‘ಸಲಗ’ ಚಿತ್ರದ ಹಾಡಿಗೆ ಸಿಕ್ಕ ಯಶಸ್ಸಿನ ಹಿನ್ನೆಲೆ; ವೇದಿಕೆಯಲ್ಲೇ ಭಾವುಕರಾದ ಗೀತಾ ಸಿದ್ದಿ

‘ಸಲಗ’ ಚಿತ್ರದ ಪ್ರಮೋಷನಲ್ ಹಾಡಿನ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡವು ಸುದ್ದಿಗೋಷ್ಠಿಯನ್ನು ನಡೆಸಿತು. ಇದರಲ್ಲಿ ಗಾಯಕರಾದ ಗಿರಿಜಾ ಸಿದ್ದಿ, ಗೀತಾ ಸಿದ್ದಿ ಮತ್ತು ತಂಡದವರಿಗೆ ಗೌರವ ಸಲ್ಲಿಸಲಾಯಿತು. ಈ ವೇಳೆ ಗೀತಾ ಸಿದ್ದಿ ಭಾವುಕರಾದರು.

‘ಸಲಗ’ ಚಿತ್ರದ ಹಾಡಿಗೆ ಸಿಕ್ಕ ಯಶಸ್ಸಿನ ಹಿನ್ನೆಲೆ; ವೇದಿಕೆಯಲ್ಲೇ ಭಾವುಕರಾದ ಗೀತಾ ಸಿದ್ದಿ
ದುನಿಯಾ ವಿಜಯ್, ಗೀತಾ ಸಿದ್ದಿ
Follow us
TV9 Web
| Updated By: shivaprasad.hs

Updated on:Aug 13, 2021 | 3:17 PM

ಸದ್ಯ ಕನ್ನಡ ಚಿತ್ರರಂಗದಲ್ಲಿ ‘ಸಲಗ’ ಚಿತ್ರದ್ದೇ ಮಾತು. ಚಿತ್ರತಂಡ ಬಿಡುಗಡೆ ಮಾಡಿರುವ ಪ್ರಮೋಷನಲ್ ಸಾಂಗ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಚಿತ್ರತಂಡ ಖುಷಿಯಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿತ್ತು. ಹಾಡಿನ ಯಶಸ್ಸಿಗೆ ಪ್ರಮುಖ ಕಾರಣರಾದ ಸಿದ್ದಿ ಸಮುದಾಯದ ಗಾಯಕರನ್ನು ವೇದಿಕೆಗೆ ಕರೆದು ಸನ್ಮಾಯಿಸಲಾಯಿತು. ಈ ವೇಳೆ ಪ್ರಮುಖ ಗಾಯಕಿ, ರಂಗಭೂಮಿಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿರುವ ಗಿರಿಜಾ ಸಿದ್ದಿಯವರ ಸಹೋದರಿ ಗೀತಾ ಸಿದ್ದಿ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದ ಹಿನ್ನೆಲೆಯಲ್ಲಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಸಿದ್ದಿ ಸಮುದಾಯ ಹಾಗೂ ಗಿರಿಜಾ ಸಿದ್ದಿಯವರ ಪರಿಶ್ರಮದ ಕುರಿತು ದುನಿಯಾ ವಿಜಯ್ ಮಾತನಾಡುತ್ತಿರುವಾಗ ಗೀತಾ ಸಿದ್ದಿ ಭಾವುಕರಾದರು. ಹಾಡಿನ ಯಶಸ್ಸಿನ ಕುರಿತು ಮಾತನಾಡಿದ ಗಿರಿಜಾ ಸಿದ್ದಿ, ಎಲ್ಲರೂ ಸೇರಿ ಬಹಳ ದೊಡ್ಡ ಭಾರವನ್ನು ನಮ್ಮ ಮೇಲೆ ಹೊರಿಸಿದ್ದೀರಿ. ನಮ್ಮ ಸಮುದಾಯದ ಹಾಡಿಗೆ ಸಿಗುತ್ತಿರುವ ಮನ್ನಣೆ ಖುಷಿ ತಂದಿದೆ ಎಂದು ಹೇಳಿದರು.

ಸಲಗ ಚಿತ್ರದ ಸುದ್ದಿಗೋಷ್ಠಿಯಲ್ಲಿ ಭಾವುಕರಾದ ಗೀತಾ ಸಿದ್ಧಿ:

ನಟ, ನಿರ್ದೇಶಕ ದುನಿಯಾ ವಿಜಯ್ ಮಾತನಾಡಿ, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರಿಗೆ ಹಾಗೂ ಸಂಗೀತ ನಿರ್ದೇಶಕ ಚರಣ್ ರಾಜ್ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ಈ ವೇಳೆ ಗಿರಿಜಾ ಸಿದ್ದಿಯವರ ಪತಿ ಚನ್ನೇಶವ ಅವರನ್ನು ಸ್ಮರಿಸಿದ ವಿಜಯ್, ಅವರ ಪರಿಶ್ರಮದಿಂದಾಗಿ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಸಿದ್ದಿ ಸಮುದಾಯದವರು ಮತ್ತಷ್ಟು ಮುನ್ನೆಲೆಗೆ ಬಂದಿದ್ಧಾರೆ ಎಂದರು.

ಕರ್ನಾಟಕದ ಅದರಲ್ಲೂ ಉತ್ತರ ಕನ್ನಡದಲ್ಲಿ ಸಿದ್ದಿ ಸಮುದಾಯದವರು ವಾಸವಿದ್ದಾರೆ. ಅವರು ತಮ್ಮದೇ ಆದ ಸಂಸ್ಕೃತಿ, ಭಾಷೆಯನ್ನು ಹೊಂದಿರುವುದಲ್ಲದೇ, ಅವರದೇ ಆದ ಹಾಡಿನ ಪದ್ಧತಿಯೂ ಇದೆ. ಅವರ ಹಾಡನ್ನು ಹಾಗೂ ಅವರ ಸಮುದಾಯದ ಹಾಡುಗಾರರನ್ನೇ ಬಳಸಿಕೊಂಡು ‘ಟಿಣಿಂಗ್ ಮಿಣಿಂಗ್ ಟಿಷ್ಯಾ’ ಹಾಡನ್ನು ರಚಿಸಲಾಗಿದ್ದು, ಈ ಹಾಡು ಸದ್ಯ ಸಿನಿಮಾ ಪ್ರೇಮಿಗಳ ನೆಚ್ಚಿನ ಗೀತೆಯಾಗಿದೆ.

ಇದನ್ನೂ ಓದಿ:

Girija Siddhi: ‘ಟಿಣಿಂಗ್ ಮಿಣಿಂಗ್ ಟಿಷ್ಯಾ’ ಮೂಲಕ ಕರುನಾಡ ಮನೆದ್ದಿರುವ ಗಿರಿಜಾ ಸಿದ್ದಿ ಮತ್ತು ತಂಡದವರ ವಿಶೇಷ ಸಂದರ್ಶನ

‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಸ್​ಪಿಬಿ ಧ್ವನಿ; ಭಾವುಕರಾದ ಪುತ್ರ ಚರಣ್​

(Tininga Mininga Tishshya Singer Geetha Siddhi got emotional while Salaga Press meet)

Published On - 2:17 pm, Fri, 13 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ