ಮಹೇಶ್​ ಬಾಬು-ರಾಜಮೌಳಿ ಹೊಸ ಚಿತ್ರದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಕಥೆ; ಏನಿದು ಹೊಸ ಗಾಸಿಪ್​?

ಮಹೇಶ್​ ಬಾಬು-ರಾಜಮೌಳಿ ಹೊಸ ಚಿತ್ರದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಕಥೆ; ಏನಿದು ಹೊಸ ಗಾಸಿಪ್​?
ರಾಜಮೌಳಿ, ರಕ್ಷಿತ್​ ಶೆಟ್ಟಿ, ಮಹೇಶ್​ ಬಾಬು

ಪ್ರಸ್ತುತ ‘ಆರ್​ಆರ್​ಆರ್’ ಚಿತ್ರದ ಕೆಲಸಗಳಲ್ಲಿ ರಾಜಮೌಳಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಮಹೇಶ್​ ಬಾಬು ಜೊತೆಗಿನ ಚಿತ್ರದ ಕಥೆಯ ಬಗ್ಗೆ ಗುಸುಗುಸು ಕೇಳಿಬಂದಿದೆ.

TV9kannada Web Team

| Edited By: Madan Kumar

Jun 06, 2021 | 10:28 AM

ಸ್ಟಾರ್​ ನಿರ್ದೇಶಕ ರಾಜಮೌಳಿ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿದರೂ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರುತ್ತದೆ. ಈ ಹಿಂದೆ ಅವರು ಅಂಥ ಅದ್ದೂರಿ ಸಿನಿಮಾಗಳನ್ನು ನೀಡಿದ್ದೇ ಇದಕ್ಕೆ ಕಾರಣ. ಇನ್ನು, ಅವರ ಸಿನಿಮಾ ಅನೌನ್ಸ್​ ಆದ ದಿನದಿಂದಲೇ ಹೊಸ ಹೊಸ ಗಾಸಿಪ್​ಗಳು ಕೂಡ ಕೇಳಿಬರಲು ಆರಂಭಿಸುತ್ತವೆ. ಈಗ ಅವರು ‘ಪ್ರಿನ್ಸ್​’ ಮಹೇಶ್​ ಬಾಬು ಜೊತೆ ಮಾಡಲಿರುವ ಚಿತ್ರದ ಬಗ್ಗೆಯೂ ಅಂಥದ್ದೇ ಒಂದು ಮಾತು ಕೇಳಿಬರುತ್ತಿದೆ. ಈ ಚಿತ್ರದ ಕಥೆಗೂ ಕನ್ನಡದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಕಥೆಗೂ ಹೋಲಿಕೆ ಇದೆ ಎನ್ನಲಾಗುತ್ತಿದೆ.

ಮಹೇಶ್​ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್​ನಲ್ಲಿ ಸಿನಿಮಾ ಆಗುತ್ತಿರುವುದೇನೋ ನಿಜ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಕಥೆ ಬರೆಯಲು ಆರಂಭಿಸಿದ್ದಾರೆ ಎಂಬುದು ಬಿಟ್ಟರೆ ಸದ್ಯಕ್ಕಂತೂ ಬೇರೆ ಯಾವ ಕೆಲಸಗಳೂ ಶುರು ಆಗಿಲ್ಲ. ಪ್ರಸ್ತುತ ‘ಆರ್​ಆರ್​ಆರ್’ ಚಿತ್ರದ ಕೆಲಸಗಳಲ್ಲಿ ರಾಜಮೌಳಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಮಹೇಶ್​ ಬಾಬು ಜೊತೆಗಿನ ಚಿತ್ರದ ಕಥೆಯ ಬಗ್ಗೆ ಗುಸುಗುಸು ಕೇಳಿಬಂದಿದೆ. ಮೂಲಗಳ ಪ್ರಕಾರ, ಕಾಡಿನೊಳಗೆ ಇರುವ ನಿಧಿ ಅಥವಾ ಖಜಾನೆ ಹುಡುಕುವ ಕಥೆಯನ್ನು ಈ ಸಿನಿಮಾ ಹೊಂದಿರಲಿದೆಯಂತೆ. 2019ರಲ್ಲಿ ರಕ್ಷಿತ್​ ಶೆಟ್ಟಿ ನಟಿಸಿದ್ದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿಯೂ ಇಂಥದ್ದೇ ಕಥೆ ಇತ್ತು. ಅದಕ್ಕೂ ಇದಕ್ಕೂ ಏನಾದರೂ ಸಂಬಂಧ ಇರಬಹುದೇ ಎಂದು ತಲೆ ಕೆರೆದುಕೊಳ್ಳುತ್ತಿದ್ದಾರೆ ಸಿನಿಪ್ರಿಯರು.

ಆದರೆ ಈ ಗಾಸಿಪ್​ಗಳನ್ನು ನಿರ್ಮಾಪಕ ಕೆಎಲ್​ ನಾರಾಯಣ ತಳ್ಳಿ ಹಾಕಿದ್ದಾರೆ. ‘ಕಥೆಗೆ ಸಂಬಂಧಿಸಿದಂತೆ ರಾಜಮೌಳಿ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಈ ರೀತಿಯ ಗಾಸಿಪ್​ಗಳು ಎಲ್ಲಿಂದ ಶುರು ಆಗುತ್ತವೋ ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಇನ್ನು, ಬಜೆಟ್​ ವಿಚಾರದಲ್ಲಿಯೂ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಆರ್​ಆರ್​ಆರ್​ ಚಿತ್ರಕ್ಕಿಂತಲೂ ಹೆಚ್ಚಿನ ಬಜೆಟ್​ನಲ್ಲಿ ಈ ಚಿತ್ರ ಮೂಡಿಬರಲಿದೆ ಎನ್ನಲಾಗುತ್ತಿದೆ. ಹಾಲಿವುಡ್​ ಪ್ರೊಡಕ್ಷನ್​ ಹೌಸ್​ ಜೊತೆ ರಾಜಮೌಳಿ ಕೈ ಜೋಡಿಸುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಅವುಗಳ ಬಗ್ಗೆ ರಾಜಮೌಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸದ್ಯ ರಾಜಮೌಳಿ ಅವರ ಗಮನವೆಲ್ಲ ‘ಆರ್​ಆರ್​ಆರ್​’ ಸಿನಿಮಾ ಮೇಲಿದೆ. ಲಾಕ್​ಡೌನ್​ ಕಾರಣದಿಂದಾಗಿ ಆ ಚಿತ್ರದ ಕೆಲಸಗಳು ಸ್ಥಗಿತಗೊಂಡಿವೆ. ಜ್ಯೂ. ಎನ್​ಟಿಆರ್​ ಸೇರಿದಂತೆ ಚಿತ್ರತಂಡದ ಕೆಲವರಿಗೆ ಕೊರೊನಾ ಪಾಸಿಟಿವ್​ ಆಗಿದ್ದರಿಂದ ಸಿನಿಮಾ ಕೆಲಸಗಳು ತಡವಾಗಿವೆ.

ಇದನ್ನೂ ಓದಿ:

ರಾಜಮೌಳಿ ತಂದೆ ಮೊಬೈಲ್​ ವಾಲ್​ಪೇಪರ್​ನಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಫೋಟೋ; ಕಾರಣ ಏನು?

RRR ಫೈಟಿಂಗ್​ ದೃಶ್ಯದಲ್ಲಿ ರಾಜಮೌಳಿ ಹೊಸ ಪ್ರಯೋಗ; ತಂದೆಯಿಂದಲೇ ಬಯಲಾದ ಸೀಕ್ರೆಟ್​ ಏನು?

Follow us on

Related Stories

Most Read Stories

Click on your DTH Provider to Add TV9 Kannada