Rashmika Mandanna: ವಿಜಯ್​ ದೇವರಕೊಂಡಗೆ ಆ ಒಂದು ಪದ ಬಳಸಿ ವಿಶ್​ ಮಾಡಿದ ರಶ್ಮಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

Vijay Devarakonda: ಇದೇ ವಿಚಾರದ ಸಲುವಾಗಿ ಈ ಹಿಂದೆ ರಜನಿಕಾಂತ್​ ಮತ್ತು ಮಹೇಶ್​ ಬಾಬು ಅಭಿಮಾನಿಗಳ ನಡುವೆ ಕ್ಲ್ಯಾಶ್​ ಆಗಿತ್ತು. ಈಗ ನೆಟ್ಟಿಗರು ರಶ್ಮಿಕಾ ಮಂದಣ್ಣ ಅವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

Rashmika Mandanna: ವಿಜಯ್​ ದೇವರಕೊಂಡಗೆ ಆ ಒಂದು ಪದ ಬಳಸಿ ವಿಶ್​ ಮಾಡಿದ ರಶ್ಮಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​
ವಿಜಯ್​ ದೇವರಕೊಂಡ - ರಶ್ಮಿಕಾ ಮಂದಣ್ಣ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: May 10, 2021 | 5:12 PM

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್​ ದೇವರಕೊಂಡ ನಡುವೆ ಎಂಥ ಆಪ್ತತೆ ಇದೆ ಎಂಬುದನ್ನು ಹೊಸದಾಗಿ ಹೇಳಬೇಕಾದ ಅನಿವಾರ್ಯತೆ ಇಲ್ಲ. ಗೀತಾ ಗೋವಿಂದಂ ಮತ್ತು ಡಿಯರ್​ ಕಾಮ್ರೇಡ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಬಳಿಕ ಇಬ್ಬರ ನಡುವಿನ ಒಡನಾಟ ಜೋರಾಯಿತು. ಮೇ 9ರಂದು ವಿಜಯ್​ ದೇವರಕೊಂಡ ಬರ್ತ್​ಡೇ. ಆದರೆ ಸರಿಯಾದ ಸಮಯಕ್ಕೆ ವಿಶ್​ ಮಾಡಲು ರಶ್ಮಿಕಾ ಮರೆತರು. ಕೊಂಚ ತಡವಾಗಿ ಟ್ವಿಟರ್ ಮೂಲಕ ಶುಭ ಕೋರಿದ ಅವರು ಒಂದು ತಪ್ಪು ಮಾಡಿದ್ದಾರೆ.

‘ಕ್ಷಮೆ ಇರಲಿ. ನಾನು ತಡ ಮಾಡಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು ಸೂಪರ್​ ಸ್ಟಾರ್​ ವಿಜಯ್​ ದೇವರಕೊಂಡ’ ಎಂದು ರಶ್ಮಿಕಾ ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ನಲ್ಲಿ ಸೂಪರ್​ ಸ್ಟಾರ್​ ಎಂಬ ಪದ ಬಳಸಿರುವುದು ಹಲವರ ಕೋಪಕ್ಕೆ ಕಾರಣ ಆಗಿದೆ. ನಿನ್ನೆ ಮೊನ್ನೆ ಯಶಸ್ಸು ಕಂಡಿರುವ ವಿಜಯ್​ ದೇವರಕೊಂಡ ಅವರನ್ನು ಸೂಪರ್​ ಸ್ಟಾರ್​ ಎಂದು ಕರೆದಿರುವುದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿಕ್ಕ ಸಿಕ್ಕವರಿಗೆಲ್ಲ ಸೂಪರ್​ ಸ್ಟಾರ್​ ಎಂಬ ಪಟ್ಟ ನೀಡಲು ಅದೇನು ಸುಲಭಕ್ಕೆ ಸಿಗುವ ಟ್ಯಾಗ್​ ಅಲ್ಲ ಎಂದು ಜನರು ಕಮೆಂಟ್​ ಮಾಡಿದ್ದಾರೆ.

ರಜನಿಕಾಂತ್​ ಅವರಿಗೆ ಸೂಪರ್​ ಸ್ಟಾರ್​ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಅದಕ್ಕೂ ಮುನ್ನ ಮಹೇಶ್​ ಬಾಬು ತಂದೆ ಕೃಷ್ಣ ಅವರಿಗೂ ಸೂಪರ್​ ಸ್ಟಾರ್​ ಎಂಬ ಬಿರುದು ಇತ್ತು. ಬಳಿಕ ಮಹೇಶ್​ ಬಾಬು ಅವರನ್ನು ಕೂಡ ಅಭಿಮಾನಿಗಳು ಸೂಪರ್​ ಸ್ಟಾರ್​ ಎಂದು ಕರೆಯಲು ಆರಂಭಿಸಿದರು. ಮಹೇಶ್​ ಬಾಬು ಸಿನಿಮಾಗಳು ತಮಿಳಿಗೆ ಡಬ್​ ಆದಾಗ ಅದರಲ್ಲಿ ಮಹೇಶ್​ ಬಾಬು ಅವರನ್ನು ಸೂಪರ್​ ಸ್ಟಾರ್​ ಎಂದು ಕರೆದಿದ್ದಕ್ಕೆ ರಜನಿಕಾಂತ್​ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಉದಾಹರಣೆ ಇದೆ. ಈಗ ವಿಜಯ್​ ದೇವರಕೊಂಡಗೆ ಸೂಪರ್​ಸ್ಟಾರ್​ ಎಂದಿರುವ ರಶ್ಮಿಕಾ ಕೂಡ ನೆಟ್ಟಿಗರ ಟ್ರೋಲ್​ಗೆ ಗುರಿ ಆಗುತ್ತಿದ್ದಾರೆ.

​ಸದ್ಯ ಈ ಬಗ್ಗೆ ರಶ್ಮಿಕಾ ಮಂದಣ್ಣ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಕೈ ಹಾಕಿಲ್ಲ. ಬಹುಭಾಷೆಯ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ತೆಲುಗಿನಲ್ಲಿ ಪುಷ್ಪ, ಹಿಂದಿಯಲ್ಲಿ ಮಿಷನ್​ ಮಜ್ನು, ಗುಡ್​ ಬೈ ಸೇರಿದಂತೆ ಅನೇಕ ಸಿನಿಮಾಗಳು ಅವರ ಕೈಯಲ್ಲಿವೆ. ವಿಜಯ್​ ದೇವರಕೊಂಡ ಕೂಡ ಲೈಗರ್​ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ.

ಇದನ್ನೂ ಓದಿ:

Rashmika Mandanna: ವಿಜಯ್​ ದೇವರಕೊಂಡ ಅಲ್ಲ; ಉಂಗುರ ತೋರಿಸಿ ಬಾಯ್​ಫ್ರೆಂಡ್​ ಯಾರು ಅಂತ ಹೇಳಿದ ರಶ್ಮಿಕಾ

Rashmika Mandanna: ಬಾಲಿವುಡ್​ ಸ್ಟಾರ್​ ನಟನ ಸಿನಿಮಾಗೆ ನೋ ಎಂದ ರಶ್ಮಿಕಾ; ಸ್ಪಷ್ಟನೆ ನೀಡಿದ ನಟಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ