ಫಸ್ಟ್​ಲುಕ್​ನಲ್ಲೇ ದಾಖಲೆ ಬರೆದ ಮಹೇಶ್​ ಬಾಬು; ಇದು ‘ಸರ್ಕಾರು ವಾರಿ ಪಾಟ’ ಹವಾ

ಫಸ್ಟ್​ಲುಕ್​ನಲ್ಲೇ ದಾಖಲೆ ಬರೆದ ಮಹೇಶ್​ ಬಾಬು; ಇದು ‘ಸರ್ಕಾರು ವಾರಿ ಪಾಟ’ ಹವಾ
ಮಹೇಶ್​ ಬಾಬು

Sarkaru Vaari Paata First Look: ಸರ್ಕಾರು ವಾರಿ ಪಾಟ ಚಿತ್ರದ ಮೇಲೆ ಮಹೇಶ್​ ಬಾಬು ಅಭಿಮಾನಿಗಳಿಗೆ ಎಷ್ಟು ಕ್ರೇಜ್​ ಇದೆ ಎಂಬುದಕ್ಕೆ ಈ ಸಂಖ್ಯೆಯೇ​ ಸಾಕ್ಷಿ. ಆ.9ರಂದು ರಿಲೀಸ್​ ಆಗಲಿರುವ ಟೀಸರ್​ ಯಾವ ದಾಖಲೆ ಬರೆಯಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.

TV9kannada Web Team

| Edited By: Apurva Kumar Balegere

Aug 02, 2021 | 9:55 AM

Sarkaru Vaari Paata: ತಮ್ಮದೇ ಶೈಲಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ ಮಹೇಶ್​ ಬಾಬು (Mahesh Babu) ಅವರ ಹೊಸ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾಗಳನ್ನು ಮಾತ್ರ ಮಾಡುವುದು ಅವರ ರೂಢಿ. ಕಳೆದ ವರ್ಷ ಆರಂಭದಲ್ಲಿ, ಅಂದರೆ 2020ರ ಜನವರಿಯ 11ರಂದು ‘ಸರಿಲೇರು ನೀಕೆವ್ವರು’ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಕೊರೊನಾ ಲಾಕ್​ಡೌನ್​ ಕಾರಣದಿಂದ 2021ರಲ್ಲಿ ಮಹೇಶ್​ ಬಾಬು ನಟನೆಯ ಯಾವ ಚಿತ್ರವೂ ತೆರೆಕಂಡಿಲ್ಲ. 2022ರ ಜ.13ರಂದು ‘ಸರ್ಕಾರು ವಾರಿ ಪಾಟ’ (Sarkaru Vaari Paata) ತೆರೆಕಾಣಲಿದೆ. ಅದಕ್ಕೂ ಮುನ್ನ ಕೇವಲ ಫಸ್ಟ್​ಲುಕ್​ನಲ್ಲಿಯೇ ಈ ಸಿನಿಮಾ ಒಂದು ದಾಖಲೆ ಬರೆದಿದೆ. 

ಮಹೇಶ್​ ಜನ್ಮದಿನ ಸಮೀಪಿಸುತ್ತಿದೆ. ಆ.9ರಂದು ಅವರ ಹುಟ್ಟುಹಬ್ಬವಿದ್ದು, ಅದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದು ‘ಸರ್ಕಾರು ವಾರಿ ಪಾಟ’ ಚಿತ್ರದ ಟೀಸರ್​ ಬಿಡುಗಡೆ ಆಗಲಿದೆ. ಅದನ್ನು ತಿಳಿಸುವ ಸುಲವಾಗಿಯೇ ಜು.30ರಂದು ಫಸ್ಟ್​ಲುಕ್​ ರಿಲೀಸ್​ ಮಾಡಲಾಯಿತು. ವಿಶೇಷ ಎಂದರೆ, ಈ ಫಸ್ಟ್​ಲುಕ್​​ ನೋಡಿದ ಅಭಿಮಾನಿಗಳು ಟ್ವಿಟರ್​ನಲ್ಲಿ ದಾಖಲೆಗೆ ಕಾರಣ ಆಗಿದ್ದಾರೆ. ಕೇವಲ 24 ಗಂಟೆಯಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದ ಟಾಲಿವುಡ್​ನ ಮೊದಲ​ ಪೋಸ್ಟರ್​ ಎಂಬ ಖ್ಯಾತಿಗೆ ಇದು ಒಳಗಾಗಿದೆ.

ಒಂದು ದಿನ ಕಳೆಯುವುದರೊಳಗೆ ಟ್ವಿಟರ್​ನಲ್ಲಿ 95.6 ಸಾವಿರ ಮಂದಿ ಇದನ್ನು ಲೈಕ್​ ಮಾಡಿದ್ದರು. 49.1 ಸಾವಿರ ಬಾರಿ ರೀಟ್ವೀಟ್​ ಮಾಡಲಾಗಿದೆ. ಈ ಚಿತ್ರದ ಮೇಲೆ ಮಹೇಶ್​ ಬಾಬು ಅಭಿಮಾನಿಗಳಿಗೆ ಎಷ್ಟು ಕ್ರೇಜ್​ ಇದೆ ಎಂಬುದಕ್ಕೆ ಈ ನಂಬರ್​ ಸಾಕ್ಷಿ. ಇನ್ನು, ಆ.9ರಂದು ರಿಲೀಸ್​ ಆಗಲಿರುವ ಟೀಸರ್​ ಯಾವ ದಾಖಲೆ ಬರೆಯಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.

‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಪರಶುರಾಮ್​ ನಿರ್ದೇಶನ ಮಾಡುತ್ತಿದ್ದಾರೆ. ಮಹೇಶ್​ ಬಾಬುಗೆ ಜೋಡಿಯಾಗಿ ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್​ ಅಭಿನಯಿಸುತ್ತಿದ್ದಾರೆ. 2022ರ ಜ.13ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಜ.14ರಂದು ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಚಿತ್ರ ರಿಲೀಸ್​ ಆಗಲಿದೆ. ಹಾಗಾಗಿ ಬಾಕ್ಸ್​ ಆಫೀಸ್​ನಲ್ಲಿ ಈ ಸ್ಟಾರ್​ ನಟರಿಬ್ಬರ ನಡುವೆ ಭಾರಿ ಹಣಾಹಣಿ ನಡೆಯಲಿದೆ. ಇನ್ನೂ ಅನೇಕ ದೊಡ್ಡ ಸಿನಿಮಾಗಳು ರಿಲೀಸ್​ ದಿನಾಂಕ ಘೋಷಣೆ ಮಾಡಿಕೊಳ್ಳುವುದು ಬಾಕಿ ಇದೆ.

ಇದನ್ನೂ ಓದಿ:

ಮಹೇಶ್​ ಬಾಬು-ರಾಜಮೌಳಿ ಹೊಸ ಚಿತ್ರದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಕಥೆ; ಏನಿದು ಹೊಸ ಗಾಸಿಪ್​?

‘ದಿ ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜೊತೆ ಮಹೇಶ್​ ಬಾಬು ಅಥವಾ ದೇವರಕೊಂಡ ಸಿನಿಮಾ; ಹೊರಬಿತ್ತು ಹೊಸ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada