ಕೊರೊನಾದಿಂದ ಟಾಲಿವುಡ್ ನಟ TNR ನಿಧನ; ಕಂಬನಿ ಮಿಡಿದ ಸೆಲೆಬ್ರಿಟಿಗಳು
TNR Death: ಟಿಎನ್ಆರ್ ಅವರು ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದರು. ನಟ ನಾನಿ, ನಿರ್ಮಾಪಕ ಬಂಡ್ಲ ಗಣೇಶ್, ನಿರ್ದೇಶಕ ಮಾರುತಿ ಸೇರಿದಂತೆ ಅನೇಕರು ಟಿಎನ್ಆರ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕೊರೊನಾದಿಂದ ಸಂಭವಿಸುತ್ತಿರುವ ಸೆಲೆಬ್ರಿಟಿಗಳ ಸಾವಿನ ಸರಣಿ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಎಲ್ಲ ಭಾಷೆಯ ಚಿತ್ರರಂಗದ ಕಲಾವಿದರು ಈ ಮಹಾಮಾರಿಗೆ ಬಲಿ ಆಗುತ್ತಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ನಿಭಾಯಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟ ಟಿಎನ್ಆರ್ ಅವರು ಸೋಮವಾರ (ಮೇ 10) ಹೈದರಾಬಾದ್ನಲ್ಲಿ ನಿಧನರಾದರು. ಟಿಎನ್ಆರ್ ಎಂದೇ ಫೇಮಸ್ ಆಗಿದ್ದ ಅವರ ಪೂರ್ಣ ಹೆಸರು ತುಮ್ಮಲ ನರಸಿಂಹ ರೆಡ್ಡಿ. ಅವರ ಅಗಲಿಕೆಗೆ ಟಾಲಿವುಡ್ ಮಂದಿ ಸಂತಾಪ ಸೂಚಿಸುತ್ತಿದ್ದಾರೆ.
ಸಿನಿಮಾ ಪತ್ರಕರ್ತರಾಗಿದ್ದ ಟಿಎನ್ಆರ್ ಅವರು ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಹಲವಾರು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದರು. ಮಹಾಮಹೇಶ್ವರ ಉಗ್ರ ರೂಪಸ್ಯ, ಹಿಟ್, ಜಾರ್ಜ್ ರೆಡ್ಡಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದರು. ನಟ ನಾನಿ, ನಿರ್ಮಾಪಕ ಬಂಡ್ಲ ಗಣೇಶ್, ನಿರ್ದೇಶಕ ಮಾರುತಿ ಸೇರಿದಂತೆ ಅನೇಕರು ಟಿಎನ್ಆರ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
‘ಟಿಎನ್ಆರ್ ಅವರು ನಿಧನರಾದರು ಎಂಬ ಸುದ್ದಿ ಕೇಳಿ ಶಾಕ್ ಆಯಿತು. ಅವರ ಕೆಲವು ಸಂದರ್ಶನಗಳನ್ನು ನಾನು ನೋಡಿದ್ದೇನೆ. ತುಂಬ ಚೆನ್ನಾಗಿ ಅಧ್ಯಯನ ಮಾಡಿಕೊಂಡು ಬಂದು, ಅತಿಥಿಗಳು ಮನಬಿಚ್ಚಿ ಮಾತನಾಡುವಂತೆ ಮಾಡುವ ಸಾಮರ್ಥ್ಯ ಅವರಲ್ಲಿ ಇತ್ತು. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ’ ಎಂದು ನಾನಿ ಟ್ವೀಟ್ ಮಾಡಿದ್ದಾರೆ.
Shocked to hear that TNR gaaru passed away .. have seen few of his interviews and he was the best when it came to his research and ability to get his guests to speak their heart out . Condolences and strength to the family ??
— Nani (@NameisNani) May 10, 2021
Unbelievable and shocking It’s very hard to digest and painful to know my friend TNR is no more My deepest Condolences to their family#corona show some mercy We can’t take this any more ? pic.twitter.com/jXIHWP7pYP
— Director Maruthi (@DirectorMaruthi) May 10, 2021
ಖ್ಯಾತ ನಟ ರಾಹುಲ್ ವೋಹ್ರಾ ಅವರು ಕೊರೊನಾದಿಂದ ನಿಧನರಾದ ಸುದ್ದಿ ಭಾನುವಾರವಷ್ಟೇ (ಮೇ 9) ಕೇಳಿಬಂದಿತ್ತು. ಮರುದಿನವೇ ಮತ್ತೊಬ್ಬ ನಟನನ್ನು ಚಿತ್ರರಂಗ ಕಳೆದುಕೊಂಡಿದೆ. ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಕಾಲಿವುಡ್ ನಿರ್ದೇಶಕ ಕೆ.ವಿ. ಆನಂದ್, ರವಿರತ್ನ ಕಾಳಿದಾಸ ಚಿತ್ರದ ನಿರ್ದೇಶಕ ರೇಣುಕಾ ಶರ್ಮಾ, ನಟ ಶಂಕನಾದ ಅರವಿಂದ್, ಯುವ ನಿರ್ಮಾಪಕ ಡಿ.ಎಸ್. ಮಂಜುನಾಥ್, ಮರಾಠಿ ನಟಿ ಅಭಿಲಾಷಾ ಪಾಟಿಲ್ ಸೇರಿದಂತೆ ಅನೇಕರು ಕೊರೊನಾದಿಂದ ಅಸುನೀಗಿದ್ದಾರೆ. ಸಾವಿನ ಸರಣಿ ಇನ್ನೂ ಮುಂದುವರಿದಿದೆ.
ಇದನ್ನೂ ಓದಿ:
ಆಕ್ಸಿಜನ್ ಬೇಕು ಎಂದು ಮೋದಿಗೆ ಕೈ ಮುಗಿದು ಬೇಡಿಕೊಂಡಿದ್ದ ನಟ ರಾಹುಲ್ ಕೊರೊನಾದಿಂದ ನಿಧನ
ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ