‘ದಿ ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜೊತೆ ಮಹೇಶ್​ ಬಾಬು ಅಥವಾ ದೇವರಕೊಂಡ ಸಿನಿಮಾ; ಹೊರಬಿತ್ತು ಹೊಸ ಸುದ್ದಿ

‘ದಿ ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜೊತೆ ಮಹೇಶ್​ ಬಾಬು ಅಥವಾ ದೇವರಕೊಂಡ ಸಿನಿಮಾ; ಹೊರಬಿತ್ತು ಹೊಸ ಸುದ್ದಿ
ಮಹೇಶ್ ಬಾಬು - ವಿಜಯ್ ದೇವರಕೊಂಡ

ಮಹೇಶ್​ ಬಾಬು ಅಥವಾ ವಿಜಯ್​ ದೇವರಕೊಂಡ ಇಬ್ಬರಲ್ಲಿ ಒಬ್ಬರ ಜೊತೆ ರಾಜ್​-ಡಿಕೆ ಸಿನಿಮಾ ಮಾಡುವ ಸಾಧ್ಯತೆ ದಟ್ಟವಾಗಿದೆ. ಇಬ್ಬರಿಗೂ ಕಥೆ ಹೇಳಲಾಗಿದ್ದು ಯಾರು ಮೊದಲು ಗ್ರೀನ್​ ಸಿಗ್ನಲ್​ ನೀಡುತ್ತಾರೋ ಅವರ ಜೊತೆ ಸಿನಿಮಾ ಸೆಟ್ಟೇರಲಿದೆ.

Madan Kumar

| Edited By: Rajesh Duggumane

May 16, 2021 | 5:18 PM

ಖ್ಯಾತ ನಿರ್ದೇಶಕರಾದ ರಾಜ್​ ಮತ್ತು ಡಿಕೆ ಅವರು ಜೋಡಿಯಾಗಿ ಬಾಲಿವುಡ್​ನಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಓಟಿಟಿಯಲ್ಲಿ ಭಾರಿ ಯಶಸ್ಸು ಕಂಡ ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸಿರೀಸ್​ಗೆ ನಿರ್ದೇಶನ ಮಾಡಿದ ಬಳಿಕ ಅವರ ಖ್ಯಾತಿ ದುಪ್ಪಟ್ಟಾಗಿದೆ. ಈಗ ‘ದಿ ಫ್ಯಾಮಿಲಿ ಮ್ಯಾನ್​ 2’ ಈಗ ಬಿಡುಗಡೆಗೆ ಸಿದ್ಧವಾಗಿದೆ. ಮೂಲತಃ ರಾಜ್​ ಮತ್ತು ಡಿಕೆ ತೆಲುಗಿನವರು. ಆದರೆ ಈವರೆಗೂ ಅವರು ಯಾವುದೇ ಟಾಲಿವುಡ್​ ಚಿತ್ರಕ್ಕೆ ನಿರ್ದೇಶನ ಮಾಡಿಲ್ಲ. ಶೀಘ್ರದಲ್ಲೇ ಅವರ ನಿರ್ದೇಶನದಲ್ಲಿ ಒಂದು ತೆಲುಗು ಸಿನಿಮಾ ಸೆಟ್ಟೇರುವ ಬಗ್ಗೆ ಈಗ ಸುದ್ದಿ ಹೊರಬಿದ್ದಿದೆ.

ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ‘ಸಿನಿಮಾ ಬಂಡಿ’ ಚಿತ್ರಕ್ಕೆ ರಾಜ್​ ಮತ್ತು ಡಿಕೆ ಬಂಡವಾಳ ಹೂಡಿದ್ದಾರೆ. ಆ ಸಿನಿಮಾ ಪ್ರಚಾರದ ಸಲುವಾಗಿ ಕೆಲವು ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಈ ನಿರ್ದೇಶಕರಿಬ್ಬರು ತಮ್ಮ ಮುಂದಿನ ಪ್ರಾಜೆಕ್ಟ್​ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಟಾಲಿವುಡ್​ನ ಟಾಪ್​ ಸ್ಟಾರ್​ಗಳ ಜೊತೆ ಸಿನಿಮಾ ಮಾಡಲು ಅವರು ಮುಂದಾಗಿದ್ದಾರೆ. ಈಗಾಗಲೇ ಮಹೇಶ್​ ಬಾಬು ಮತ್ತು ವಿಜಯ್​ ದೇವರಕೊಂಡ ಜೊತೆ ಅವರು ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ.

ಮಹೇಶ್​ ಬಾಬು ಅಥವಾ ವಿಜಯ್​ ದೇವರಕೊಂಡ ಇಬ್ಬರಲ್ಲಿ ಒಬ್ಬರ ಜೊತೆ ರಾಜ್​-ಡಿಕೆ ಸಿನಿಮಾ ಮಾಡುವ ಸಾಧ್ಯತೆ ದಟ್ಟವಾಗಿದೆ. ಇಬ್ಬರಿಗೂ ಕಥೆ ಹೇಳಲಾಗಿದ್ದು ಯಾರು ಮೊದಲು ಗ್ರೀನ್​ ಸಿಗ್ನಲ್​ ನೀಡುತ್ತಾರೋ ಅವರ ಜೊತೆ ಸಿನಿಮಾ ಸೆಟ್ಟೇರಲಿದೆ. ಈ ಪವರ್​ಫುಲ್​ ಕಾಂಬಿನೇಷನ್​ನ ಸಿನಿಮಾ ಬಗ್ಗೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ.

ಸದ್ಯ ಮಹೇಶ್​ ಬಾಬು ‘ಸರ್ಕಾರು ವಾರಿ ಪಾಟ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ವಿಜಯ್​ ದೇವರಕೊಂಡ ‘ಲೈಗರ್​’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಇವರಿಬ್ಬರಲ್ಲಿ ರಾಜ್​-ಡಿಕೆ ಜೊತೆ ಯಾರು ಸಿನಿಮಾ ಮಾಡುತ್ತಾರೆ ಎಂಬ ಕೌತುಕ ಈಗ ಮನೆ ಮಾಡಿದೆ.

ಇದನ್ನೂ ಓದಿ:

Rashmika Mandanna: ವಿಜಯ್​ ದೇವರಕೊಂಡಗೆ ಆ ಒಂದು ಪದ ಬಳಸಿ ವಿಶ್​ ಮಾಡಿದ ರಶ್ಮಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

Rashmika Mandanna: ವಿಜಯ್​ ದೇವರಕೊಂಡ ಅಲ್ಲ; ಉಂಗುರ ತೋರಿಸಿ ಬಾಯ್​ಫ್ರೆಂಡ್​ ಯಾರು ಅಂತ ಹೇಳಿದ ರಶ್ಮಿಕಾ

Follow us on

Related Stories

Most Read Stories

Click on your DTH Provider to Add TV9 Kannada