‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಸ್​ಪಿಬಿ ಧ್ವನಿ; ಭಾವುಕರಾದ ಪುತ್ರ ಚರಣ್​

ಎಸ್.ಪಿ. ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಈಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಹೊಸ ಸೀಸನ್​ನಲ್ಲಿ ರಾಜೇಶ್ ಕೃಷ್ಣನ್, ವಿ. ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಕಾರ್ಯಕ್ರಮದ ತೀರ್ಪುಗಾರರಾಗಿ ಇರಲಿದ್ದಾರೆ.

‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಸ್​ಪಿಬಿ ಧ್ವನಿ; ಭಾವುಕರಾದ ಪುತ್ರ ಚರಣ್​
Follow us
| Updated By: ಸುಷ್ಮಾ ಚಕ್ರೆ

Updated on:Aug 13, 2021 | 1:37 PM

ಎಸ್​.ಪಿ. ಬಾಲಸುಬ್ರಹ್ಮಣ್ಯಂ​ ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದ  ‘ಎದೆ ತುಂಬಿ ಹಾಡುವೆನು’ ಸಂಗೀತ  ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಲೆಂಟ್​ಗಳಿಗೆ ಇದು ವೇದಿಕೆ ಆಗಿತ್ತು. ಈಗ ಕಲರ್ಸ್​ ಕನ್ನಡ ವಾಹಿನಿ ಈ ಶೋನ ಹೊಸ ಸೀಸನ್​ ಆರಂಭಿಸುತ್ತಿದೆ. ಇದೇ ಆಗಸ್ಟ್​ 14ರಿಂದ ಈ ರಿಯಾಲಿಟಿ ಶೋ ಎಪಿಸೋಡ್​ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ತೀರ್ಪುಗಾರರಾಗಿ ಎಸ್‌ಪಿಬಿ ಅವರ ಪುತ್ರ ಎಸ್.ಪಿ. ಚರಣ್ ಇರುತ್ತಾರೆ ಅನ್ನೋದು ವಿಶೇಷ. ಈಗ ಕಲರ್ಸ್​ ಕನ್ನಡ ವಾಹಿನಿ ವಿಶೇಷ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಎಸ್​​ಪಿಬಿ ಧ್ವನಿ ಕೇಳಿ ಚರಣ್​ ಅತ್ತಿದ್ದಾರೆ.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಈಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಹೊಸ ಸೀಸನ್​ನಲ್ಲಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಕಾರ್ಯಕ್ರಮದ ತೀರ್ಪುಗಾರರಾಗಿ ಇರಲಿದ್ದಾರೆ. ಈ ಕಾರ್ಯಕ್ರಮದ ಮೇಲೆ ವೀಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ.

ಎಸ್​ಪಿಬಿ ಅವರು ‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ’ ಹಾಡನ್ನು ಹಾಡಿದ್ದರು. ಅಂದು ಪ್ರಸಾರವಾಗುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ವೇದಿಕೆ ಮೇಲೂ ಅವರ ಕಂಠದಿಂದ ಈ ಹಾಡು ಮೊಳಗಿತ್ತು. ಈಗ ಅವರ ಮಗ ಚರಣ್​, ಹೊಸ ಸೀಸನ್​ನಲ್ಲಿ ಈ ಹಾಡನ್ನು ಹಾಡಿದ್ದಾರೆ. ಹಾಡು ಮುಗಿದ ನಂತರದಲ್ಲಿ ಮಾತನಾಡಿರುವ ಚರಣ್​, ‘ಎಲ್ಲೆಲ್ಲಿ ಸಂಗೀತ ಇರುತ್ತದೆಯೋ ಅಲ್ಲಿ ನಮ್ಮ ತಂದೆ ಇರುತ್ತಾರೆ. ಅವರೆಲ್ಲಿ ಇರುತ್ತಾರೋ ನಾನು ಅಲ್ಲಿರ್ತೀನಿ’ ಎಂದಿದ್ದಾರೆ.

ಈ ವೇಳೆ ಎಸ್​ಪಿಬಿ ಅವರ ಹಳೆಯ ವಾಯ್ಸ್​ನೋಟ್​ ಹಾಕಲಾಗಿದೆ. ‘ಚರಣ್​ ನಿನ್ನೊಂದಿಗೆ ನಾನು ಸದಾ ಇರ್ತೀನಿ. ಅದು ನಿನಗೆ ಗೊತ್ತಿರೋ ವಿಷಯ. ಕಾರ್ಯಕ್ರಮ ಆನಂದಿಸು. ತುಂಬಾ ಸೊಗಸಾಗಿದೆ. ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ’ ಎಂದು ಎಸ್​ಪಿಬಿ ಧ್ವನಿಯಲ್ಲಿ ಕೇಳಿ ಬಂದಿದೆ. ಈ ಧ್ವನಿ ಕೇಳುತ್ತಿದ್ದಂತೆ ಚರಣ್​ ಭಾವುಕರಾದರು.

ಈಗಾಗಲೇ ಆಡಿಷನ್ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್​ 14ರಂದು ಮೊದಲ ಎಪಿಸೋಡ್​ ಪ್ರಸಾರವಾಗಲಿದೆ.

ಇದನ್ನೂ ಓದಿ: SPB Birth Anniversary: ಪ್ರೀತಿಯ ಎಸ್​ಪಿಬಿ ಸರ್, ಎದೆ ತುಂಬಿ ಹಾಡಲು ನೀವು ಮತ್ತೆ ಹುಟ್ಟಿಬರಬೇಕು

ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ‘ನಮ್ಮನೆ ಯುವರಾಣಿ’ ಅಂಕಿತಾ; ಇದು ಫ್ಯಾನ್ಸ್​ಗೆ ಖುಷಿಯಾಗೋ ವಿಚಾರ

Published On - 1:22 pm, Fri, 13 August 21

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು