AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ಪ್ರಿಯ ಸ್ನೇಹಿತ ಕೆ.ಎಲ್.ರಾಹುಲ್ ಲಾರ್ಡ್ಸ್​ನಲ್ಲಿ ಸಿಡಿಸಿರುವ ಭರ್ಜರಿ ಶತಕಕ್ಕೆ ಆಥಿಯಾ ರಿಯಾಕ್ಷನ್ ಹೇಗಿತ್ತು?

Athiya Shetty: ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿರುವ ಕೆ.ಎಲ್.ರಾಹುಲ್​ಗೆ ನಟಿ ಆಥಿಯಾ ಶೆಟ್ಟಿ ವಿಶೇಷವಾಗಿ ಶುಭಕೋರಿದ್ದಾರೆ.

KL Rahul: ಪ್ರಿಯ ಸ್ನೇಹಿತ ಕೆ.ಎಲ್.ರಾಹುಲ್ ಲಾರ್ಡ್ಸ್​ನಲ್ಲಿ ಸಿಡಿಸಿರುವ ಭರ್ಜರಿ ಶತಕಕ್ಕೆ ಆಥಿಯಾ ರಿಯಾಕ್ಷನ್ ಹೇಗಿತ್ತು?
ಕೆ ಎಲ್ ರಾಹುಲ್ ಜೊತೆ ಅಥಿಯಾ ಶೆಟ್ಟಿ
TV9 Web
| Edited By: |

Updated on: Aug 13, 2021 | 10:09 AM

Share

ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರೊಂದಿಗೆ ಸುತ್ತಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಕುರಿತು ಈರ್ವರೂ ಇದುವರೆಗೆ ತುಟಿ ಬಿಚ್ಚದಿದ್ದರೂ ಕೂಡಾ, ಸಂಬಂಧವನ್ನು ನಿರಾಕರಿಸಿಯೂ ಇಲ್ಲ. ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಸರಣಿಗೆ ತಮ್ಮ ಜೊತೆಗಾತಿಯಾಗಿ ಆಥಿಯಾ ಅವರನ್ನು ರಾಹುಲ್ ಕರೆದೊಯ್ದಿದ್ದರು ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಈ ತಾರಾ ಜೋಡಿ ಲಂಡನ್​ನ ಬೀದಿಗಳಲ್ಲಿ ಸುತ್ತಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದೀಗ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಶತಕ ಸಿಡಿಸಿದ ಬೆನ್ನಲ್ಲೇ ಆಥಿಯಾ ಚಿತ್ರವೊಂದನ್ನು ಹಂಚಿಕೊಂಡು ಶುಭ ಕೋರಿದ್ದಾರೆ.

ಇನ್ಸ್ಟಾಗ್ರಾಂನ ಸ್ಟೇಟಸ್​ನಲ್ಲಿ ಆಥಿಯಾ ರಾಹುಲ್ ಅವರ ಚಿತ್ರವೊಂದನ್ನು ಹಂಚಿಕೊಂಡು ಶುಭಕೋರಿದ್ದಾರೆ. ಶತಕ ಸಿಡಿಸಿದ ನಂತರ ರಾಹುಲ್ ಸಂಭ್ರಮಿಸುತ್ತಿರುವುದನ್ನು ಸೆರೆ ಹಿಡಿದು ಆಥಿಯಾ ಹಂಚಿಕೊಂಡಿದ್ದಾರೆ. ಆದರೆ ಆಥಿಯಾ ಕ್ರೀಡಾಂಗಣದಲ್ಲಿರಲಿಲ್ಲ. ಅವರು ತಮ್ಮ ಕೊಠಡಿಯ ಟಿವಿಯ ಸ್ಕ್ರೀನ್​ನಲ್ಲಿ ತೆಗೆದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಾಹುಲ್ ಹೆಸರನ್ನು ಬರೆದು, ಹೃದಯದ ಚಿತ್ರವನ್ನು ಹಾಕಿದ್ದಾರೆ. ಆ ಚಿತ್ರ ಇಲ್ಲಿದೆ.

Athiya Shetty KL Rahul

ಆಥಿಯಾ ಹಾಗೂ ರಾಹುಲ್(ಎಡ ಚಿತ್ರ), ಆಥಿಯಾ ಶುಭ ಕೋರಿದ್ದು (ಬಲ ಚಿತ್ರ)

ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ಈ ಜೋಡಿ, ಇತ್ತೀಚೆಗೆ ಅನುಷ್ಕಾ ಶರ್ಮಾ ಹಂಚಿಕೊಂಡಿರುವ ಚಿತ್ರಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಶಾಂತ್ ಶರ್ಮಾ ಪತ್ನಿ ಹಂಚಿಕೊಂಡ ಚಿತ್ರದಲ್ಲೂ ಈ ಗಾಸಿಪ್ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ರಾಹುಲ್ ಇತ್ತೀಚೆಗೆ ಆಥಿಯಾ ಸಹೋದರ ಅಹಾನ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದರು. ನಟಿ ಆಥಿಯಾ ತಂದೆ ಬಾಲಿವುಡ್​ನ ಖ್ಯಾತ ನಟ ಸುನೀಲ್ ಶೆಟ್ಟಿ ಇವರೀರ್ವರ ಸಂಬಂಧದ ಕುರಿತು ಇತ್ತೀಚೆಗೆ ಲೀಡಿಂಗ್ ಡೈಲಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತಾಡಿದ್ದರು.

‘ಹೌದು ಆಥಿಯಾ ಇಂಗ್ಲೆಂಡ್​ನಲ್ಲಿದ್ದಾಳೆ. ತನ್ನ ಸಹೋದರನೊಂದಿಗೆ ರಜೆಯ ದಿನಗಳನ್ನು ಕಳೆಯಲು ಆಕೆ ಇಂಗ್ಲೆಂಡ್​ಗೆ ತೆರಳಿದ್ದಾಳೆ’ ಎಂದು ಸುನೀಲ್ ತಿಳಿಸಿದ್ದರು. ಆಥಿಯಾ- ರಾಹುಲ್ ಸಂಬಂಧದ ಬಗ್ಗೆ ವಿಚಾರಿಸಿದಾಗ, ‘‘ಈ ಕುರಿತು ಮಾತನಾಡಲು ಆಥಿಯಾಳೆ ಸೂಕ್ತ ವ್ಯಕ್ತಿ. ನೀವು ಅವಳನ್ನೇ ಕೇಳಿ’’ ಎಂದು ಪ್ರತಿಕ್ರಿಯೆ ನೀಡಿದ್ದರು. ರಾಹುಲ್- ಆಥಿಯಾ ಜಾಹಿರಾತೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರ ಕುರಿತು ಮಾತನಾಡಿದ್ದ ಸುನೀಲ್ ಶೆಟ್ಟಿ, ಅವರೀರ್ವರೂ ತೆರೆಯ ಮೇಲೆ ಅದ್ಭುತ ಜೋಡಿ ಎಂದಿದ್ದರು.

ಇದನ್ನೂ ಓದಿ:

ರಾಹುಲ್- ಅಥಿಯಾ, ಕೊಹ್ಲಿ- ಅನುಷ್ಕಾ; ಇಂಗ್ಲೆಂಡ್​ ಬೀದಿಗಳಲ್ಲಿ ಮಾಡೆಲ್​ಗಳಂತೆ ಫೋಟೋಗಳಿಗೆ ಪೋಸ್ ನೀಡಿದ ಟೀಂ ಇಂಡಿಯಾ ಕ್ರಿಕೆಟಿಗರು

KL Rahul: ಕೆ. ಎಲ್ ರಾಹುಲ್ ಶತಕಕ್ಕೆ ದಾಖಲೆಗಳು ಪುಡಿಪುಡಿ: ಕನ್ನಡಿಗನಿಂದ ವಿಶೇಷ ಸಾಧನೆ

Follow Us
ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಎಂಸಿಡಿ ಸಮರ
ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಎಂಸಿಡಿ ಸಮರ
ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ರುವಾಂಡಾ ಅಧಿಕಾರಿಗಳು
ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ರುವಾಂಡಾ ಅಧಿಕಾರಿಗಳು
8 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಿರುವ ಬೀದರ್ ಕಲಾವಿದ!
8 ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಿರುವ ಬೀದರ್ ಕಲಾವಿದ!
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
ಸತೀಶ್ ಜಾರಕಿಹೊಳಿ ಆಪ್ತರ ಮನೆಗಳಲ್ಲಿ ಮಹತ್ವದ ದಾಖಲೆ ಪತ್ತೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್