‘ಅರವಿಂದ್ ಜತೆ ಮದುವೆ ಆಗ್ತೀರಾ? ಕನ್ನಡದಲ್ಲೇ ಉತ್ತರ ಕೊಡಿ’; ದಿವ್ಯಾಗೆ ಪಟ್ಟು ಹಿಡಿದು ಪ್ರಶ್ನೆ ಕೇಳಿದ ಮಂಜು
Divya Uruduga | Aravind KP: ‘ಬಿಗ್ ಬಾಸ್ನಲ್ಲಿ ಅರವಿಂದ್ ಜೊತೆ ನೀವು ಕ್ಲೋಸ್ ಆಗಿದ್ರಿ. ಅದು ಸ್ನೇಹನಾ ಅಥವಾ ಪ್ರೀತಿನಾ? ನೀವಿಬ್ರು ಮದುವೆ ಆಗ್ತೀರಾ?’ ಎಂದು ಮಂಜು ಪಾವಗಡ ಪ್ರಶ್ನೆ ಕೇಳಿದ್ರು. ಅದಕ್ಕೆ ದಿವ್ಯಾ ಉರುಡುಗ ನೀಡಿದ ಉತ್ತರ ಇಲ್ಲಿದೆ.
ಬಿಗ್ ಬಾಸ್ನಿಂದಾಗಿ ನಟಿ ದಿವ್ಯಾ ಉರುಡುಗ (Divya Uruduga) ಅವರ ಖ್ಯಾತಿ ಕರುನಾಡಿನಾದ್ಯಂತ ಹಬ್ಬಿದೆ. ಬಿಗ್ ಬಾಸ್ ಕನ್ನಡ ಸೀಸನ್ 8ರ ‘ಟಾಪ್ 3’ ಸ್ಪರ್ಧಿಗಳಲ್ಲಿ ಅವರೂ ಒಬ್ಬರಾಗಿದ್ದು ನಿಜಕ್ಕೂ ಮೆಚ್ಚುವಂತಹ ಪ್ರಯತ್ನ. ಕೊನೆಗೂ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ದಿವ್ಯಾ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇನ್ನು, ದೊಡ್ಮನೆಯೊಳಗೆ ಅವರು ಅರವಿಂದ್ (Aravind KP) ಜೊತೆಗಿನ ಆಪ್ತತೆಯ ಕಾರಣಕ್ಕೆ ಹೆಚ್ಚು ಹೈಲೈಟ್ ಆಗುತ್ತಿದ್ದರು. ಬಿಗ್ ಬಾಸ್ ವೀಕ್ಷಕರು ಕೂಡ ಆ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾರೆ. ದಿವ್ಯಾ ಜೊತೆ ಟಿವಿ9 ನಡೆಸಿದ ಲೈವ್ ಸಂದರ್ಶನದಲ್ಲಿ ಮಂಜು ಪಾವಗಡ (Manju Pavagada) ಅವರು ನಂಜಪ್ಪ ಎಂಬ ಅಭಿಮಾನಿ ಎಂದು ಯಾಮಾರಿಸಿದ್ದಾರೆ.
‘ಬಿಗ್ ಬಾಸ್ನಲ್ಲಿ ಅರವಿಂದ್ ಜೊತೆ ನೀವು ಕ್ಲೋಸ್ ಆಗಿದ್ರಿ. ಅದು ಸ್ನೇಹನಾ ಅಥವಾ ಪ್ರೀತಿನಾ? ನೀವಿಬ್ರು ಮದುವೆ ಆಗ್ತೀರಾ?’ ಎಂದು ನಂಜಪ್ಪ ಕೇಳಿದ್ರು. ಅದಕ್ಕೆ ದಿವ್ಯಾ ಇಂಗ್ಲಿಷ್ನಲ್ಲಿ ಉತ್ತರ ನೀಡಿದರು. ‘ನನಗೆ ಇಂಗ್ಲಿಷ್ ಬರಲ್ಲ. ಕನ್ನಡದಲ್ಲೇ ಉತ್ತರ ಕೊಡಿ’ ಎಂದು ನಂಜಪ್ಪ ಪಟ್ಟು ಹಿಡಿದರು. ಕಡೆಗೆ ಈ ನಂಜಪ್ಪ ಯಾರು ಎಂಬುದು ದಿವ್ಯಾಗೆ ಗೊತ್ತಾದಾಗ ಅವರ ಪ್ರತಿಕ್ರಿಯೆ ಮಜವಾಗಿತ್ತು.
ಇದನ್ನೂ ಓದಿ:
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್
‘ಮಂಜು ಹೇಳಿದ ಆ ಮಾತನ್ನು ನಾನು ಎಂದಿಗೂ ಒಪ್ಪಿಕೊಳ್ಳಲ್ಲ’; ದಿವ್ಯಾ ಉರುಡುಗ