ಆಹಾ! ರುಚಿಕರವಾದ ಮಸಾಲಾ ರೊಟ್ಟಿ ಮಾಡುವ ವಿಧಾನ ತಿಳಿಯಿರಿ
ಉತ್ತರ ಕರ್ನಾಟಕದ ಸ್ಪೆಷಲ್ ಮಸಾಲಾ ರೊಟ್ಟಿ ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯಿರಿ. ಒಮ್ಮೆ ಮನೆಯಲ್ಲಿ ತಯಾರಿಸಿ ರುಚಿ ಸವಿಯಿರಿ. ಮನೆಯವರೆಲ್ಲರಿಗೂ ಇಷ್ಟವಾಗುವಂತಿದೆ.
ಸಾಮಾನ್ಯವಾಗಿ ಗೋಧಿ ಹಿಟ್ಟಿನ ರೊಟ್ಟಿಯನ್ನು ಎಲ್ಲೆ ಮನೆಯಲ್ಲಿಯೂ ಮಾಡುತ್ತಾರೆ. ಅದಕ್ಕೆ ಖಾರದ ಚಟ್ನಿ, ಭಾಜಿ ಮಾಡಿ ಸವಿಯುತ್ತೇವೆ. ಆದರೆ ರೊಟ್ಟಿಗೇ ಮಸಾಲಾ ಹಾಕಿ ಮಾಡಿರುವ ರೊಟ್ಟಿ ಸವಿಯಲು ಎಷ್ಟು ರುಚಿಕರವಾಗಿರುತ್ತದೆ ಗೊತ್ತೇ? ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಮಸಾಲಾ ರೊಟ್ಟಿ ಇಷ್ಟವಾಗುವಂತಿದೆ. ವಿಡಿಯೋದಲ್ಲಿ ಹೇಳಿರುವಂತೆ ಸರಿಯಾದ ಪ್ರಮಾಣದಲ್ಲಿ ಪದಾರ್ಥಗಳನ್ನು ಮಿಶ್ರಣ ಮಾಡಿ ತಯಾರಿಸಿದ ರೊಟ್ಟಿ ಸವಿಯಿರಿ. ಔಟ್ ಸೈಡ್ ಫುಡ್ಗಳನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದರ ಬದಲಿಗೆ ಮನೆಯಲ್ಲಿಯೇ ತಯಾರಿಸಿದ ತಿಂಡಿಗಳನ್ನು ಸವಿಯುತ್ತಾ ಆರೋಗ್ಯವನ್ನೂ ಕಾಪಾಡಿಕೊಳ್ಳಿ.
ಉತ್ತರ ಕರ್ನಾಟಕದ ಸ್ಪೆಷೆಲ್ ಮಸಾಲಾ ರೊಟ್ಟಿ ತಯಾರಿಸಲು ಗೋಧಿ ಹಿಟ್ಟು, ಉಪ್ಪು, ಅರಿಶಿಣ, ಗರಂ ಮಸಾಲಾ, ಜೀರಿಗೆ, ಖಾರದ ಪುಡಿ, ಕಸ್ತೂರಿ ಮೇತಿ ಇಷ್ಟೇ ಪದಾರ್ಥಗಳು ಸಾಕು. ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿದು ರುಚಿಕರವಾದ ಮಸಾಲಾ ರೊಟ್ಟಿ ಸವಿಯಿರಿ.
ಇದನ್ನೂ ಓದಿ:
ಡ್ರೈ ಫ್ರೂಟ್ಸ್ ಉಂಡೆ; ರುಚಿಕರವಾದ ತಿಂಡಿ ಮಾಡಿ ಸವಿಯಿರಿ
ಸ್ಪೆಷೆಲ್ ಶೇಂಗಾ ಭಾಜಿ ಮಾಡುವ ವಿಧಾನ ಗೊತ್ತೇ? ಕೇವಲ 5 ನಿಮಿಷ ಸಾಕು ದಿಢೀರ್ ತಿಂಡಿ ತಯಾರಿಸಲು