Jaggesh: ಶೂಟಿಂಗ್​ ವೇಳೆ ಜಗ್ಗೇಶ್​ ಮೈಮೇಲಿತ್ತು ನಿಜವಾದ ಹಾವು; ಭಯದಲ್ಲಿ ಬಾಯಿಗೆ ಬಂದಂತೆ ಡೈಲಾಗ್​ ಹೇಳಿದ್ದ ನವರಸ ನಾಯಕ

ಇಂದು ನಾಗರ ಪಂಚಮಿ. ಈ ಹಬ್ಬದಂದು ಅಭಿಮಾನಿಯೋರ್ವ ಜಗ್ಗೇಶ್​ ನಟನೆಯ ‘ಬೇಡ ಕೃಷ್ಣ ರಂಗಿನಾಟ' ಚಿತ್ರದ ದೃಶ್ಯ ಹಂಚಿಕೊಂಡಿದ್ದರು. ಅದರ ಶೂಟಿಂಗ್​ ನೆನಪನ್ನು ಜಗ್ಗೆಶ್ ಬಿಚ್ಚಿಟ್ಟಿದ್ದಾರೆ.

Jaggesh: ಶೂಟಿಂಗ್​ ವೇಳೆ ಜಗ್ಗೇಶ್​ ಮೈಮೇಲಿತ್ತು ನಿಜವಾದ ಹಾವು; ಭಯದಲ್ಲಿ ಬಾಯಿಗೆ ಬಂದಂತೆ ಡೈಲಾಗ್​ ಹೇಳಿದ್ದ ನವರಸ ನಾಯಕ
ನಟ ಜಗ್ಗೇಶ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 13, 2021 | 3:13 PM

ನಟ ಜಗ್ಗೇಶ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್​. ಅಭಿಮಾನಿಗಳು ಕೇಳುವ ಪ್ರತಿ ಪ್ರಶ್ನೆಗೂ ಅವರ ಕಡೆಯಿಂದ ಉತ್ತರ ಸಿಗುತ್ತದೆ. ಅಭಿಮಾನಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿರೋಕೆ ಅವರು ಟ್ವಿಟರ್​ಅನ್ನು​ ಹೆಚ್ಚು ಬಳಕೆ ಮಾಡುತ್ತಾರೆ. ಇಂದು ನಾಗರ ಪಂಚಮಿ. ಈ ಹಬ್ಬದಂದು ಅಭಿಮಾನಿಯೋರ್ವ ಜಗ್ಗೇಶ್​ ನಟನೆಯ ‘ಬೇಡ ಕೃಷ್ಣ ರಂಗಿನಾಟ’ ಚಿತ್ರದ ದೃಶ್ಯ ಹಂಚಿಕೊಂಡಿದ್ದರು. ಅದರ ಶೂಟಿಂಗ್​ ನೆನಪನ್ನು ಜಗ್ಗೆಶ್ ಬಿಚ್ಚಿಟ್ಟಿದ್ದಾರೆ.

‘ಬೇಡ ಕೃಷ್ಣ ರಂಗಿನಾಟ’ 1994ರಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾವನ್ನು  ರಾಜ್‌ ಕಿಶೋರ್ ನಿರ್ದೇಶನ ಮಾಡಿದ್ದರು. ಜಗ್ಗೇಶ್‌ಗೆ ಜೋಡಿಯಾಗಿ ಪಾಯಲ್ ಮಲ್ಹೋತ್ರ ಮತ್ತು ಸಿಂಧುಜಾ ನಟಿಸಿದ್ದರು. ಈ ಸಿನಿಮಾದಲ್ಲಿ ಜಗ್ಗೆಶ್​ ಕತ್ತಿಗೆ ಹಾವನ್ನು ಸುತ್ತಿಕೊಂಡಿರುವ ದೃಶ್ಯ ಬರುತ್ತದೆ. ಈ ವೇಳೆ ಜಗ್ಗೇಶ್​ ಕತ್ತಿನಲ್ಲಿ ನಿಜವಾದ ಹಾವೇ ಇದ್ದಿತ್ತಂತೆ.

ಈ ದೃಶ್ಯದ ಶೂಟಿಂಗ್​ ಬಗ್ಗೆ ಜಗ್ಗೇಶ್​ ಮಾತನಾಡಿದ್ದಾರೆ. ‘ಅದ್ಭುತ ದೃಶ್ಯ. ಆದರೆ, ಅಂದು ಹೃದಯ ಬಾಯಿಗೆ ಬಂದಿತ್ತು. ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೇ. ಅಲ್ಲಿ ಆಡಿರುವುದು ಸಂಭಾಷಣೆ ಅಲ್ಲ, ಭಯಕ್ಕೆ ನಿರ್ದೇಶಕನ ಬೈದದ್ದು. ನಂತರ ಡಬ್ಬಿಂಗ್​ನಲ್ಲಿ ಈ ಸಂಭಾಷಣೆ ಹೇಳಿದ್ದು. ಪಾಪ ಈ ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್. ಸತ್ತು 17 ವರ್ಷ ಆಯಿತು. ಅಮರ ಹಳೆ ನೆನಪು’ ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್​.

ಜಗ್ಗೇಶ್​ ಅವರು ನಾಲ್ಕು ಒಳ್ಳೆಯ ಸ್ಕ್ರಿಪ್ಟ್​ಗಳನ್ನು ಕೇಳಿದ್ದಾರೆ. ಆ ಪೈಕಿ ಎರಡಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದು, ಇನ್ನೆರಡು ಸ್ಕ್ರಿಪ್ಟ್​ಗಳ ಮಾತುಕತೆ ನಡೆಯುತ್ತಿದೆ ಎಂದು ಅವರು​ ಇತ್ತೀಚೆಗೆ ಮಾಹಿತಿ ನೀಡಿದ್ದರು. ವಿಜಯ್​ ಪ್ರಸಾದ್​ ನಿರ್ದೇಶನದ ‘ತೋತಾಪುರಿ’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: Jaggesh: ಜಗ್ಗೇಶ್​ 10ನೇ ಕ್ಲಾಸ್​ ಅಂಕಪಟ್ಟಿ ವೈರಲ್​; ಅಪ್ಪನಿಂದ ಬಿದ್ದಿತ್ತು ಬೂಟಿನ ಏಟು

ನಟ ಜಗ್ಗೇಶ್​ ನೆನಪಿನ ಪುಟದಲ್ಲಿವೆ ‘ಅಭಿನಯ ಶಾರದೆ’ ಜಯಂತಿ ಜೊತೆ ಕಳೆದ ಸುಂದರ ಕ್ಷಣಗಳು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ