AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿನಿ ಬಿಗ್​ ಬಾಸ್​ ನಿರೂಪಕರು ಯಾರು? ಸುದೀಪ್​ ಅಭಿಮಾನಿಗಳಿಗೆ ಇದು ಖುಷಿಯ ವಿಚಾರ

ಬಿಗ್​ ಬಾಸ್​ ಮಿನಿ ಸೀಸನ್​ ಕೆಲವೇ ದಿನಗಳ ಕಾಲ ನಡೆಯಲಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಕೇವಲ ಹೊರಗಿನಿಂದ ಬಿಗ್​ ಬಾಸ್​ ಮನೆ ನೋಡುತ್ತಿದ್ದ ಸೀರಿಯಲ್​ ಕಲಾವಿದರಿಗೆ ಈಗ ಬಿಗ್​ ಬಾಸ್​ ಮನೆ ಒಳಗೆ ಕಾಲಿಡುವ ಅವಕಾಶ ಸಿಕ್ಕಿದೆ.

ಮಿನಿ ಬಿಗ್​ ಬಾಸ್​ ನಿರೂಪಕರು ಯಾರು? ಸುದೀಪ್​ ಅಭಿಮಾನಿಗಳಿಗೆ ಇದು ಖುಷಿಯ ವಿಚಾರ
ಸುದೀಪ್​
TV9 Web
| Edited By: |

Updated on: Aug 14, 2021 | 7:22 AM

Share

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಂಡ ಬೆನ್ನಲ್ಲೇ ಮಿನಿ ಬಿಗ್​ ಬಾಸ್​ ಆರಂಭಕ್ಕೆ ಕಲರ್ಸ್​ ಕನ್ನಡ ವಾಹಿನಿ ಸಿದ್ಧತೆ ನಡೆಸಿದೆ. ಈಗಾಗಲೇ ಕಲರ್ಸ್​ ಕನ್ನಡ ವಾಹಿನಿ ಸೀರಿಯಲ್​ನಲ್ಲಿ ನಟಿಸುತ್ತಿರುವ ಕಲಾವಿದರು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಈಗ ವೀಕೆಂಡ್​ನಲ್ಲಿ ಈ ಎಪಿಸೋಡ್​ ನಡೆಸಿ ಕೊಡೋರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬಿಗ್​ ಬಾಸ್​ ಮಿನಿ ಸೀಸನ್​ ಕೆಲವೇ ದಿನಗಳ ಕಾಲ ನಡೆಯಲಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಕೇವಲ ಹೊರಗಿನಿಂದ ಬಿಗ್​ ಬಾಸ್​ ಮನೆ ನೋಡುತ್ತಿದ್ದ ಸೀರಿಯಲ್​ ಕಲಾವಿದರಿಗೆ ಬಿಗ್​ ಬಾಸ್​ ಮನೆ ಒಳಗೆ ಕಾಲಿಡುವ ಅವಕಾಶ ಸಿಕ್ಕಿದೆ. ಕೆಲವೇ ದಿನಗಳ ಕಾಲ ಹೊರ ಜಗತ್ತಿನ ಸಂಪರ್ಕ ತೊರೆದು ಧಾರಾವಾಹಿ ಕಲಾವಿದರು ಬಿಗ್​ ಬಾಸ್​ ಮನೆ ಒಳಗೆ ಹೋಗಿದ್ದಾರೆ. ಶನಿವಾರ ಹಾಗೂ ಭಾನುವಾರ ಗ್ರ್ಯಾಂಡ್​ ಓಪನಿಂಗ್​ ಕಾರ್ಯಕ್ರಮ ಪ್ರಸಾರವಾಗಲಿದೆ.

ಹಾಗಾದರೆ, ಮಿನಿ ಬಿಗ್​ ಬಾಸ್​ ನಡೆಸಿ ಕೊಡುವವರು ಯಾರು? ಇದಕ್ಕೂ ಉತ್ತರ ಇದೆ. ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಅವರೇ ಮಿನಿ ಸೀಸನ್​ ನಡೆಸಿಕೊಡಲಿದ್ದಾರಂತೆ. ಹೀಗೊಂದು ಸುದ್ದಿ ಎಲ್ಲ ಕಡೆಗಳಲ್ಲೂ ಹರಿದಾಡಿದೆ.

ಕಿಚ್ಚ ಸುದೀಪ್​ ಅವರು 8ಸೀಸನ್​ಗಳನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟಿದ್ದಾರೆ. ಅವರ ನಿರೂಪಣೆಗೆ ಫಿದಾ ಆಗದವರಿಲ್ಲ. ಅವರ ಮಾತಿನ ಶೈಲಿ, ಅವರು ಹಾಕೋ ಬಟ್ಟೆ, ಕ್ಲಾಸ್​ ತೆಗೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತದೆ. ಇದೇ ಕಾರಣಕ್ಕೆ, ಬಿಗ್​ ಬಾಸ್​ ನೋಡುವ ಅನೇಕರಿದ್ದಾರೆ. ಮಿನಿ ಬಿಗ್​ ಬಾಸ್​ ಕೂಡ ಸುದೀಪ್​ ಅವರೇ ನಡೆಸಿದರೆ ವೀಕ್ಷಕರನ್ನು ಹೆಚ್ಚು ಸೆಳೆಯಬಹುದು ಎನ್ನುವ ಆಲೋಚನೆ ವಾಹಿನಿಯದ್ದು. ಹೀಗಾಗಿ, ಸುದೀಪ್​ಗೆ ಈ ಜವಾಬ್ದಾರಿ ನೀಡಲಾಗಿದೆ.

ಈ ಮಿನಿ ಬಿಗ್​ ಬಾಸ್​ ಹೇಗಿರುತ್ತದೆ? ಅದರ ರೂಪುರೇಷೆ ಏನು ಎಂಬುದನ್ನು ಕಲರ್ಸ್​ ಕನ್ನಡ ವಾಹಿನಿ ಬಿಟ್ಟುಕೊಟ್ಟಿಲ್ಲ. ವೇದಿಕೆ ಮೇಲೆ ಕಿಚ್ಚ ಸುದೀಪ್​ ಇರುತ್ತಾರಾ? ಎಂಬಿತ್ಯಾದಿ ಪ್ರಶ್ನೆಗೆ ಶನಿವಾರ (ಆಗಸ್ಟ್​ 14) ಉತ್ತರ ಸಿಗಲಿದೆ.

ಇದನ್ನೂ ಓದಿ:

ನಾನು ಬೈಸೆಕ್ಸುವಲ್​, ಮದುವೆ ಆಗೋದು ಹುಡುಗಿಯನ್ನೇ; ಅಚ್ಚರಿಯ ಹೇಳಿಕೆ ನೀಡಿದ ಬಿಗ್​ ಬಾಸ್​ ಸ್ಪರ್ಧಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ