ಹಿಮಾಚಲ ಪ್ರದೇಶದಲ್ಲಿ ಮತ್ತೊಂದೆಡೆ ಭೂ ಕುಸಿತ, ಪ್ರಾಣಹಾನಿ ಇಲ್ಲವಾದರೂ ಚೆನಾಬ್ ನದಿಯ ಹರಿವು ಬ್ಲಾಕ್ ಆಗಿದೆ
ಸ್ಥಳೀಯ ಆಡಳಿತವು ಹೆಲಿಕ್ಯಾಪ್ಟರ್ ಮೂಲಕ ಸ್ಥಳದ ಸರ್ವೇಕ್ಷಣೆ ನಡೆಸಿದೆ ಮತ್ತು ಮುಂಜಾಗ್ರತೆಯ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಯ ತುಕಡಿಯೊಂದು ಸ್ಥಳದಲ್ಲಿ ಬೀಡು ಬಿಟ್ಟಿದೆ.
ಭೂ ಮತ್ತು ಗುಡ್ಡ ಕುಸಿತದ ಪ್ರಕರಣಗಳು ಹಿಮಾಚಲ ಪ್ರದೇಶದಲ್ಲಿ ಹೆಚ್ಚುತ್ತಿವೆ. ಶುಕ್ರವಾರದಂದು ಲಹೌಲ್ ಮತ್ತು ಸ್ಪಿತಿ ಪ್ರಾಂತ್ಯದ ಉದಯಪುರ ತೆಹ್ಸಿಲ್ ವ್ಯಾಪ್ತಿಯಲ್ಲಿ ಬರುವ ನಲ್ದಾ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿ ಈ ಭಾಗದಲ್ಲಿ ಹರಿಯುವ ಚೆನಾಬ್ ನದಿಯ ಹರಿವು ಶೇಕಡಾ 90 ರಷ್ಟು ಬ್ಲಾಕ್ ಆಗಿದೆ. ಸ್ಥಳೀಯ ಮೂಲಗಳ ಪ್ರಕಾರ ನದಿಯ ಶೇಕಡಾ 10 ರಷ್ಟು ನೀರು ಮಾತ್ರ ಹರಿದು ಮುಂದೆ ಸಾಗುತ್ತಿರುವುದರಿಂದ ನಲ್ದಾ ಗ್ರಾಮ ದೊಡ್ಡ ಕೆರೆಯಾಗಿ ಮಾರ್ಪಟ್ಟಿದೆ. ಗ್ರಾಮವು ಜಿಲ್ಲಾಕೇಂದ್ರ ಕೀಲಾಂಗ್ನಿಂದ ಸುಮಾರು 34 ಕಿಮೀ ದೂರದಲ್ಲಿದೆ. ಅದೃಷ್ಟವಶಾತ್ ಭೂ ಕುಸಿತ ಆಗಿರುವ ಸ್ಥಳದಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ, ಆಸ್ತಿಹಾನಿ ಸಂಭವಿಸಿಲ್ಲ.
ಸ್ಥಳೀಯ ಆಡಳಿತವು ಹೆಲಿಕ್ಯಾಪ್ಟರ್ ಮೂಲಕ ಸ್ಥಳದ ಸರ್ವೇಕ್ಷಣೆ ನಡೆಸಿದೆ ಮತ್ತು ಮುಂಜಾಗ್ರತೆಯ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಯ ತುಕಡಿಯೊಂದು ಸ್ಥಳದಲ್ಲಿ ಬೀಡು ಬಿಟ್ಟಿದೆ.
ಹಿಮಾಚಲ ಪ್ರದೇಶದಲ್ಲಿ ಕೆಲವೇ ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 5ಕ್ಕೆ ಸಮೀಪ ಇರುವ ಕಿನ್ನೌರ್ನ ಚೌರಾ ಗ್ರಾಮದ ಬಳಿ ಭೂ ಕುಸಿತ ಉಂಟಾಗಿ 15 ಜನ ಬಲಿಯಾಗಿದ್ದರು. ಈ ಪ್ರದೇಶದಿಂದ 13 ಜನರನ್ನು ರಕ್ಷಿಸಲಾಗಿದೆ ಮತ್ತು 16 ಜನ ಇನ್ನೂ ಪತ್ತೆಯಾಗಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಗುರುವಾರದಂದು ವಿಧಾನ ಸಭೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಯುವ ನಟಿಯ ಖಾಸಗಿ ವಿಡಿಯೋ ಲೀಕ್; ‘ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ’ ಎಂದ ನಟಿ