3D ರಾಮಾಯಣ: ರಾಮನ ಪಾತ್ರಕ್ಕೆ ಮಹೇಶ್​ ಬಾಬು ಬದಲಿಗೆ ರಣಬೀರ್ ಕಪೂರ್​?

ರಾಮಾಯಣವನ್ನು ಆಧರಿಸಿದ ಈ ಸಿನಿಮಾ ಮೂರು ಪಾರ್ಟ್​​ಗಳಲ್ಲಿ ಮೂಡಿಬರಲಿದೆ. 700 ಕೋಟಿ ರೂ. ಬಜೆಟ್​ ಮೀಸಲಿಡಲಾಗಿದೆ. ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಅಧಿಕೃತವಾಗಿ ಚಿತ್ರ ಘೋಷಣೆ ಆಗುವ ಸಾಧ್ಯತೆ ಇದೆ.

3D ರಾಮಾಯಣ: ರಾಮನ ಪಾತ್ರಕ್ಕೆ ಮಹೇಶ್​ ಬಾಬು ಬದಲಿಗೆ ರಣಬೀರ್ ಕಪೂರ್​?
ಮಹೇಶ್​ ಬಾಬು - ರಣಬೀರ್ ಕಪೂರ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 20, 2021 | 8:40 AM

ಪುರಾಣದ ಕಥೆಗಳು ಎಂದೆಂದಿಗೂ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತವೆ. ಹಾಗಾಗಿ ಮಹಾಭಾರತ, ರಾಮಾಯಣವನ್ನು ಆಧರಿಸಿ ಹಲವು ಸಿನಿಮಾ, ಧಾರಾವಾಹಿ, ವೆಬ್​ಸಿರೀಸ್​, ನಾಟಕಗಳು ಮೂಡಿಬರುತ್ತಲೇ ಇವೆ. ಬಾಲಿವುಡ್​ನಲ್ಲಿ ರಾಮಾಯಣ ಆಧರಿಸಿ 3ಡಿ ಸಿನಿಮಾ ಮಾಡಲು ಖ್ಯಾತ ನಿರ್ದೇಶಕ ನಿತೇಶ್​ ತಿವಾರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಸಖತ್​ ನಿರೀಕ್ಷೆ ಹುಟ್ಟುಹಾಕುತ್ತಿದೆ. ರಾಮ, ಸೀತೆ, ಲಕ್ಷ್ಮಣ, ರಾವಣನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಯಾರು ಎಂಬ ಕೌತುಕ ಸಿನಿಪ್ರಿಯರ ಮನದಲ್ಲಿ ಮೂಡಿದೆ. ಅಚ್ಚರಿ ಎಂದರೆ, ಮಹೇಶ್​ ಬಾಬು ಮಾಡಬೇಕಾಗಿದ್ದ ರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​ ನಟಿಸುವ ಸಾಧ್ಯತೆ ಇದೆ. ಈ ಬಗ್ಗೆ ಬಾಲಿವುಡ್​ ಅಂಗಳದಿಂದ ಗುಸುಗುಸು ಕೇಳಿಬರುತ್ತಿದೆ.

ಈ ಸಿನಿಮಾದಲ್ಲಿ ರಾಮನಾಗಿ ಮಹೇಶ್​ ಬಾಬು ಹಾಗೂ ರಾವಣನಾಗಿ ಹೃತಿಕ್​ ರೋಷನ್​ ನಟಿಸುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಾಮನ ಪಾತ್ರವನ್ನು ಮಹೇಶ್​ ಬಾಬು ರಿಜೆಕ್ಟ್​ ಮಾಡಿದ್ದಾರಂತೆ. ಅವರ ಬದಲು ಬಾಲಿವುಡ್​ನ ಹ್ಯಾಂಡ್ಸಮ್​ ನಟ ರಣಬೀರ್​ ಕಪೂರ್​ಗೆ ನಿರ್ದೇಶಕರು ಆಫರ್ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರು ಒಪ್ಪಿಕೊಂಡಿದ್ದಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ.

ಅಷ್ಟಕ್ಕೂ ಮಹೇಶ್​ ಬಾಬು ಇಂಥ ಒಳ್ಳೆಯ ಆಫರ್​ ಕೈಚೆಲ್ಲಿದ್ದೇಕೆ? ಅದಕ್ಕೆ ರಾಜಮೌಳಿ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಸುದ್ದಿ ಆಗಿರುವಂತೆ ರಾಜಮೌಳಿ ಮತ್ತು ಮಹೇಶ್​ ಬಾಬು ಜೊತೆಯಾಗಿ ಒಂದು ಸಿನಿಮಾ ಮಾಡಲಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ರಾಜಮೌಳಿ ಒಮ್ಮೆ ಒಂದು ಸಿನಿಮಾಗೆ ಕೈಹಾಕಿದರೆ ಅದನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಮಹೇಶ್​ ಬಾಬು ಬೇರೊಂದು ಸಿನಿಮಾಗೆ ಡೇಟ್ಸ್​ ಹೊಂದಿಸುವುದು ಕಷ್ಟ. ಹಾಗಾಗಿ ಅವರು ರಾಮನಾಗುವ ಅವಕಾಶ ತೊರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಾಮನ ಪಾತ್ರಕ್ಕೆ ರಣಬೀರ್​ ಕಪೂರ್​ ಸೂಕ್ತ ಆಗುತ್ತಾರೆ ಎನ್ನುವ ನಂಬಿಕೆ ಸ್ವತಃ ನಿತೇಶ್​ ತಿವಾರಿ ಅವರಿಗೆ ಇದೆ ಎಂಬ ಬಗ್ಗೆಯೂ ವರದಿ ಆಗಿದೆ. ಆದರೆ ಈ ಯಾವ ವಿಚಾರಗಳ ಬಗ್ಗೆಯೂ ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಅತ್ತ ರಣಬೀರ್​ ಕಪೂರ್​ ಕೂಡ ಏನನ್ನೂ ಬಾಯಿಬಿಟ್ಟಿಲ್ಲ. ಮೂರು ಪಾರ್ಟ್​​ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. 700 ಕೋಟಿ ರೂ. ಬಜೆಟ್​ ಮೀಸಲಿಡಲಾಗಿದೆ. ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಅಧಿಕೃತವಾಗಿ ಈ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ:

ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗೆ ಗುಡ್​ ಬೈ ಹೇಳಿದ ರಣಬೀರ್​; ಕಾರಣವೇನು?

ಫಸ್ಟ್​ಲುಕ್​ನಲ್ಲೇ ದಾಖಲೆ ಬರೆದ ಮಹೇಶ್​ ಬಾಬು; ಇದು ‘ಸರ್ಕಾರು ವಾರಿ ಪಾಟ’ ಹವಾ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್