ನಾನು ಬೈಸೆಕ್ಸುವಲ್​, ಮದುವೆ ಆಗೋದು ಹುಡುಗಿಯನ್ನೇ; ಅಚ್ಚರಿಯ ಹೇಳಿಕೆ ನೀಡಿದ ಬಿಗ್​ ಬಾಸ್​ ಸ್ಪರ್ಧಿ

ಮೂಸೆ ಸೋಶಿಯಲ್​ ಮೀಡಿಯಾ ಇನ್​ಫ್ಲ್ಯುನ್ಸೆರ್​. ಇವರು ಭಿನ್ನ ರೀತಿಯ ವಿಡಿಯೋ ಮೂಲಕ ಹೆಸರು ಮಾಡಿದ್ದರು. ಈಗ ಅವರು ಬಿಗ್​ ಬಾಸ್​ ಮನೆಗೆ ಬಂದ ನಂತರದಲ್ಲಿ ಎಲ್ಲರ ಗಮನ ಸೆಳೆಯೋಕೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ .  

ನಾನು ಬೈಸೆಕ್ಸುವಲ್​, ಮದುವೆ ಆಗೋದು ಹುಡುಗಿಯನ್ನೇ; ಅಚ್ಚರಿಯ ಹೇಳಿಕೆ ನೀಡಿದ ಬಿಗ್​ ಬಾಸ್​ ಸ್ಪರ್ಧಿ
Moose Jattana
Follow us
TV9 Web
| Updated By: Digi Tech Desk

Updated on:Aug 13, 2021 | 10:06 AM

ಬಿಗ್ ಬಾಸ್​ ಒಟಿಟಿ ಶೋ ಆರಂಭಗೊಂಡಿದ್ದು, ಸಾಕಷ್ಟು ಗಮನಸೆಳೆಯುತ್ತಿದೆ. ಮೊದಲ ಆರು ವಾರ ಈ ಶೋ ಕೇವಲ ಒಟಿಟಿಯಲ್ಲಿ ಮಾತ್ರ ಪ್ರಸಾರವಾಗಲಿದ್ದು, ನಂತರ ಟಿವಿಗೆ ಶಿಫ್ಟ್​ ಆಗಲಿದೆ. ಈ ಮಧ್ಯೆ ಮೂಸೆ ಜಟ್ಟಾಣ ಅವರು ತಮ್ಮ ಸೆಕ್ಸುವಾಲಿಟಿ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರತೀಕ್​ ಸೆಹಜ್​ಪಾಲ್​ ಹಾಗೂ ಮೂಸೆ ಬಿಗ್​ ಬಾಸ್​ ಮನೆಯಲ್ಲಿ ಕೂತು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಅವರು ಈ ವಿಚಾರ ಬಿಚ್ಚಿಟ್ಟಿದ್ದಾರೆ. ‘ನಾನು ಹುಡುಗರ ಕಡೆ ಹೆಚ್ಚು ಅಟ್ರ್ಯಾಕ್ಟ್​ ಆಗುತ್ತೇನೆ. ಆದರೆ, ಮದುವೆ ವಿಚಾರಕ್ಕೆ ಬರೋದಾದರೆ ನನ್ನ ಆಲೋಚನೆಯೇ ಬೇರೆ. ಯಾವುದಾದರೂ ಹುಡುಗಿ ಜತೆ ಒಳ್ಳೆಯ ಬಂಧ ಬೆಳೆದರೆ ನಾನು ಅವಳನ್ನೇ ಮದುವೆ ಆಗುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಸೆಕ್ಸುವಲ್​’ ಎಂದು ಮೂಸೆ ಹೇಳಿದ್ದಾರೆ.

ಮೂಸೆ ಸೋಶಿಯಲ್​ ಮೀಡಿಯಾ ಇನ್​ಫ್ಲ್ಯುನ್ಸೆರ್​. ಇವರು ಭಿನ್ನ ರೀತಿಯ ವಿಡಿಯೋ ಮೂಲಕ ಹೆಸರು ಮಾಡಿದ್ದರು. ಈಗ ಅವರು ಬಿಗ್​ ಬಾಸ್​ ಮನೆಗೆ ಬಂದ ನಂತರದಲ್ಲಿ ಎಲ್ಲರ ಗಮನ ಸೆಳೆಯೋಕೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ .

ಆಗಸ್ಟ್ 8ರಿಂದ ಬಿಗ್​ ಬಾಸ್ ಒಟಿಟಿ ಆರಂಭವಾಗಿದೆ. ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಸೇರಿ ಸಾಕಷ್ಟು ಜನರು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಮೊದಲ ಆರು ವಾರಗಳ ಕಾಲ ಒಟಿಟಿಗೆ ಮಾತ್ರ ಇದು ಸೀಮಿತವಾಗಿದೆ. ಒಟಿಟಿ ಶೋ ಅನ್ನು ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್​ ಜೋಹರ್​ ಅವರು ನಡೆಸಿಕೊಡುತ್ತಿದ್ದಾರೆ. ಟಿವಿಯಲ್ಲಿ ಸಲ್ಮಾನ್​ ಖಾನ್​ ಅವರೇ ಶೋ ನಡೆಸಿಕೊಡಲಿದ್ದಾರೆ. ಇದು ಬಿಗ್​ ಬಾಸ್​ 15ನೇ ಸೀಸನ್​ ಆಗಿದೆ. ಕನ್ನಡ ಬಿಗ್​ ಬಾಸ್​ ಸೀಸನ್​ 8 ಇತ್ತೀಚೆಗಷ್ಟೇ ಪೂರ್ಣಗೊಂಡಿತ್ತು. ಮಂಜು ಪಾವಗಡ ಅವರು ವಿನ್ನರ್​ ಆಗಿ ಹೊರ ಹೊಮ್ಮಿದ್ದರು. ಇದಾದ ಬೆನ್ನಲ್ಲೇ ಹಿಂದಿ ಬಿಗ್​ ಬಾಸ್​  ಆರಂಭಗೊಂಡಿದೆ.

ಇದನ್ನೂ ಓದಿ: ಕನ್ನಡ ಮಿನಿ ಬಿಗ್​ ಬಾಸ್​ ಬಗ್ಗೆ ಹೊಸ ಅಪ್​ಡೇಟ್​; ನೀವಂದುಕೊಂಡಂತಿರಲ್ಲ ಸ್ಪರ್ಧಿಗಳು

Published On - 7:13 am, Fri, 13 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ