AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದ ಜೊತೆ ನಟ ಸಲ್ಮಾನ್ ಖಾನ್​ಗೆ ಇದೆ ಒಂದು ಸಂಬಂಧ; ಏನದು?

‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಸಿನಿಮಾದ ಸೋಲಿನ ಬಳಿಕ ಸಲ್ಮಾನ್​ ಖಾನ್​ ಅವರು ‘ಟೈಗರ್​ 3’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಆ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಅಫ್ಘಾನಿಸ್ತಾನದ ಜೊತೆ ನಟ ಸಲ್ಮಾನ್ ಖಾನ್​ಗೆ ಇದೆ ಒಂದು ಸಂಬಂಧ; ಏನದು?
ಸಲ್ಮಾನ್​ ಖಾನ್​
TV9 Web
| Edited By: |

Updated on: Aug 20, 2021 | 9:35 AM

Share

ಪ್ರಸ್ತುತ ಅಫ್ಘಾನಿಸ್ತಾನ ಪರಿಸ್ಥಿತಿ ಹೀನಾಯವಾಗಿದೆ. ತಾಲಿಬಾನ್ ಹಿಡಿತಕ್ಕೆ ಸಿಕ್ಕಿರುವ ಅಲ್ಲಿನ ಜನರ ಜೀವನ ನಕರವಾಗಿದೆ. ಅಫ್ಘಾನ್​ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಜಗತ್ತಿನಾದ್ಯಂತ ಪ್ರಾರ್ಥನೆ ಮಾಡಲಾಗುತ್ತಿದೆ. ಇದರ ನಡುವೆ ಸಲ್ಮಾನ್​ ಖಾನ್​ಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಬಾಲಿವುಡ್​ನಲ್ಲಿ ಸ್ಟಾರ್​ ಆಗಿ ಮಿಂಚುತ್ತಿರುವ ಸಲ್ಲುಗೆ ಅಫ್ಘಾನಿಸ್ತಾನದ ಜೊತೆ ಒಂದು ಸಂಬಂಧ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಹಾಗಂತ ಸಲ್ಮಾನ್​ ಖಾನ್​ ನೇರವಾಗಿ ಅಫ್ಘಾನ್ ಜೊತೆ ಯಾವುದೇ ಲಿಂಕ್​ ಇಟ್ಟುಕೊಂಡಿಲ್ಲ. ಇದು ಅವರ ಪೂರ್ವಜರಿಗೆ ಸಂಬಂಧಿಸಿದ್ದು ಎಂಬುದು ವಿಶೇಷ.

ಕೆಲವು ಪೋರ್ಟಲ್​ಗಳು ವರದಿ ಮಾಡಿರುವಂತೆ ಸಲ್ಮಾನ್​ ಖಾನ್​ ಅವರ ಪೂರ್ವಜರು ಅಫ್ಘಾನಿಸ್ತಾನದವರು. ಸಲ್ಲು ಮುತ್ತಾತ ಅನ್ವರ್​ ಖಾನ್​ ಅವರು ಮೂಲತಃ ಅಘ್ಫಾನ್​ನವರು. ಅಲ್ಲಿಂದ ಭಾರತಕ್ಕೆ ಬಂದ ಅವರು ಭೊಪಾಲ್​ನಲ್ಲಿ ನೆಲೆಸಿದರು. ಬ್ರಿಟಿಷ್​ ಇಂಡಿಯಾದ ಸೇನೆಯಲ್ಲಿ ಅವರು ಸೈನಿಕನಾಗಿದ್ದರು. ಹಾಗಾಗಿ ಸಲ್ಮಾನ್​ ಖಾನ್​ ಕೂಡ ಮೂಲತಃ ಅಘ್ಫಾನ್​ವರು ಎಂಬ ಸುದ್ದಿ ಕೇಳಿ ಸ್ವತಃ ಅವರ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಸಿನಿಮಾದ ಸೋಲಿನ ಬಳಿಕ ಸಲ್ಮಾನ್​ ಖಾನ್​ ಅವರು ‘ಟೈಗರ್​ 3’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಆ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸಲ್ಲುಗೆ ಜೋಡಿಯಾಗಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ವಿಲನ್ ಪಾತ್ರದಲ್ಲಿ ಇಮ್ರಾನ್ ಹಷ್ಮಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ‘ಅಂತಿಮ್​: ದಿ ಫೈನಲ್​ ಟ್ರುತ್​’, ‘ಪಠಾಣ್​’ ಮುಂತಾದ ಸಿನಿಮಾಗಳಲ್ಲಿ ಸಲ್ಮಾನ್​ ಖಾನ್​ ಅತಿಥಿ ಪಾತ್ರ ಸಹ ಮಾಡುತ್ತಿದ್ದಾರೆ.

ನಿರ್ದೇಶಕನಿಗೆ ಬಂದಿತ್ತು ಜೀವ ಬೆದರಿಕೆ:

ಅಪ್ಘಾನಿಸ್ತಾನದ ಜನರ ಪಾಲಿಗೆ ತಾಲಿಬಾನಿಗಳು ವೈರಿಗಳಂತೆ ಕಾಡುತ್ತಿದ್ದಾರೆ. ಅವರ ಕ್ರೂರತೆಗೆ ಆ ದೇಶದ ಜನ ಬೆಚ್ಚಿ ಬಿದ್ದಿದ್ದಾರೆ. ಈ ಮಧ್ಯೆ ಅಲ್ಲಿಂದ ಪ್ರಾಣ ಉಳಿಸಿಕೊಂಡು ಬಂದ ಅನೇಕರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಶೂಟಿಂಗ್​ ವೇಳೆ ತಾಲಿಬಾನಿಗಳಿಂದ ಜೀವ ಬೆದರಿಕೆ ಬಂದಿತ್ತು ಎಂಬ ವಿಚಾರವನ್ನು ಬಾಲಿವುಡ್​ನ ಖ್ಯಾತ ನಿರ್ದೇಶಕ ಕಬೀರ್​ ಖಾನ್​ ಹೇಳಿಕೊಂಡಿದ್ದಾರೆ. ‘ಅದು ನನ್ನ ಮೊದಲ ಸಿನಿಮಾ. ‘ಕಾಬೂಲ್​ ಎಕ್ಸ್​​ಪ್ರೆಸ್’​ (2006) ಶೂಟಿಂಗ್​ಗಾಗಿ ನಾನು ಅಪ್ಘಾನಿಸ್ತಾನಕ್ಕೆ ತೆರಳಿದ್ದೆ. ಆದಿತ್ಯ ಚೋಪ್ರಾ ಅವರು ಅಪ್ಘಾನಿಸ್ತಾನದಲ್ಲಿ ಶೂಟ್​ ಮಾಡೋದು ಕಷ್ಟ ಎಂದು ಹೇಳಿದ್ದರು. ಆದರೆ, ಅಲ್ಲಿಯ ಜನರು ಸಿನಿಮಾ ಶೂಟ್​ಗೆ ಸಹಾಯ ಮಾಡಿದ್ದರು. ಈ ವೇಳೆ ತಾಲಿಬಾನಿಗಳಿಂದ ಜೀವ ಬೆದರಿಕೆ ಇತ್ತು. ಆದರೆ, ಅಲ್ಲಿನ ಜನರು ನನಗೆ ಸಂಪೂರ್ಣ ಬೆಂಬಲ ನೀಡಿದ್ದರು. ಈಗ ಅವರೇ ಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸಹಾಯ ಮಾಡೋಕೆ ಆಗುತ್ತಿಲ್ಲ ಎನ್ನುವ ಬೇಸರ ನನಗಿದೆ’ ಎಂದಿದ್ದಾರೆ ಕಬೀರ್​ ಖಾನ್.

​ಇದನ್ನೂ ಓದಿ:

‘ದುಡ್ಡು ಕೊಟ್ಟರೆ ಮಾತ್ರ ಬಾಗಿಲು ತೆಗಿತೀನಿ’; ಸಲ್ಮಾನ್​ ಖಾನ್​ ತಮ್ಮನನ್ನೇ ಹೊರಗೆ ನಿಲ್ಲಿಸಿ, ವಾಪಸ್​​ ಕಳಿಸಿದ ಭೂಪ

ರಷ್ಯಾಗೆ ಹೊರಟ ಸಲ್ಮಾನ್​ ಖಾನ್​-ಕತ್ರಿನಾ ಕೈಫ್​; ಏನಿದು ಸಮಾಚಾರ?

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?