ತನಗಿಂತ 12 ವರ್ಷ ಕಿರಿಯ ನಟನ ಜೊತೆ ಸುತ್ತಾಡುತ್ತಿರುವ ಮಲೈಕಾ ಅರೋರಾ ಸೌಂದರ್ಯದ ಗುಟ್ಟು ರಟ್ಟು!

ತನಗಿಂತ 12 ವರ್ಷ ಕಿರಿಯ ನಟನ ಜೊತೆ ಸುತ್ತಾಡುತ್ತಿರುವ ಮಲೈಕಾ ಅರೋರಾ ಸೌಂದರ್ಯದ ಗುಟ್ಟು ರಟ್ಟು!

TV9 Web
| Updated By: shivaprasad.hs

Updated on: Aug 20, 2021 | 1:36 PM

ಬಾಲಿವುಡ್ ನಟಿ, ಡಾನ್ಸರ್ ಮಲೈಕಾ ಅರೋರಾ ಅವರ ಸೌಂದರ್ಯದ ಗುಟ್ಟು ರಟ್ಟಾಗಿದೆ. ಈ ಕುರಿತ ವಿಶೇಷ ವಿಡಿಯೊ ವರದಿ ಇಲ್ಲಿದೆ.

ಬಾಲಿವುಡ್​ನ ಖ್ಯಾತ​ ಡ್ಯಾನ್ಸರ್​ ಆಗಿದ್ದ ಮಲೈಕಾ ಅರೋರಾ ಅವರಿಗೆ ಈಗ 47 ವರ್ಷ ವಯಸ್ಸು. ಅವರನ್ನು ಪ್ರೀತಿಸುತ್ತಿರುವ ನಟ ಅರ್ಜುನ್​ ಕಪೂರ್​ಗೆ 35ರ ಪ್ರಾಯ. ಮಲೈಕಾ ಈ ಹಿಂದೆ ಸಲ್ಮಾನ್ ಖಾನ್ ಸಹೋದರ, ನಟ, ನಿರ್ಮಾಪಕ ಅರ್ಬಾಜ್ ಖಾನ್​ರನ್ನು ವಿವಾಹವಾಗಿ, ವಿಚ್ಛೇದನ ಪಡೆದಿದ್ದರು. ಈ ಮಾಜಿ ದಂಪತಿಗೆ 19 ವರ್ಷದ ಮಗನಿದ್ದಾನೆ. ಈಗ ನಟ ಅರ್ಜುನ್ ಕಪೂರ್ ಜೊತೆ ಸುತ್ತಾಡುತ್ತಿರುವ ಮಲೈಕಾ ಅರೋರಾ ತಮ್ಮೀರ್ವರ ಚಿತ್ರಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಆಗಾಗ ಸುದ್ದಿಲ್ಲಿರುತ್ತಾರೆ. ಇತ್ತೀಚೆಗಷ್ಟೇ ಮಲೈಕಾ ಮನೆಯ ಸಮೀಪ  ಅರ್ಜುನ್ ಫ್ಲಾಟ್ ಖರೀದಿಸಿದ್ದರು. ಇಂತಿಪ್ಪ ಮಲೈಕಾರ ಸೌಂದರ್ಯದ ಗುಟ್ಟು ಬಯಲಾಗಿದ್ದು, ಅವರು ಬಳಸುವ ಖನಿಜಾಂಶಯುಕ್ತ ಬ್ಲಾಕ್ ವಾಟರ್​ ಇದಕ್ಕೆ ಕಾರಣ ಎಂಬುದು ತಿಳಿದುಬಂದಿದೆ. ಯೋಗ, ಜಿಮ್ ಎಂದೆಲ್ಲಾ ಸುತ್ತಾಡುವ ಮಲೈಕಾಗೆ ಎಲ್ಲವುಗಳಿಗಿಂತ ಹೆಚ್ಚು ಸಹಾಯ ಮಾಡುವುದು ಬ್ಲಾಕ್ ವಾಟರ್ ಅಂತೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡಾ ಬ್ಲಾಕ್ ವಾಟರ್ ಬಳಸುತ್ತಾರಂತೆ!

ಇದನ್ನೂ ಓದಿ:

ವರಮಹಾಲಕ್ಷ್ಮೀ ಹಬ್ಬದ ದಿನವೇ ಗುಡ್​ ನ್ಯೂಸ್​ ನೀಡಿದ ಶಿವಣ್ಣ; ಅಚ್ಚರಿ ಮೂಡಿಸಿದ ಹೊಸ ಚಿತ್ರದ ಪೋಸ್ಟರ್​

(Bollywood dancer actor Malaika Arora’s beauty secret is revealed)