AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್-ಆಥಿಯಾ ಪ್ರೀತಿ ಜಗಜ್ಜಾಹೀರು: ಆ ಕಪ್ಪು-ಬಿಳುಪಿನ ಫೋಟೋದಲ್ಲಿ ಅಡಗಿದೆಯಾ ಸತ್ಯ..?

ಆಥಿಯಾ ಯಾವಾಗ ಈ ಕಪ್ಪು ಬಿಳುಪಿನ ಫೋಟೋ ಪೋಸ್ಟ್ ಮಾಡಿದ್ಲೋ ಆಗಲೇ ಅಭಿಮಾನಿಗಳಿಗೆ, ಆಥಿಯಾ ಕೂಡ ರಾಹುಲ್ ಜತೆಗೆ ಲಂಡನ್ಗೆ ಹಾರಿದ್ದಾಳೆ ಅನ್ನೋ ಅನುಮಾನ ಶುರುವಾಗಿದ್ದು.

ರಾಹುಲ್-ಆಥಿಯಾ ಪ್ರೀತಿ ಜಗಜ್ಜಾಹೀರು: ಆ ಕಪ್ಪು-ಬಿಳುಪಿನ ಫೋಟೋದಲ್ಲಿ ಅಡಗಿದೆಯಾ ಸತ್ಯ..?
ಹೀಗೆ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯ ಸುಳಿವು ನೀಡಿದ್ರೂ, ಸಾರ್ವಜನಿಕವಾಗಿ ನಾವಿಬ್ರೂ ಪ್ರೀತಿಯಲ್ಲಿದ್ದೀವಿ ಅನ್ನೋದನ್ನ ಒಪ್ಪಿಕೊಂಡಿಲ್ಲ. ಸದ್ಯ ಟೀಮ್ ಇಂಡಿಯಾ ಆಟಗಾರರೊಂದಿಗೆ ಕನ್ನಡಿಗ ರಾಹುಲ್ ಇಂಗ್ಲೆಂಡ್​ನಲ್ಲಿದ್ದಾರೆ.
Follow us
ಪೃಥ್ವಿಶಂಕರ
|

Updated on: Jun 09, 2021 | 8:14 PM

ಕನ್ನಡಿಗನಾಗಿ ಕನ್ನಡಿಗರ ಹೃದಯ ಗೆದ್ದ ಕೆಎಲ್‌ ರಾಹುಲ್ ಫುಲ್ ಲವ್ ಮೂಡ್‌ನಲ್ಲಿ ಇದ್ದಂತೆ ಕಾಣ್ತಿದೆ. ಶಸ್ತ್ರಚಿಕಿತ್ಸೆ ಬಳಿಕ ಇಂಗ್ಲೆಂಡ್ನಲ್ಲಿ ಟೀಮ್ ಇಂಡಿಯಾವನ್ನ ರಾಹುಲ್ ಸೇರಿಕೊಂಡಿದ್ದಾರೆ. ಆದ್ರೀಗ ರಾಹುಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ, ತಮ್ಮ ಲವ್ ಸ್ಟೋರಿಯಿಂದ ಸುದ್ದಿಯಾಗಿದ್ದಾರೆ. ಕೆ.ಎಲ್ ರಾಹುಲ್‌.. ಕರುನಾಡಿನ ಮನೆಮಗನಾಗಿ ಭಾರತೀಯ ಕ್ರಿಕೆಟ್‌ ರಂಗದಲ್ಲಿ ಮೋಡಿ ಮಾಡುತ್ತಿರುವ ಕ್ರಿಕೆಟಿಗ. ಟೀಮ್ ಇಂಡಿಯಾದ ಸ್ಟೈಲಿಷ್ ಕ್ರಿಕೆಟ್‌ನಿಂದಲೇ ಸಾಕಷ್ಟು ಜನರ ಹೃದಯ ಗೆದ್ದಾತ. ಆದ್ರೆ ಈಗ ತಮ್ಮ ಲವ್‌ ಸ್ಟೋರಿ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಜಗತ್ತಿಗೆ ಸತ್ಯ ತೆರೆದಿಟ್ಟುಬಿಡ್ತಾ ಆ ಒಂದು ಫೋಟೋ..? ಕೆ.ಎಲ್.ರಾಹುಲ್ ಸದ್ಯ ಇಂಗ್ಲೆಂಡ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ತಯಾರಿ ನಡೆಸಿಕೊಳ್ತಿದ್ದಾರೆ. ಆದ್ರೀಗ ಲಂಡನ್ನಲ್ಲಿ ಕನ್ನಡಿಗ ರಾಹುಲ್ ಫೋಟೋಗಳ ಮೂಲಕ ಸುದ್ದಿಯಾಗಿದ್ದಾರೆ. ಕೆ.ಎಲ್. ರಾಹುಲ್ ಮತ್ತು ಸುನಿಲ್ ಶೆಟ್ಟಿಯ ಮುದ್ದಿನ ಮಗಳು ಆಥಿಯಾ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನೋ ಗಾಸಿಪ್ ಹರಿದಾಡ್ತಾನೇ ಇತ್ತು. ಆದ್ರೆ ಕಳೆದ ನಾಲ್ಕು ವರ್ಷಗಳಿಂದಲೂ ಈ ಜೋಡಿ, ಎಲ್ಲಿಯೂ ತಮ್ಮ ಪ್ರೀತಿ ವಿಚಾರದ ಬಗ್ಗೆ ತುಟಿ ಪಿಟಿಕ್ ಅಂದಿರಲಿಲ್ಲ. ಆದ್ರೀಗ ಲಂಡನ್ನಲ್ಲಿ ತೆಗೆದ ಬ್ಲ್ಯಾಕ್ & ವೈಟ್ ಫೋಟೋವೊಂದು, ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿರೋದು ನಿಜ ಅನ್ನೋದಕ್ಕೆ ಸಾಕ್ಷಿಯಾಗಿ ನಿಂತಿದೆ.

ಇಂಗ್ಲೆಂಡ್‌ನಲ್ಲಿ ವಿಹರಿಸ್ತಿವೆಯಾ ಲವ್ ಬರ್ಡ್ಸ್..? ಸದ್ಯ ಇಂಗ್ಲೆಂಡ್ನಲ್ಲಿ ಟೀಮ್ ಇಂಡಿಯಾ ಜೊತೆಗೆ ಸೌಥಾಂಪ್ಟನ್ನಲ್ಲಿರುವ ರಾಹುಲ್, ಗ್ರೌಂಡ್ ಪಕ್ಕದ ಗಾರ್ಡನ್ನಲ್ಲಿ ನಿಂತಿರುವ ಫೋಟೊವೊಂದನ್ನ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಸ್ಟ್ ಮಾಡಿದ್ರು. ರಾಹುಲ್ ಹೀಗೆ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಆಥಿಯಾ ಶೆಟ್ಟಿ ಕೂಡ ಬ್ಲ್ಯಾಕ್ ಅಂಡ್ ವೈಟ್ ಫೋಟೋವೊಂದನ್ನ ತನ್ನ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ಫೋಟೋಗೆ ಆಥಿಯಾ.. ನಿನ್ನ ಎನರ್ಜಿಯನ್ನ ಕಾಪಾಡಿಕೋ ಎಂದು, ರಾಹುಲ್ಗೆ ಬೆಂಬಲಿಸಿ ಬರೆದುಕೊಂಡಿದ್ದಾಳೆ.

View this post on Instagram

A post shared by KL Rahul? (@rahulkl)

ಆಥಿಯಾ ಯಾವಾಗ ಈ ಕಪ್ಪು ಬಿಳುಪಿನ ಫೋಟೋ ಪೋಸ್ಟ್ ಮಾಡಿದ್ಲೋ ಆಗಲೇ ಅಭಿಮಾನಿಗಳಿಗೆ, ಆಥಿಯಾ ಕೂಡ ರಾಹುಲ್ ಜತೆಗೆ ಲಂಡನ್ಗೆ ಹಾರಿದ್ದಾಳೆ ಅನ್ನೋ ಅನುಮಾನ ಶುರುವಾಗಿದ್ದು. ಯಾಕಂದ್ರೆ ಇಬ್ಬರ ಫೋಟೋ ಬ್ಯಾಗ್ರೌಂಡ್ ಒಂದೇ ಆಗಿದೆ. ಇಬ್ಬರು ಸೌಂಥಾಂಪ್ಟನ್ ಗ್ರೌಂಡ್ ಪಕ್ಕದಲ್ಲೇ ತೆಗೆಸಿಕೊಂಡ ಫೋಟೋ ಅನ್ನೋದು ಗೊತ್ತಾಗುತ್ತೆ. ಪಕ್ಕದಲ್ಲೇ ಇರುವ ಕಬ್ಬಿಣದ ಕಂಪೌಂಡ್ ಇಬ್ಬರ ಚಿತ್ರದಲ್ಲೂ ಇದೆ. ಇದೇ ಕಾರಣಕ್ಕೆ ಕೆಲವರು ಆಥಿಯಾಗೆ, ನೀವು ರಾಹುಲ್ ಜತೆ ಲಂಡನ್ನಲ್ಲಿದ್ದೀರಾ..? ನಿಮ್ಮ ಫೋಟೋವನ್ನ ಕ್ಲಿಕ್ ಮಾಡಿದ್ದು ರಾಹುಲ್ ತಾನೇ? ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಇನ್ನು ಟೀಮ್ ಇಂಡಿಯಾ ಆಟಗಾರ ಶುಭಮನ್ ಗಿಲ್ ರಾಹುಲ್ಗೆ, ಈ ಫೊಟೋ ಕ್ಲಿಕ್ ಮಾಡೋಕೆ ನೀವು ಆರಿಸಿಕೊಂಡ ಸ್ಥಳ ಯಾವುದು ಎಂದು ಕಾಲೆಳೆದಿದ್ದಾನೆ. ಎರಡು ವಾರಗಳ ಹಿಂದಷ್ಟೇ ಆಥಿಯಾ, ರಾಹುಲ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದ ಫಿಟ್ನೆಸ್ ಫೋಟೋಕ್ಕೆ ಫಿದಾ ಆಗಿದ್ಳು. ಸ್ಮೈಲಿ ಎಮೋಜಿ ಪೋಸ್ಟ್ ಮಾಡಿ ನಾವಿವ್ರೂ ಪ್ರೀತಿಸುತ್ತಿದ್ದೀವಿ ಅನ್ನೋ ಸುಳಿವು ನೀಡಿದ್ಳು. ಆದ್ರೀಗ ಆಥಿಯಾಳ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಇವರಿಬ್ಬರ ನವಿರಾದ ಪ್ರೇಮ್ ಕಹಾನಿಯನ್ನ ಬಿಚ್ಚಿಟ್ಟಿದೆ.