ಬಾಂಬೆ ಹೀರೋಯಿನ್ ಹೇಗೆ ಮಾತಾಡ್ತಾರೆ? ಮಿಮಿಕ್ರಿ ಮಾಡಿದ ಜಗ್ಗೇಶ್: ಇಲ್ಲಿದೆ ಮಸ್ತ್ ಕಾಮಿಡಿ
ಮಠ, ಎದ್ದೇಳು ಮಂಜುನಾಥ ರೀತಿಯ ವಿಭಿನ್ನ ಸಿನಿಮಾಗಳನ್ನು ನೀಡಿದ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಅವರು ಈಗ ‘ರಂಗನಾಯಕ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇತ್ತೀಚೆಗೆ ಇದರ ಸುದ್ದಿಗೋಷ್ಠಿ ನಡೆಯಿತು.
ನಟ ಜಗ್ಗೇಶ್ ಎಂಥ ಕಲಾವಿದ ಎಂಬುದನ್ನು ಹೊಸದಾಗಿ ವಿವರಿಸಬೇಕಿಲ್ಲ. ಸಿನಿಮಾದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲಿಯೂ ಎಲ್ಲರನ್ನೂ ನಗಿಸುತ್ತ, ಖುಷಿಯಾಗಿರುವ ವ್ಯಕ್ತಿ ಅವರು. ಸದ್ಯ ಅವರು ‘ರಂಗನಾಯಕ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ‘ಮಠ’ ಗುರುಪ್ರಸಾದ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಶೂಟಿಂಗ್ ನಡುವೆಯೇ ಸುದ್ದಿಗೋಷ್ಠಿ ನಡೆಸಿದ ‘ರಂಗನಾಯಕ’ ಚಿತ್ರತಂಡ ಕೆಲವು ವಿಚಾರಗಳನ್ನು ಹಂಚಿಕೊಂಡಿತು. ಈ ವೇಳೆ ಬಾಂಬೆ ಹೀರೋಯಿನ್ಗಳು ಹೇಗೆ ಮಾತನಾಡುತ್ತಾರೆ ಎಂದು ಜಗ್ಗೇಶ್ ಮಿಮಿಕ್ತಿ ಮಾಡಿ ತೋರಿಸಿದರು.
ಬಹಳ ದಿನಗಳ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಿರುವುದಕ್ಕೆ ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ‘ನಾನು ಮತ್ತೆ ಸೆಟ್ಗೆ ಮರಳಿದ್ದೇನೆ. ಈ ಖುಷಿ ಎರಡು ವರ್ಷದಿಂದ ನಿಂತು ಹೋಗಿತ್ತು. ಬ್ಯೂಟಿಫುಲ್ ಇಂಡಸ್ಟ್ರಿಯಲ್ಲಿ ನಾವಿದೀವಿ ಎನ್ನುವ ಹೆಮ್ಮೆ ನನಗೆ ಇದೆ. ಆದರೆ, ಈ ಕೊರೊನಾದಿಂದ ತಾಂತ್ರಿಕ ವರ್ಗದವರಿಗೆ ಎಷ್ಟು ತೊಂದರೆ ಆಗಿರಬಹುದು ಎಂದು ಯೋಚಿಸುತ್ತಿದ್ದೆ. ಇಂದು ನಾವು ಯಾಂತ್ರಿಕ ಬದುಕಲ್ಲಿ ಬದುಕ್ತಾ ಇದೀವಿ. ಅಂದು ತುಂಬಾ ಭಾವುಕರಾಗುತ್ತಿದ್ದೆವು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಅದ್ದೂರಿ ಸೆಟ್, ದೊಡ್ಡ ಬಜೆಟ್; ಇದು ಜಗ್ಗೇಶ್ ‘ರಂಗನಾಯಕ’ ಸ್ಪೆಷಲ್
ತಲೆ ಬಾಗಿ ಕ್ಷಮೆ ಕೋರುವೆ; ರಾಮು ನಿಧನದ ಬಗ್ಗೆ ಮಾಲಾಶ್ರೀಗೆ ಜಗ್ಗೇಶ್ ಹೀಗೆ ಹೇಳಿದ್ದೇಕೆ?
Published on: Aug 20, 2021 09:58 AM
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ

