ಮಂಜು ಪಾವಗಡ ಗೆದ್ದ ವಿಚಾರಕ್ಕೆ ‘ಅರವಿಯಾ’​ ಫ್ಯಾನ್ಸ್​ ಹೇಳಿದ್ದೇನು?

ಅರವಿಂದ್​ ಅವರು ಬೈಕ್​ ರೇಸ್ ಹಿನ್ನೆಲೆಯಿಂದ ಬಂದವರು. ಚಿತ್ರರಂಗಕ್ಕೂ ಅವರಿಗೂ ಹೆಚ್ಚು ಒಡನಾಟ ಇರಲಿಲ್ಲ. ಆದಾಗ್ಯೂ ಬಿಗ್​ ಬಾಸ್​ ಮನೆಯಲ್ಲಿ ಕೊಂಚವೂ ಹೆದರದೇ ಅರವಿಂದ್​ ಅವರು ಮುನ್ನುಗ್ಗಿದ್ದರು.

ಮಂಜು ಪಾವಗಡ ಗೆದ್ದ ವಿಚಾರಕ್ಕೆ ‘ಅರವಿಯಾ’​ ಫ್ಯಾನ್ಸ್​ ಹೇಳಿದ್ದೇನು?
ಅರವಿಂದ್​-ದಿವ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 09, 2021 | 12:18 PM

ಮಂಜು ಪಾವಗಡ ಅವರು ಕನ್ನಡ ಬಿಗ್​ ಬಾಸ್​ ಸೀಸನ್ 8ರ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಅದ್ದೂರಿ ವೇದಿಕೆ ಮೇಲೆ ಅರವಿಂದ್​ ಹಾಗೂ ಮಂಜು ನಡುವೆ ಕಿಚ್ಚ ಸುದೀಪ್​ ಅವರು ಮಂಜು ಕೈ ಎತ್ತುವ ಮೂಲಕ ವಿನ್ನರ್​ ಹೆಸರು ಘೋಷಣೆ ಮಾಡಿದ್ದಾರೆ. ಈ ವಿಚಾರ ಮಂಜು ಅವರ ಅಭಿಮಾನಿ ಬಳಗಕ್ಕೆ ಸಾಕಷ್ಟು ಖುಷಿ ನೀಡಿದೆ. ಈ ಮಧ್ಯೆ ಮಂಜು ಗೆಲುವು ‘ಅರವಿಯಾ’ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಅರವಿಂದ್​ ಅವರು ಬೈಕ್​ ರೇಸ್ ಹಿನ್ನೆಲೆಯಿಂದ ಬಂದವರು. ಚಿತ್ರರಂಗಕ್ಕೂ ಅವರಿಗೂ ಹೆಚ್ಚು ಒಡನಾಟ ಇರಲಿಲ್ಲ. ಆದಾಗ್ಯೂ ಬಿಗ್​ ಬಾಸ್​ ಮನೆಯಲ್ಲಿ ಕೊಂಚವೂ ಹೆದರದೇ ಅರವಿಂದ್​ ಅವರು ಮುನ್ನುಗ್ಗಿದ್ದರು. ಪ್ರತಿಯೊಂದು ವಿಚಾರವನ್ನೂ ಹೆಚ್ಚು ಕಾನ್ಫಿಡೆಂಟ್​ ಆಗಿ ಮಾಡುತ್ತಿದ್ದರು.

ಇನ್ನು ಅರವಿಂದ್ ಹಾಗೂ ದಿವ್ಯಾ ಅವರ ನಡುವಿನ ಪ್ರೀತಿ-ಪ್ರೇಮ ವಿಚಾರ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಳ್ಳೋಕೆ ಕಾರಣವಾಗಿತ್ತು. ಅರವಿಂದ್​ ಮತ್ತು ದಿವ್ಯಾರನ್ನು ‘ಅರವಿಯಾ’ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯೋಕೆ ಆರಂಭಿಸಿದ್ದರು. ಅವರ ಅಭಿಮಾನಿ ಬಳಗ ಹಿರಿದಾಗೋಕೆ ಇದು ಕೂಡ ಕಾರಣವಾಗಿತ್ತು.

ಸದ್ಯ, ಮಂಜು ಪಾವಗಡ ಗೆದ್ದಿರೋದು ಅರವಿಯಾ ಫ್ಯಾನ್ಸ್​ಗೆ ಬೇಸರ ತರಿಸಿದೆ. ‘ಈ ತೀರ್ಪು ಸಾಕಷ್ಟು ಬೇಸರ ಮೂಡಿಸಿದೆ’ ಎಂದು ಕೆಲವರು ಹೇಳಿದ್ದಾರೆ. ‘ಅರವಿಂದ್​ ಬಿಗ್​ ಬಾಸ್​ ಗೆಲ್ಲದೆ ಇರಬಹುದು. ಆದರೆ, ಅವರು ನಮ್ಮ ಹೃದಯ ಗೆದ್ದಿದ್ದಾರೆ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.  ‘ಇದು ನಿರಾಶಾದಾಯಕ ತೀರ್ಪು. ಅರವಿಂದ್​ ಕೆಪಿ ನಿಜವಾದ ವಿನ್ನರ್​​’ ಎಂದಿದ್ದಾರೆ ಅರವಿಯಾ ಫ್ಯಾನ್ಸ್​.

ಇನ್ನು, ಮಂಜು ಗೆಲುವಿಗೆ ಅನೇಕರು ಸಂತೋಷ ಹೊರ ಹಾಕಿದ್ದಾರೆ. ನಾವು ಅಂದುಕೊಂಡಂತೆ ಯಾವುದೇ ಸೀಸನ್​ನಲ್ಲೂ ನಡೆಯುತ್ತಿರಲಿಲ್ಲ. ಆದರೆ, ಈ ಬಾರಿ ಆ ರೀತಿ ಆಗಿಲ್ಲ. ಮಂಜು ಅವರೇ ವಿನ್​ ಆಗಿದ್ದಾರೆ ಎಂದು ಕೆಲವರು ಸಂತಸ ಕೂಡ ಮೂಡಿಸಿದ್ದಾರೆ.

ಇದನ್ನೂ ಓದಿ:Manju Pavagada: ನನ್ನ ಗೆಲುವಿಗೆ ಅರವಿಂದ್ ಸ್ಫೂರ್ತಿ ಎಂದ ಬಿಗ್ ಬಾಸ್ ಕನ್ನಡ 8 ವಿಜೇತ ಮಂಜು ಪಾವಗಡ 

Published On - 12:14 pm, Mon, 9 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ