ವ್ಯಕ್ತಿಯನ್ನೇ ಕಲಿಯುಗದ ಭೀಮ ಎನ್ನಬಹುದು. ಇವರ ಇನ್ಸ್​ಟಾಗ್ರಾಂ ಖಾತೆಯನ್ನೊಮ್ಮೆ ನೀವು ನೋಡಬೇಕು..ಅಬ್ಬಾ! ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಖಚಿತ.

ಈ ವಿಡಿಯೋದಲ್ಲಿ ಉಕ್ರೇನಿನ ಈ ವ್ಯಕ್ತಿಯ ಭೀಮಬಲವನ್ನು ವೀಕ್ಷಿಸಬಹುದು. 150 ಕೆಜಿ ತೂಕವನ್ನು ಒಂದೇ ಕೈಯಲ್ಲಿ ಎತ್ತುವ ಸಾಮರ್ಥ್ಯ ಈತನಿಗಿದೆ. ಅಲ್ಲದೇ, ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ತನ್ನ ಹೆಗಲ ಮೇಲೆ ಹೊತ್ತೊಯ್ಯುತ್ತಾನೆ. ಅವರ ಸಾಹಸವನ್ನು ನೋಡಿ ಇತರರು ಬೆಕ್ಕಸಬೆರಗಾಗಿದ್ದಾರಂತೆ.

ಅವರಿಗೆ ಭೀಮ ಎಂದು ಅಭಿದಾನ ಕೊಟ್ರೆ ಯಾರೂ ಚಕಾರ ಎತ್ತುವುದಿಲ್ಲ. ಅಷ್ಟು ಶಕ್ತಿಶಾಲಿ ಉಕ್ರೇನ್ ಮೂಲದ ಡಿಮಿಟ್ರೋ ಖಲಾಝಿ. ಅವರ ಇನ್ಸ್​ಟಾಗ್ರಾಂ ಖಾತೆಯಲ್ಲಿ ಇಂತಹ ವಿಡಿಯೋಗಳು ತುಂಬಿ ತುಳುಕುತ್ತಿವೆ. ಅಲ್ಲದೇ ಅವರಿಗೆ ಇನ್ಸ್​ಟಾಗ್ರಾಂನಲ್ಲಿ 12 ಸಾವಿರಕ್ಕಿಂತಲೂ ಹೆಚ್ಚು ಫಾಲೊವರ್ಸ್​ಗಳಿದ್ದಾರೆ.

ಇಷ್ಟೇ ಅಲ್ಲ. ಈ ಭೀಮನಿಗೆ ಸಾಹಿತ್ಯದಲ್ಲೂ ಆಸಕ್ತಿ ಇದೆಯಂತೆ. ಹಿಂದೆ ಸರ್ಕಸ್​ನಲ್ಲಿ ಕೆಲಸ ಮಾಡಿದ್ದ ಅವರು ಅಥ್ಲೀಟ್​ಗಳ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ. ಅಲ್ಲದೇ 2010ರಲ್ಲಿ ಗೋಲ್ಡನ್ ಪೆನ್ ಆಫ್ ರಷ್ಯಾ ಪ್ರಶಸ್ತಿಯೂ ಬಂದಿದೆ.

ಗಿನ್ನಿಸ್ ರೆಕಾರ್ಡನ್ನೂ ಮಾಡಿದ್ದಾರೆ.. ಒಂದಲ್ಲ ಎರಡಲ್ಲ..ಬರೋಬ್ಬರಿ 63 ಗಿನ್ನಿಸ್ ರೆಕಾರ್ಡ್​ಗಳನ್ನು ಇವರು ಮಾಡಿದ್ದಾರೆ. ಈ ಮೂಲಕ ಸಾಧನೆಯ ಪರ್ವತ ಹತ್ತಿದ್ದಾರೆ. 2013ರಲ್ಲಿ ಒಮದು ಚಲನಚಿತ್ರದಲ್ಲಿಯೂ ಇವರು ಅಭಿನಯಿಸಿದ್ದರು.

ಇದನ್ನೂ ಓದಿ: ಗಂಡ ಝೂಮ್ ಮೀಟಿಂಗ್​ನಲ್ಲಿದ್ದಾಗಲೇ ಜುಮ್ಮನೆ ಮುತ್ತಿಕ್ಕಲು ಬಂದ ಪತ್ನಿ! ನಂತರ ಆಗಿದ್ದು ಮಾತ್ರ

Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್​ ಮಾಡಿಕೊಂಡ ಮಹಿಳೆ

Published On - 5:26 pm, Tue, 9 March 21

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್