AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಿಂದ ಬಿಡುಗಡೆ ಆದವನಿಗೆ ಯುದ್ದ ಗೆದ್ದು ಬಂದವರ ರೀತಿ ಅದ್ಧೂರಿ ಸ್ವಾಗತ, ಸನ್ಮಾನ; ವಿಡಿಯೋ ವೈರಲ್

ಜೈಲಿನಿಂದ ಬಿಡುಗಡೆ ಆದವನಿಗೆ ಅದ್ಧೂರಿ ಸ್ವಾಗತ ಮಾಡಿ ಕರೆಸಿಕೊಂಡಿರುವ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೈಲಿನಿಂದ ಬಿಡುಗಡೆಯಾದ ರಾಜು ದೇಸಾಯಿಗೆ ಅದ್ಧೂರಿ ಸ್ವಾಗತ ಮಾಡಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಗ್ರಾಮಕ್ಕೆ ಕರೆಸಿಕೊಳ್ಳಲಾಗಿದೆ.

ಜೈಲಿನಿಂದ ಬಿಡುಗಡೆ ಆದವನಿಗೆ ಯುದ್ದ ಗೆದ್ದು ಬಂದವರ ರೀತಿ ಅದ್ಧೂರಿ ಸ್ವಾಗತ, ಸನ್ಮಾನ; ವಿಡಿಯೋ ವೈರಲ್
ಜೈಲಿನಿಂದ ಬಿಡುಗಡೆಯಾದ ರಾಜು ದೇಸಾಯಿಗೆ ಅದ್ಧೂರಿ ಸ್ವಾಗತ
TV9 Web
| Updated By: ಆಯೇಷಾ ಬಾನು|

Updated on: Aug 19, 2021 | 11:58 AM

Share

ಬಾಗಲಕೋಟೆ: ಜೈಲಿನಿಂದ ಬಿಡುಗಡೆ ಆದವನಿಗೆ ಅದ್ಧೂರಿ ಸ್ವಾಗತ ಮಾಡಿ ಕರೆಸಿಕೊಂಡಿರುವ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೈಲಿನಿಂದ ಬಿಡುಗಡೆಯಾದ ರಾಜು ದೇಸಾಯಿಗೆ ಅದ್ಧೂರಿ ಸ್ವಾಗತ ಮಾಡಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಗ್ರಾಮಕ್ಕೆ ಕರೆಸಿಕೊಳ್ಳಲಾಗಿದೆ. ಸ್ವಾಗತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜು ದೇಸಾಯಿ ಸ್ವಾಗತದ ವೇಳೆ ಕೋವಿಡ್ ನಿಯಮ ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ.

ಯಾರಾದರೂ ಒಂದು ಕ್ರೀಡೆಯಲ್ಲಿ ಗೆದ್ದು ಬಂದರೆ, ಇಲ್ಲ ಯಾವುದೇ ಚುನಾವಣೆಯಲ್ಲಿ ಗೆದ್ದು ಬಂದರೆ ಅದ್ದೂರಿ ಸ್ವಾಗತ ಮಾಡೋದನ್ನು ನಾವು ಕಾಣುತ್ತೇವೆ.ಇಲ್ಲ ಯಾವುದಾದರೂ ಮಹಾ ಯುದ್ದದಲ್ಲಿ ಗೆದ್ದು ಬಂದರೆ ಅದ್ದೂರಿ ಸ್ವಾಗತ, ಸನ್ಮಾನ ಸಿಗುತ್ತದೆ. ಆದರೆ ಇತ್ತೀಚೆಗೆ ಜೈಲಿಗೆ ಹೋಗಿ‌ ಬಂದವರಿಗೂ ಸಂಭ್ರಮದ ಸ್ವಾಗತ ಸನ್ಮಾನ ಮಾಡುತ್ತಿರೋದು ಅತಿರೇಕದ ಪರಮಾವದಿ ಅಂತ ಹೇಳಬಹುದು.

ಬಾಗಲಕೋಟೆ ಜಿಲ್ಲೆ ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ರಾಜು ದೇಸಾಯಿ, ಪ್ರದೀಪ್ ದೇಸಾಯಿ ಎಂಬ ಅವಳಿ ಸಹೋದರರು ಜೈಲಿಂದ ಬಿಡುಗಡೆ ಆಗಿದ್ದು ಅವರಿಗೆ ಅದ್ದೂರಿ ಸನ್ಮಾನ ಮಾಡಿ ಸ್ವಾಗತ ಮಾಡಿದ್ದಾರೆ. ಕೊರಳಿಗೆ ಮಾಲೆ ಹಾಕಿ ತೆರೆದ ವಾಹನದಲ್ಲಿ ಹಳಿಂಗಳಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ. ಜಮಖಂಡಿ ಉಪಕಾರಾಗೃಹದಿಂದ ಬಿಡುಗಡೆಯಾದ ದೇಸಾಯಿ ಸಹೋದರರಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ ಮಾಡಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ..

ತೇರದಾಳ ತಾಲ್ಲೂಕಿನ ತಮದಡ್ಡಿ ಗ್ರಾಮಸ್ಥರಿಗೆ ಹಳಿಂಗಳಿ ಜೈನಭದ್ರಗಿರಿ ಬೆಟ್ಟದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆ ಅಲ್ಲಿ ಕಸ, ಗಿಡಗಳನ್ನು ಅಧಿಕಾರಿಗಳು ಆಗಸ್ಟ್ 4ರಂದು ತೆರವುಗೊಳಿಸುವುದಕ್ಕೆ ಮುಂದಾಗಿದ್ದರು. ಈ ವೇಳೆ ತಮದಡ್ಡಿ ಗ್ರಾಮಸ್ಥರಿಗೆ ಹಳಿಂಗಳಿ ಬೆಟ್ಟದಲ್ಲಿ ಜಾಗ ನೀಡಬಾರದು ಅಂತ ಹಳಿಂಗಳಿ ಗ್ರಾಮದ ಮಹಿಳೆಯರು ಸೇರಿದಂತೆ ನೂರಾರು ಜನರು ಪ್ರತಿಭಟನೆ ‌ಮಾಡಿದ್ದರು.ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಪ್ರತಿಭಟನೆ ಮುಂದಾಳತ್ವ ವಹಿಸಿಕೊಂಡಿದ್ದ ರಾಜು ದೇಸಾಯಿ, ಪ್ರದೀಪ್ ದೇಸಾತಿ ಯಲ್ಲಟ್ಟಿ ಎಂಬ ಇನ್ನೋರ್ವನನ್ನು ತೇರದಾಳ ಪೊಲೀಸರು ಬಂಧಿಸಿದ್ದರು. ಸದ್ಯ ಜಮಖಂಡಿ ಉಪಕಾರಾಗೃಹದಿಂದ ಬಿಡುಗಡೆ ಆಗಿದ್ದು ಈ ರೀತಿ ಅದ್ದೂರಿ ಸ್ವಾಗತ ಕೋರಲಾಗಿದೆ. ಮೆರವಣಿಗೆ ವಿಡಿಯೋಗಳಿಗೆ ಹಾಡುಗಳನ್ನು ಅಳವಡಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.ಜೊತೆಗೆ ಸ್ವಾಗತದ ಬರದಲ್ಲಿ ಕೊವಿಡ್ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ.

Grand Welcome raju desai for release from jail

ಜೈಲಿನಿಂದ ಬಿಡುಗಡೆಯಾದ ರಾಜು ದೇಸಾಯಿಗೆ ಅದ್ಧೂರಿ ಸ್ವಾಗತ

Grand Welcome raju desai for release from jail

ಜೈಲಿನಿಂದ ಬಿಡುಗಡೆಯಾದ ರಾಜು ದೇಸಾಯಿಗೆ ಅದ್ಧೂರಿ ಸ್ವಾಗತ

ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಬಡವ, ಶ್ರೀಮಂತ ಕಾರಣ ಕೊಡುತ್ತಿರುವ ಆರೋಪಿಗಳು