AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಂಜು ಪಾವಗಡ ಗೆಲುವು ಖುಷಿ ಕೊಟ್ಟಿದೆ’; ಮನಃಪೂರ್ವಕವಾಗಿ ಹೊಗಳಿದ ಶಿವರಾಜ್​ಕುಮಾರ್​

ನಾಗಾವರದಲ್ಲಿರುವ ಶಿವರಾಜ್​ಕುಮಾರ್​ ಅವರ ಮನೆಗೆ ಇಂದು (ಆಗಸ್ಟ್​ 11) ಮಂಜು ತೆರಳಿದ್ದಾರೆ. ವಿಶೇಷ ಎಂದರೆ, ಮಂಜು ಟ್ರೋಫಿಯೊಂದಿಗೆ ತೆರಳಿ, ಶಿವರಾಜ್​ಕುಮಾರ್​ ಅವರಿಂದ ಆಶೀರ್ವಾದ ಪಡೆದಿದ್ದಾರೆ.

‘ಮಂಜು ಪಾವಗಡ ಗೆಲುವು ಖುಷಿ ಕೊಟ್ಟಿದೆ’; ಮನಃಪೂರ್ವಕವಾಗಿ ಹೊಗಳಿದ ಶಿವರಾಜ್​ಕುಮಾರ್​
TV9 Web
| Edited By: |

Updated on: Aug 11, 2021 | 3:48 PM

Share

ನಟ ಶಿವರಾಜ್​ಕುಮಾರ್​ ಅವರ ಬಗ್ಗೆ ಮಂಜು ಪಾವಗಡ ವಿಶೇಷ ಗೌರವ ಹೊಂದಿದ್ದಾರೆ. ಶಿವರಾಜ್​ಕುಮಾರ್ ಅವರ ದೊಡ್ಡ ಫ್ಯಾನ್​ ನಾನು ಎಂದು ಮಂಜು ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, ಶಿವರಾಜ್​ಕುಮಾರ್​ ಅವರಿಂದ ವಿಶೇಷ ವಿಶ್​ ಕೂಡ ಪಡೆದುಕೊಂಡಿದ್ದರು. ಈಗ ಮಂಜು ‘ಬಿಗ್​ ಬಾಸ್​ ಕನ್ನಡ ಸೀಸನ್​ 8ರ ವಿಜಯದ ಮಾಲೆ ಹಾಕಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಅವರು ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಿದ್ದಾರೆ.

ನಾಗಾವರದಲ್ಲಿರುವ ಶಿವರಾಜ್​ಕುಮಾರ್​ ಅವರ ಮನೆಗೆ ಇಂದು (ಆಗಸ್ಟ್​ 11) ಮಂಜು ತೆರಳಿದ್ದಾರೆ. ವಿಶೇಷ ಎಂದರೆ, ಮಂಜು ಟ್ರೋಫಿಯೊಂದಿಗೆ ತೆರಳಿ, ಶಿವರಾಜ್​ಕುಮಾರ್​ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಸದ್ಯ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

‘ಒಂದೇ ಒಂದು ಆಸೆ ಇದೆ. ಶಿವಣ್ಣ ಅಂದ್ರೆ ಇಷ್ಟ. ಅವರ ಕಡೆಯಿಂದ ಆಶೀರ್ವಾದ ಬೇಕು. ಇದು ನನ್ನ ಆಸೆ. ಪ್ಲೀಸ್​, ದಯವಿಟ್ಟು ಇದನ್ನು ನೆರವೇರಿಸಿ’ ಎಂದು ಮಂಜು ಬಿಗ್​ ಬಾಸ್​ ಮನೆಯಲ್ಲಿ ಕೇಳಿಕೊಂಡಿದ್ದರು. ಈ ಆಸೆಯನ್ನು ಬಿಗ್​ ಬಾಸ್​ ನೆರವೇರಿಸಿದ್ದರು.

‘ಹಾಯ್​ ಮಂಜು ಬಿಗ್​ ಬಾಸ್​ ಫಿನಾಲೆಗೆ ಬಂದಿದ್ದೀರಿ. ಇದನ್ನು ಕೇಳಿ ತುಂಬಾನೇ ಖುಷಿ ಆಯ್ತು. ಗೆದ್ದು ಬನ್ನಿ. ಎಲ್ಲರಿಗೂ ಒಳ್ಳೆಯದಾಗಲಿ. ಮಂಜು ನಿಮಗೆ ಮತ್ತೊಮ್ಮೆ ಆಲ್​ ದಿ ಬೆಸ್ಟ್​​. ಲವ್​​ ಯೂ’ ಎಂದು ವಿಶ್​​ ಮಾಡಿದ್ದರು ಶಿವಣ್ಣ. ಈ ವಿಡಿಯೋ ನೋಡಿ ಮಂಜು ಸಾಕಷ್ಟು ಖುಷಿ ಆಗಿದ್ದರು.

ಈಗ ಬಿಗ್​ ಬಾಸ್​ ಗೆದ್ದ ನಂತರದಲ್ಲಿ ಮಂಜು ಅವರು ಶಿವರಾಜ್​ಕುಮಾರ್​ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್​ಕುಮಾರ್​ ‘ಮಂಜು ಭೇಟಿ ಮಾಡಿದ್ದು ಹಾಗೂ ಅವರು ಗೆಲುವು ಖುಷಿ ಕೊಟ್ಟಿದೆ’ ಎಂದಿದ್ದಾರೆ.

ಇದನ್ನೂ ಓದಿ: ಮಂಜು ಪಾವಗಡ ಗೆದ್ದ ವಿಚಾರಕ್ಕೆ ‘ಅರವಿಯಾ’​ ಫ್ಯಾನ್ಸ್​ ಹೇಳಿದ್ದೇನು?

‘ನೀವು ಗೆದ್ದು ಬನ್ನಿ’; ಫಿನಾಲೆ ತಲುಪಿದ ಮಂಜುಗೆ ಶಿವರಾಜ್​ಕುಮಾರ್ ವಿಶೇಷ ಹಾರೈಕೆ

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ