Girija Siddhi: ‘ಟಿಣಿಂಗ್ ಮಿಣಿಂಗ್ ಟಿಷ್ಯಾ’ ಮೂಲಕ ಕರುನಾಡ ಮನೆದ್ದಿರುವ ಗಿರಿಜಾ ಸಿದ್ದಿ ಮತ್ತು ತಂಡದವರ ವಿಶೇಷ ಸಂದರ್ಶನ

Girija Siddhi: ‘ಟಿಣಿಂಗ್ ಮಿಣಿಂಗ್ ಟಿಷ್ಯಾ’ ಮೂಲಕ ಕರುನಾಡ ಮನೆದ್ದಿರುವ ಗಿರಿಜಾ ಸಿದ್ದಿ ಮತ್ತು ತಂಡದವರ ವಿಶೇಷ ಸಂದರ್ಶನ

TV9 Web
| Updated By: shivaprasad.hs

Updated on:Aug 13, 2021 | 1:25 PM

Salaga Movie: ಕನ್ನಡ ನಾಡಿನಲ್ಲಿ ಈಗ ಎಲ್ಲಿ ಹೋದರೂ ‘ಟಿಣಿಂಗ ಮಿಣಿಂಗ ಟಿಷ್ಯಾ’ ಹಾಡಿನದ್ದೇ ಹವಾ. ಇದನ್ನು ಹಾಡಿರುವ ಗಿರಿಜಾ ಸಿದ್ಧಿ ಮತ್ತು ತಂಡದವರು ಟಿವಿ9ನೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದ ಅದರಲ್ಲೂ ಉತ್ತರ ಕನ್ನಡದಲ್ಲಿ ಸಿದ್ಧಿ ಸಮುದಾಯದವರು ವಾಸವಿದ್ದಾರೆ. ಅವರು ತಮ್ಮದೇ ಆದ ಸಂಸ್ಕೃತಿ, ಭಾಷೆಯನ್ನು ಹೊಂದಿರುವುದಲ್ಲದೇ, ಅವರದೇ ಆದ ಹಾಡಿನ ಪದ್ಧತಿಯೂ ಇದೆ. ಅವರ ಹಾಡನ್ನು ಹಾಗೂ ಅವರ ಸಮುದಾಯದ ಹಾಡುಗಾರರನ್ನೇ ಬಳಸಿಕೊಂಡು ‘ಟಿಣಿಂಗ್ ಮಿಣಿಂಗ್ ಟಿಷ್ಯಾ’ ಹಾಡನ್ನು ರಚಿಸಲಾಗಿದೆ. ಇದರಿಂದಾಗಿಯೇ ಹಾಡನ್ನು ಕೇಳಿದವರಿಗೆ ಹೊಸ ಮಾದರಿಯ ಹಾಡನ್ನು ಕೇಳಿದ ಅನುಭವ ಕೊಡುವುದಲ್ಲದೇ, ಕನ್ನಡ ನಾಡಿನಲ್ಲಿ ಎಷ್ಟು ವೈವಿಧ್ಯತೆಯಿದೆ ಎಂದು ಖುಷಿಪಡುವಂತಾಗಿದೆ.

ಇಂದು ನಡೆದ ಸಲಗ ತಂಡದ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಗಿರಿಜಾ ಸಿದ್ಧಿ ಮತ್ತು ತಂಡದವರು ಟಿವಿ9ನೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಸಂದರ್ಭ, ಈ ಹಾಡಿಗೆ ಅವರ ಊರಿನಲ್ಲಿ ಸಿಕ್ಕಿದ ಪ್ರತಿಕ್ರಿಯೆ ಇವುಗಳನ್ನು ಹೇಳಿಕೊಂಡಿದ್ದಾರೆ.

ಇದನ್ನೂ ನೋಡಿ:

Salaga: ಸಖತ್ ಸೌಂಡ್ ಮಾಡ್ತಿದೆ ‘ಟಿಣಿಂಗಾ ಮಿಣಿಂಗಾ ಟಿಶ್ಶಾ’; ಈ ಹಾಡಿಗಿದೆ ವಿಶೇಷ ಹಿನ್ನೆಲೆ!

Kannada New Movie : ‘ಅಂದರ್ ಮಂಚೋಕೋಂಬೋ ಟಿಣಿಂಗ್ ಮಿಣಿಂಗ್ ಟಿಷ್ಯಾ!’

(TV9 special Interview with Tininga Mininga tishshya Singers from the movie Salaga)

Published on: Aug 13, 2021 01:19 PM