‘ಮಂಜು ಹೇಳಿದ ಆ ಮಾತನ್ನು ನಾನು ಎಂದಿಗೂ ಒಪ್ಪಿಕೊಳ್ಳಲ್ಲ’; ದಿವ್ಯಾ ಉರುಡುಗ

‘ಮಂಜು ಹೇಳಿದ ಆ ಮಾತನ್ನು ನಾನು ಎಂದಿಗೂ ಒಪ್ಪಿಕೊಳ್ಳಲ್ಲ’; ದಿವ್ಯಾ ಉರುಡುಗ

TV9 Web
| Updated By: ಮದನ್​ ಕುಮಾರ್​

Updated on: Aug 11, 2021 | 5:30 PM

Manju Pavagada: ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದಿವ್ಯಾ ಉರುಡುಗ ಕಠಿಣ ಪೈಪೋಟಿ ನೀಡಿದರು. ಕಡೆಗೂ ಅವರು 2ನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಂಜು ಪಾವಗಡ ವಿನ್ನರ್​​ ಆಗಿರುವ ಬಗ್ಗೆಯೂ ಅವರಿಗೆ ಖುಷಿ ಇದೆ.

ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಎಲ್ಲರನ್ನೂ ನಗಿಸುತ್ತ ವೀಕ್ಷಕರ ಮನ ಗೆದ್ದವರು ಮಂಜು ಪಾವಗಡ. ಅದೇ ಕಾರಣಕ್ಕಾಗಿ ಅವರು ಬಿಗ್​ ಬಾಸ್​ ಸೀಸನ್​ 8ರ ವಿನ್ನರ್​ ಆಗಿ ಹೊರಹೊಮ್ಮಿದರು. ಟಾಪ್​ 3 ಸ್ಥಾನದವರೆಗೂ ಅವರಿಗೆ ಪೈಪೋಟಿ ನೀಡುತ್ತಿದ್ದ ದಿವ್ಯಾ ಉರುಡುಗ​ (Divya Uruduga) ಅವರು ಕೊನೇ ಹಂತದಲ್ಲಿ ಎಲಿಮಿನೇಟ್​ ಆದರು. ದೊಡ್ಮನೆಯಲ್ಲಿ ಮಂಜು (Manju Pavagada) ಹೇಳಿದ ಒಂದು ಮಾತಿನ ಬಗ್ಗೆ ದಿವ್ಯಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. ‘ನೀನು ನನ್ನ ಫೀಮೇಲ್​ ವರ್ಷನ್​. ನಾನು ಹುಡುಗಿ ಗೆಟಪ್​ ಹಾಕಿದ್ರೆ ನಿನ್ನ ರೀತಿಯೇ ಕಾಣುತ್ತೇನೆ’ ಎಂದು ದಿವ್ಯಾಗೆ ಮಂಜು ಹೇಳುತ್ತಿದ್ದರು. ಆದರೆ ಅದಕ್ಕೆ ದಿವ್ಯಾ ಸಹಮತ ಸೂಚಿಸಿಲ್ಲ.

‘ಈ ರೀತಿಯ ಮಾತುಗಳನ್ನೆಲ್ಲ ಮಂಜುನೇ ಮೊದಲು ಶುರು ಮಾಡಿದ್ದು. ನಾನು ಅವನ ರೀತಿ ಕಾಣುತ್ತೇನೆ ಎಂಬುದನ್ನು ನಾನು ಈಗಲೂ ಒಪ್ಪಿಕೊಳ್ಳುವುದೇ ಇಲ್ಲ. ಅಂತರಂಗವೇ ಸೌಂದರ್ಯ ಎಂಬ ಮಾತನ್ನು ಒಪ್ಪಿಕೊಳ್ಳುತ್ತೇನೆ’ ಎಂದು ದಿವ್ಯಾ ಹೇಳಿದ್ದಾರೆ. ಇದಲ್ಲದೆ, ಪ್ರಶಾಂತ್​ ಸಂಬರಗಿ ಸೇರಿದಂತೆ ಇನ್ನುಳಿದ ಸ್ಪರ್ಧಿಗಳ ಜೊತೆ ತಮಗೆ ಇದ್ದ ಸ್ನೇಹದ ಬಗ್ಗೆ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ:

​‘ಟಾಪ್​ 5 ಸ್ಪರ್ಧಿಗಳಲ್ಲಿ ನಾನೂ ಇರಬೇಕಿತ್ತು, ಆದರೆ…’; ಬಿಗ್​ ಬಾಸ್​ ಬಗ್ಗೆ ದಿವ್ಯಾ ದೀರ್ಘ ಮಾತುಕತೆ

ಕನ್ನಡದಲ್ಲಿ ಶುರು ಹೊಸ ಬಿಗ್​ ಬಾಸ್​; ಅಕುಲ್​ ಬಾಲಾಜಿ, ‘ಕನ್ನಡತಿ’ ಕಿರಣ್​ ರಾಜ್​ ದೊಡ್ಮನೆಗೆ ಎಂಟ್ರಿ