ಲಾರ್ಡ್ಸ್ ಮೈದಾನದಲ್ಲಿ ಕನ್ನಡಿಗ ರಾಹುಲ್ರಂತೆ ಲಾರ್ಡ್ ಅನಿಸಿಕೊಳ್ಳುವುದು ಕ್ರಿಕೆಟ್ ದಿಗ್ಗಜರಿಗೂ ಸಾಧ್ಯವಾಗಿಲ್ಲ!
ಕ್ರಿಕೆಟ್ ತವರು ಅಂತಲೂ ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದಲ್ಲಿ ಶತಕ ಬಾರಿಸುವುದು ಪ್ರತಿಯೊಬ್ಬ ಬ್ಯಾಟ್ಸ್ಮನ್ನ ಕನಸಾಗಿರುತ್ತದೆ. ಆದರೆ ಈ ಮೈದಾನದ ವೈಶಿಷ್ಟ್ಯತೆ ಅಂದರೆ, ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳಿಗೆ ಇಲ್ಲಿ ಶತಕ ಬಾರಿಸುವುದು ಸಾಧ್ಯವಾಗಿಲ್ಲ.
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನ ಮೊದಲ ದಿನವಾಗಿದ್ದ ಗುರುವಾರ ಭಾರತದ ಆರಂಭ ಆಟಗಾರ ಕೆಎಲ್ ರಾಹುಲ್ ಅಪರೂಪದ ಸಾಧನೆಗೆ ಭಾಜನರಾಗಿದ್ದಾರೆ. ಭಾರತದ ಆರಂಭಿಕ ಬ್ಯಾಟ್ಸ್ಮನ್ಗಳ ಪೈಕಿ ಕೇವಲ ಸುನಿಲ್ ಗಾವಸ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಮಾತ್ರ ಉಪಖಂಡದ ಆಚೆ 4 ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ಗುರುವಾರದಂದು ಕನ್ನಡಿಗ ರಾಹುಲ್ ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದಲ್ಲಿ ಶತಕ ದಾಖಲಿಸುವ ಮೂಲಕ ಈ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ರಾಹುಲ್ ಆರಂಭ ಆಟಗಾರನಾಗಿಯೇ ಏಷ್ಯಾದ ಆಚೆ 4 ಶತಕಗಳನ್ನು ಬಾರಿಸಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಈಗಷ್ಟೇ ಅವರು ಓಪನರ್ ಆಗಿ ಆಡಿದ್ದಾರೆ.
ಕ್ರಿಕೆಟ್ ತವರು ಅಂತಲೂ ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದಲ್ಲಿ ಶತಕ ಬಾರಿಸುವುದು ಪ್ರತಿಯೊಬ್ಬ ಬ್ಯಾಟ್ಸ್ಮನ್ನ ಕನಸಾಗಿರುತ್ತದೆ. ಆದರೆ ಈ ಮೈದಾನದ ವೈಶಿಷ್ಟ್ಯತೆ ಅಂದರೆ, ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳಿಗೆ ಇಲ್ಲಿ ಶತಕ ಬಾರಿಸುವುದು ಸಾಧ್ಯವಾಗಿಲ್ಲ.
ಗಾವಸ್ಕರ್ ಅವರನ್ನೇ ತೆಗೆದುಕೊಳ್ಳಿ, ಅವರಿಗೆ ಒಮ್ಮೆಯೂ ಲಾರ್ಡ್ಸ್ ಮೈದಾನದಲ್ಲಿ ಶತಕ ಬಾರಿಸಲಾಗಲಿಲ. ಈ ಮೈದಾನದಲ್ಲಿ 10 ಇನ್ನಿಂಗ್ಸ್ಗಳನ್ನಾಡಿದ ಸನ್ನಿ 37.6 ಸರಾಸರಿಯಲ್ಲಿ 376 ರನ್ ಮಾತ್ರ ಗಳಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ 51 ಶತಕ ಬಾರಿಸಿದ್ದಾರೆ. ಲಾರ್ಡ್ಸ್ನಲ್ಲಿ? ಒಂದೂ ಇಲ್ಲ. ಈ ಮೈದಾನದಲ್ಲಿ 9 ಇನ್ನಿಂಗ್ಸ್ಗಳನ್ನು ಇಲ್ಲಿ ಆಡಿದ ಲಿಟ್ಲ್ ಮಾಸ್ಟರ್ 21.67 ಸರಾಸರಿಯಲ್ಲಿ ಕೇವಲ 195 ರನ್ ಗಳಿಸಿದರು.
ಸಚಿನ್ ಅವರ ಸಮಕಾಲೀನ ಶ್ರೇಷ್ಠರಾದ ಜ್ಯಾಕ್ ಕಾಲಿಸ್, ರಿಕ್ಕಿ ಪಾಂಟಿಂಗ್ ಮತ್ತು ಬ್ರಿಯಾನ್ ಲಾರಾ ಅವರಿಗೂ ಲಾರ್ಡ್ಸ್ ಮೈದಾನದಲ್ಲಿ ಶತಕ ಬಾರಿಸಲಾಗಲಿಲ್ಲ. ಇಲ್ಲಿ ಆಡಿದ 5 ಇನ್ನಿಂಗ್ಸ್ಗಳಲ್ಲಿ ಕ್ಯಾಲಿಸ್ ಗಳಿಸಿದ್ದು ಕೇವಲ 54 ರನ್ ಮಾತ್ರ. ಟೆಸ್ಟ್ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾದ ಈ ಆಟಗಾರನ ಬ್ಯಾಟ್ನಿಂದ 45 ಶತಕಗಳು ಸಿಡಿದಿವೆ. ಪಾಂಟಿಂಗ್ 8 ಇನ್ನಿಂಗ್ಸ್ಗಳಿಂದ 16.87 ಸರಾಸರಿಯಲ್ಲಿ ಕೇವಲ 135 ರನ್ ಗಳಿಸಿದ್ದಾರೆ. ಹಾಗೇಯೇ, ಲಾರಾ ಲಾರ್ಡ್ಸ್ನಲ್ಲಿ 6 ಇನ್ನಿಂಗ್ಸ್ಗಳನ್ನು ಆಡಿ 22.6 ಸರಾಸರಿಯಲ್ಲಿ 126 ರನ್ ಮಾತ್ರ ಗಳಿಸಿದ್ದಾರೆ.
ಇದನ್ನೂ ಓದಿ: Viral Video: ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ಓಡಿದ 2 ವರ್ಷದ ಬಾಲಕ; ಶಾಕ್ ಆದ ಅಮ್ಮನ ವಿಡಿಯೋ ವೈರಲ್