ಗಜಪಡೆಯ ಗಮ್ಮತ್ತು: ಆನೆಗಳು ತಮ್ಮ ಮರಿಗಳಿಗೆ ಜಾರುಬಂಡಿ ಆಟ ಕಲಿಸುವುದನ್ನು ನೋಡಿದ್ದೀರಾ?
ಮರಿಗಳು ಜಾರುಬಂಡಿ ಆಡುವುದನ್ನು ನೋಡಿ ದೊಡ್ಡ ಆನೆಗಳಿಗೂ ಜಾರುವ ಆಸೆಯಾಗುವುದು ಆ ವಿಡಿಯೋದಲ್ಲಿ ಅತ್ಯದ್ಭುತವಾಗಿ ಸೆರೆಯಾಗಿದೆ. ಅರಣ್ಯಾಧಿಕಾರಿ ಸುಧಾ ರಾಮನ್ ಎಂಬುವವರು ಶೇರ್ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಿನ್ನೆ (ಆಗಸ್ಟ್ 12) ವಿಶ್ವ ಆನೆಗಳ ದಿನದ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಆನೆಗಳದ್ದೇ ದರ್ಬಾರು ಎನ್ನುವಂತಾಗಿತ್ತು. ಆನೆಗಳ ಕುರಿತಾದ ಹಲವು ಅಪರೂಪದ ಸಂಗತಿಗಳನ್ನು, ವಿಸ್ಮಯಕಾರಿ ವಿಚಾರಗಳನ್ನು ಎಲ್ಲರೂ ಹಂಚಿಕೊಂಡಿದ್ದು ಗಮನ ಸೆಳೆದಿತ್ತು. ಅದರಲ್ಲಿ ಕೆಲ ವಿಡಿಯೋಗಳು ಭಾರೀ ವೈರಲ್ ಆಗಿದ್ದು ಎಲ್ಲೆಡೆ ಹರಿದಾಡುತ್ತಿವೆ. ಅದರಲ್ಲೂ ಅರಣ್ಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಆನೆಗಳ ಫ್ಯಾಮಿಲಿ ವಿಡಿಯೋ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಅರಣ್ಯದಲ್ಲಿ ಆನೆಗಳ ಕುಟುಂಬ ಗಮ್ಮತ್ತಾಗಿ ಆಟ ಆಡುತ್ತಿರುವ ವಿಡಿಯೋವನ್ನು ಅರಣ್ಯಾಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆನೆಗಳು ಕುಟುಂಬ ಸಮೇತವಾಗಿ ಜಾರು ಬಂಡಿ ಆಟ ಆಡುವ ದೃಶ್ಯವನ್ನೊಳಗೊಂಡ ವಿಡಿಯೋ ಅದಾಗಿದ್ದು, ಒಂದರ ಹಿಂದೆ ಮತ್ತೊಂದು ಮರಿಗಳ ಜಾರುಬಂಡಿ ಆಟ ಕಣ್ಣಿಗೆ ಮುದ ನೀಡುವಂತಿದೆ. ಕೇವಲ ಮರಿಗಳು ಮಾತ್ರವಲ್ಲದೇ ದೊಡ್ಡ ಆನೆಗಳೂ ಜಾರುಬಂಡಿ ಆಡಿರುವುದು ಅವುಗಳ ತುಂಟಾಟಕ್ಕೆ ಸಾಕ್ಷಿಯಾಗಿದೆ.
ಮರಿಗಳು ಜಾರುಬಂಡಿ ಆಡುವುದನ್ನು ನೋಡಿ ದೊಡ್ಡ ಆನೆಗಳಿಗೂ ಜಾರುವ ಆಸೆಯಾಗುವುದು ಆ ವಿಡಿಯೋದಲ್ಲಿ ಅತ್ಯದ್ಭುತವಾಗಿ ಸೆರೆಯಾಗಿದೆ. ಅರಣ್ಯಾಧಿಕಾರಿ ಸುಧಾ ರಾಮನ್ ಎಂಬುವವರು ಶೇರ್ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 24 ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಕರನ್ನು ಗಿಟ್ಟಿಸಿಕೊಂಡಿದೆ.
ಇದನ್ನೂ ಓದಿ:
World Elephant Day 2021: ವಾವ್! ತಮ್ಮ ದಿನವನ್ನು ಆಚರಿಸಲು 1300 ಕಿ.ಮೀ ನಡೆದು ತವರಿಗೆ ಬಂದ ಆನೆಗಳು