ಮಿಂಚಿನ ಗತಿಯಲ್ಲಿ ಪ್ಲೇಟಿಗೆ ಬೀಳುವ ಈ ವ್ಯಕ್ತಿಯ ದೋಸೆ ತಿನ್ನುವುದಕ್ಕಿಂತ ನೋಡುವುದರಲ್ಲೇ ಜಾಸ್ತಿ ಮಜ!
ರೋಬೋವೊಂದರ ಗತಿಯಲ್ಲಿ ಆತ ದೋಸೆಯನ್ನು ಪ್ಲೇಟಿಗೆ ಟ್ರಾನ್ಸ್ಫರ್ ಮಾಡಿ ಕಾವಲಿ ಮೇಲಿಂದ ಸ್ಯೋಂಯನೆ (ಫಾಸ್ಟ್ ಸ್ಲೈಡ್ ಮೋಷನ್) ಜಾರಿಸುತ್ತಿದ್ದ್ದಾನೆ. ಆತನ ಸಹಾಯಕ ಸಹ ಅದೇ ವೇಗದಲ್ಲಿ ಅದನ್ನು ಹಿಡಿದು ಬೇರೆಯವರಿಗೆ ರವಾನಿಸುತ್ತಿದ್ದಾನೆ
ಮಹಿಂದ್ರ ಮೋಟಾರ್ಸ್ ಸಂಸ್ಥೆಯ ಚೇರ್ಮನ್ ಮತ್ತು ಟೀಮ್ ಮೆಂಬರ್ ಅನಂದ ಮಹಿಂದ್ರಾ ಅವರಿಗೆ ಪುರುಸೊತ್ತಿಲ್ಲದಷ್ಟು ಕೆಲಸಗಳಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ಅವರನ್ನು ಫಾಲೋ ಮಾಡುವವರು ಅವರ ವಿಭಿನ್ನ ಅಭಿರುಚಿಯ ವಿಡಿಯೋಗಳನ್ನು ನೋಡಿರುತ್ತಾರೆ. ಪ್ರಾಣಿಗಳು, ಆಟೋಮೊಬೀಲ್, ನಿಸರ್ಗ, ಸಾಹಸ, ಕ್ರೀಡೆ, ಮಾನವೀಯತೆ ಮೊದಲಾದ ಎಲ್ಲ ಅಯಾಮಗಳನ್ನು ಬಿಂಬಿಸುವ ವಿಡಿಯೋಗಳನ್ನು ಅವರು ಪೋಸ್ಟ್ ಮಾಡುತ್ತಿರುತ್ತಾರೆ. ತಮಾಷೆ ಮತ್ತು ಹಾಸ್ಯದ ವಿಡಿಯೋಗಳನ್ನು ಸಹ ಅವರ ಪೋಸ್ಟ್ ಮಾಡುತ್ತಾರೆ. ಅವರ ಎಲ್ಲ ವಿಡಿಯೋಗಳಿಗೆ ಮಿಲಿಯಗಟ್ಟಲೆ ವ್ಯೂಸ್ ಮತ್ತು ಲೈಕ್ಸ್ ಬರುತ್ತವೆ.
ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಆಗಸ್ಟ್ 17ರಂದು ಅನಂದ್, ದೋಸೆ ಮಾಡುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ಪೋಸ್ಟ್ ಮಾಡಿದ್ದಾರೆ. 28 ಸೆಕೆಂಡುಗಳ ಈ ವಿಡಿಯೋನಲ್ಲಿ ದೋಸೆ ಮಾಡುತ್ತಿರುವ ವ್ಯಕ್ತಿಯ ವೇಗ ನಮ್ಮಲ್ಲಿ ಸೋಜಿಗ ಹುಟ್ಟಿಸುತ್ತದೆ. ತನ್ನ ಕಾರ್ಯದಲ್ಲಿ ಆತ ಸಾಧಿಸಿರುವ ಪರಿಣಿತಿ ಎಣಿಕೆಗೆ ನಿಲುಕದಂಥದ್ದು.
This gentleman makes robots look like unproductive slowpokes… I’m tired just watching him…and hungry, of course.. pic.twitter.com/VmdzZDMiOk
— anand mahindra (@anandmahindra) August 17, 2021
ಕಾವಲಿ ಮೇಲೆ ನಾಲ್ಕು ದೋಸೆಗಳನ್ನು ಆಯಾತಾಕಾರದಲ್ಲಿ ಹಾಕಿದ್ದಾನೆ. ಎಲ್ಲ ದೋಸೆಗಳ ಆಕಾರ ಒಂದೇ ತೆರನಾಗಿದೆ, ಅಂದರೆ ಒಂದು ಚಿಕ್ಕದು ಮತ್ತೊಂದು ದೊಡ್ಡದು ಅನ್ನೋ ಥರ ಇಲ್ಲ. ಅದು ಬಿಡಿ, ಹೋಟೆಲ್ಗಳಲ್ಲಿ ದೋಸೆ ಮಾಡುವವರು ಕಣ್ಣುಗಳನ್ನು ಮುಚ್ಚಿ ಒಂದೇ ಸೈಜಿನ ನೂರಾರು ದೋಸೆಗಳನ್ನು ಹಾಕಬಲ್ಲರು. ಆದರೆ ಇಲ್ಲಿರುವ ವ್ಯಕ್ತಿ ದೋಸೆ ತಯಾರಾದ ನಂತರ ಅದನ್ನು ಪ್ಲೇಟಿಗೆ ಹಾಕಿ ಕಾವಲಿಯ ಮತ್ತೊಂದು ಬದಿಯಲ್ಲಿರುವ ಇನ್ನೊಬ್ಬ ವ್ಕಕ್ತಿಗೆ ಸಾಗಿಸುವ ರೀತಿ ಮತ್ತು ವೇಗವನ್ನು ಗಮನಿಸಿ. ಅನಂದ ಮಹಿಂದ್ರ ಅದನ್ನೇ ಹೇಳುತ್ತಿದ್ದಾರೆ.
ರೋಬೋವೊಂದರ ಗತಿಯಲ್ಲಿ ಆತ ದೋಸೆಯನ್ನು ಪ್ಲೇಟಿಗೆ ಟ್ರಾನ್ಸ್ಫರ್ ಮಾಡಿ ಕಾವಲಿ ಮೇಲಿಂದ ಸ್ಯೋಂಯನೆ (ಫಾಸ್ಟ್ ಸ್ಲೈಡ್ ಮೋಷನ್) ಜಾರಿಸುತ್ತಿದ್ದ್ದಾನೆ. ಆತನ ಸಹಾಯಕ ಸಹ ಅದೇ ವೇಗದಲ್ಲಿ ಅದನ್ನು ಹಿಡಿದು ಬೇರೆಯವರಿಗೆ ರವಾನಿಸುತ್ತಿದ್ದಾನೆ. ದೋಸೆ ಸವಿಯುವಾಗ ಸಿಗುವ ಆನಂದಕ್ಕೆ ಎಣೆಯಿಲ್ಲ ಆದರೆ, ಹೀಗೆ ಮಿಂಚಿನ ಗತಿಯಲ್ಲಿ ಟೇಬಲ್ಲಿಗೆ ಬರುವ ದೋಸೆಯನ್ನು ಸವಿಯುವುದು ಒಂದು ವಿಶಿಷ್ಟ ಅನುಭೂತಿ ಒದಗಿಸುವುದರಲ್ಲಿ ದೂಸ್ರಾ ಮಾತಿಲ್ಲ ಮಾರಾಯ್ರೇ.
ಇದನ್ನೂ ಓದಿ: ಜೈಲಿನಿಂದ ಬಿಡುಗಡೆ ಆದವನಿಗೆ ಯುದ್ದ ಗೆದ್ದು ಬಂದವರ ರೀತಿ ಅದ್ಧೂರಿ ಸ್ವಾಗತ, ಸನ್ಮಾನ; ವಿಡಿಯೋ ವೈರಲ್