AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Chopra: ಪತಿ ನಿಕ್​ಗೆ ಪಬ್ಲಿಕ್​ನಲ್ಲೇ ಕಿಸ್ ಕೊಟ್ಟು ಮುದ್ದು ಮಾಡಿದ ಪ್ರಿಯಾಂಕಾ

ಬಾಲಿವುಡ್​ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ಲಂಡನ್​ನ ರೆಸ್ಟೊರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದು, ಈ ಸಂದರ್ಭದ ವಿಡಿಯೊವನ್ನು ಅವರ ಅಭಿಮಾನಿ ಪೇಜ್​ಗಳು ಹಂಚಿಕೊಂಡಿವೆ.

Priyanka Chopra: ಪತಿ ನಿಕ್​ಗೆ ಪಬ್ಲಿಕ್​ನಲ್ಲೇ ಕಿಸ್ ಕೊಟ್ಟು ಮುದ್ದು ಮಾಡಿದ ಪ್ರಿಯಾಂಕಾ
ನಿಕ್ ಜೋನಾಸ್, ಪ್ರಿಯಾಂಕಾ ಚೋಪ್ರಾ
TV9 Web
| Edited By: |

Updated on: Aug 14, 2021 | 3:20 PM

Share

ಬಾಲಿವುಡ್​ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಹಾಲಿವುಡ್ ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಿಯಾಂಕಾ ಅವರ ಪತಿ ನಿಕ್ ಜೋನಾಸ್ ಕೂಡಾ ತಮ್ಮದೇ ಕೆಲಸಗಳಲ್ಲಿದ್ದಿದ್ದರಿಂದ ಈ ಜೋಡಿ ಕೆಲ ಕಾಲ ಅನಿವಾರ್ಯವಾಗಿ ದೂರವಾಗಿದ್ದರು. ಈಗ ಲಂಡನ್​ನಲ್ಲಿ ಈ ಜೋಡಿ ಖುಷಿಯಿಂದ ರಜೆಯ ದಿನಗಳನ್ನು ಕಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ ತಮ್ಮ ಪತಿಯೊಂದಿಗೆ ಲಂಡನ್​ನ ಹೊಟೆಲ್ ಒಂದರಲ್ಲಿ ಊಟಕ್ಕೆ ತೆರಳಿದ್ದು, ಅಲ್ಲಿ ಖುಷಿಯಿಂದ ಕಳೆಯುತ್ತಿರುವ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದನ್ನು ಅವರ ಅಭಿಮಾನಿ ಪೇಜ್ ಒಂದು ಹಂಚಿಕೊಂಡಿದ್ದು, ವೈರಲ್ ಆಗಿದೆ.

ವಿಡಿಯೊದಲ್ಲಿ ಹೊಟೆಲ್ ಒಂದರಲ್ಲಿ ಕುಳಿತು, ಊಟ ಮಾಡುತ್ತಾ ಜೋಡಿ ಹರಟುತ್ತಿದೆ. ಆಗ ಪ್ರಿಯಾಂಕಾ ನಿಕ್ ಅವರನ್ನು ಮುದ್ದು ಮಾಡುತ್ತಾ ಕಿಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಕೂಡಾ ಜೊತೆಯಲ್ಲಿದ್ದಾರೆ. ತಾರಾ ದಂಪತಿಯ ಈ ವಿಡಿಯೊ ಅಭಿಮಾನಿಗಳಿಗೆ ಖುಷಿ ನೀಡಿದ್ದು, ತಮ್ಮ ನೆಚ್ಚಿನ ಜೋಡಿ ಖುಷಿಯಿಂದ ದಿನ ಕಳೆಯುತ್ತಿರುವುದನ್ನು ನೋಡಿ ಪುಳಕಿತಗೊಂಡಿದ್ದಾರೆ.

ಫ್ಯಾನ್ಸ್ ಹಂಚಿಕೊಂಡ ವಿಡಿಯೊ ಇಲ್ಲಿದೆ:

ಈ ಮೊದಲು ನಿಕ್ ಜೋನಾಸ್ ಲಾಸ್ ಏಂಜಲೀಸ್​ನಲ್ಲಿದ್ದರೆ, ಪ್ರಿಯಾಂಕಾ ಲಂಡನ್​ನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಪ್ರಿಯಾಂಕಾ ಕೈಯಲ್ಲಿ ಹಲವು ಹಾಲಿವುಡ್ ಚಿತ್ರಗಳಿದ್ದು, ಖ್ಯಾತ ತಾರೆಗಳೊಂದಿಗೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ:

‘ಬಿಗ್​ ಬಾಸ್​ ಸೀಸನ್ 9’ ಆರಂಭ ಯಾವಾಗ? ಪರಮೇಶ್ವರ್​ ಗುಂಡ್ಕಲ್​ ಕೊಟ್ರು ಉತ್ತರ

Kareena Kapoor: ಕೊವಿಡ್​ ಮೂರನೆ ಅಲೆ ಭೀತಿ; ಪತಿ ಸೈಫ್ ಮತ್ತು ಮಕ್ಕಳೊಂದಿಗೆ ಮಾಲ್ಡೀವ್ಸ್​ಗೆ ಹಾರಿದ ಕರೀನಾ

(A fan shares a Video Of Priyanka chopra with her husband Nick Jonas in a restaurant at London)

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?