AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್​ ಮಾಡಿಕೊಂಡ ಮಹಿಳೆ

ಮಹಿಳೆಯೋರ್ವಳು ಶಾಪಿಂಗ್​ ಮಾಡಲು ಸೂಪರ್​ ಮಾರ್ಕೇಟ್​ಗೆ ಬಂದಿದ್ದಳು. ಮನೆಯಿಂದ ಹೊರಡುವ ತರಾತುರಿಯಲ್ಲಿ ಮಾಸ್ಕ್​ ಮರೆತು ಬಂದಿದ್ದಾಳೆ.

Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್​ ಮಾಡಿಕೊಂಡ ಮಹಿಳೆ
ಪ್ಯಾಂಟಿಯನ್ನು ಮಾಸ್ಕ್​ ಮಾಡಿಕೊಂಡ ಮಹಿಳೆ
ರಾಜೇಶ್ ದುಗ್ಗುಮನೆ
|

Updated on:Feb 27, 2021 | 2:20 PM

Share

ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮಾಸ್ಕ್​ ಧರಿಸುವುದನ್ನು ಎಲ್ಲ ಸರ್ಕಾರಗಳು ಕಡ್ಡಾಯ ಮಾಡಿವೆ. ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವಾದ್ಯಂತ ಮಾಸ್ಕ್​ ಧರಿಸೋದು ಕಡ್ಡಾಯವಾಗಿದೆ. ಆದರೆ, ಬಹುತೇಕರಿಗೆ ಮನೆಯಿಂದ ಹೊರ ಹೋಗುವಾಗ ಮಾಸ್ಕ್​ ಧರಿಸೋದು ಮರೆತೇ ಹೋಗುತ್ತದೆ. ದಂಡ ಬೀಳುತ್ತದೆ ಎನ್ನುವ ಕಾರಣಕ್ಕೆ ಕೆಲವರು ಹೊಸ ಮಾಸ್ಕ್​ ಖರೀದಿ ಮಾಡಿದರೆ, ಕೆಲವರು ತಮ್ಮ ಬಳಿ ಇರುವ ವೇಲ್​, ಕರ್ಚೀಫ್​ಅನ್ನೇ ಮಾಸ್ಕ್​ ಮಾಡಿಕೊಂಡ ಉದಾಹರಣೆಯೂ ಇದೆ. ಆದರೆ, ಇಲ್ಲೋರ್ವ ಮಹಿಳೆ ತನ್ನ ಒಳಉಡುಪನ್ನೇ ಮಾಸ್ಕ್​ ಮಾಡಿಕೊಂಡಿದ್ದಾರೆ! ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್​ ಆಗಿದೆ. ಈ ಘಟನೆ ನಡೆದಿರುವುದು ದಕ್ಷಿಣ ಆಫ್ರಿಕಾದಲ್ಲಿ.. ಮಹಿಳೆಯೊಬ್ಬರು ಶಾಪಿಂಗ್​ ಮಾಡಲು ಸೂಪರ್​ ಮಾರ್ಕೇಟ್​ಗೆ ಬಂದಿದ್ದರು. ಮನೆಯಿಂದ ಹೊರಡುವ ತರಾತುರಿಯಲ್ಲಿ ಮಾಸ್ಕ್​ ಮರೆತು ಬಂದಿದ್ದಾಳೆ. ಯಾರೂ ಕೇಳುವುದಿಲ್ಲ ಎನ್ನುವ ಧೈರ್ಯದಲ್ಲೇ ಆಕೆ ಸೂಪರ್​ ಮಾರ್ಕೆಟ್​ ಒಳಗೆ ತೆರಳಿದ್ದಾರೆ. ಸೂಪರ್​ ಮಾರ್ಕೆಟ್​ ಒಳಗೆ ಹೋಗುವಾಗ ಭದ್ರತಾ ಸಿಬ್ಬಂದಿ ಆಕೆಯನ್ನು ಪ್ರಶ್ನೆ ಮಾಡಿಲ್ಲ. ಹೀಗಾಗಿ, ಖರೀದಿ ಮಾಡಲು ಶುರು ಮಾಡಿದ್ದಾರೆ.

ಆದರೆ, ಸೂಪರ್​ ಮಾರ್ಕೆಟ್​ನ ಮಾಲೀಕ ಮಾಸ್ಕ್​ ಧರಿಸದಿದ್ದರೆ ನಾವು ಇಲ್ಲಿ ಖರೀದಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾನೆ. ಆಕೆ, ಪರವಾಗಿಲ್ಲ ಅಡ್ಜಸ್ಟ್​ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಅದು ಸಾಧ್ಯವೇ ಇಲ್ಲ ಎಂದು ಮಾಲೀಕ ಕಟುವಾಗಿ ಹೇಳಿದ್ದ. ಅಲ್ಲದೆ, ಮಾಸ್ಕ್​ ಧರಿಸದಿದ್ದರೆ ಶಾಪ್​ನಿಂದ ಹೊರಗೆ ಹಾಕುತ್ತೇವೆ ಎಂದೂ ಧಮ್ಕಿ ಕೂಡ ಹಾಕಿದ್ದ.

ಇದರಿಂದ ಅವಮಾನಕ್ಕೆ ಒಳಗಾದ ಮಹಿಳೆ ತಡ ಮಾಡಲಿಲ್ಲ. ಎಲ್ಲರ ಎದುರೇ ತನ್ನ ಪ್ಯಾಂಟಿಯನ್ನು ತೆಗೆದು, ಅದನ್ನು ಮಾಸ್ಕ್​ ರೀತಿಯಲ್ಲಿ ಧರಿಸಿದ್ದಾರೆ. ಇದನ್ನು ಕೆಲವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್​ನಲ್ಲಿ ಈ ವಿಡಿಯೋ ಬರೋಬ್ಬರಿ 2.2 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

ಒಳ ಉಡುಪನ್ನು ತೆಗೆದು ಮಾಸ್ಕ್ ಮಾಡಿಕೊಂಡಿದ್ದು ಇದೇ ಮೊದಲೇನಲ್ಲ. ಕಳೆದ ಮೇ ತಿಂಗಳಲ್ಲಿ ಮತ್ತೊಬ್ಬ ಮಹಿಳೆ ಉಕ್ರೇನ್​ನಲ್ಲಿ ತನ್ನ ಅಂಡರ್​ವೇರ್​ ತೆಗೆದು ಮಾಸ್ಕ್​ ಮಾಡಿಕೊಂಡಿದ್ದ ವಿಡಿಯೋ ಸಹ ಭಾರೀ ವೈರಲ್​ ಆಗಿತ್ತು.

ಇದನ್ನೂ ಓದಿ: ಸ್ವಂತ ವಾಹನದಲ್ಲಿ ಮಾಸ್ಕ್​ ಹಾಕದಿದ್ದರೆ ದಂಡ ಹಾಕುವಂತಿಲ್ಲ! ಮುಂಬೈನಲ್ಲಿ ಜಾರಿಗೆ ಬಂತು ಹೊಸ ನಿಯಮ; ಬೆಂಗಳೂರಿನಲ್ಲಿ ಯಾವಾಗ?

Published On - 2:13 pm, Sat, 27 February 21

Follow Us
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!