‘ನೀನು ಡೈಪರ್​ ಹಾಕ್ಕೋ’; ಪುರುಷ ಸ್ಪರ್ಧಿಗೆ ಖಡಕ್​ ಆದೇಶ ನೀಡಿದ ಶಮಿತಾ ಶೆಟ್ಟಿ

ಒಬ್ಬರು ಮಾಡುವ ತಪ್ಪಿನಿಂದಾಗಿ ಅದೇ ತಂಡದ ಇನ್ನೊಬ್ಬರು ಸೋಲಬೇಕಾಗುತ್ತದೆ. ಶಮಿತಾ ಶೆಟ್ಟಿಗೆ ಇತ್ತೀಚೆಗಿನ ಟಾಸ್ಕ್​ನಲ್ಲಿ ಹೀಗೆಯೇ ಆಗಿದೆ. ಅದರಿಂದ ಅವರು ಕೋಪಗೊಂಡಿದ್ದಾರೆ.

‘ನೀನು ಡೈಪರ್​ ಹಾಕ್ಕೋ’; ಪುರುಷ ಸ್ಪರ್ಧಿಗೆ ಖಡಕ್​ ಆದೇಶ ನೀಡಿದ ಶಮಿತಾ ಶೆಟ್ಟಿ
ರಾಕೇಶ್​ ಬಾಟಪ್, ಶಮಿತಾ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Aug 20, 2021 | 4:33 PM

ಇದೇ ಮೊದಲ ಬಾರಿಗೆ ‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮ ನಡೆಯುತ್ತಿದ್ದು, ಇದರ ರೀತಿ-ನೀತಿ ಬೇರೆಯೇ ಆಗಿದೆ. ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ಅವರು ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಮಾತ್ರವಲ್ಲದೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹತ್ತು ಹಲವು ಕಾರಣಗಳಿಂದಾಗಿ ಅವರು ದೊಡ್ಮನೆಯಲ್ಲಿ ಹೈಲೈಟ್​ ಆಗುತ್ತಿದ್ದಾರೆ. ಇತ್ತೀಚೆಗೆ ಅವರು ಪುರುಷ ಸ್ಪರ್ಧಿಯೊಬ್ಬರಿಗೆ ಖಡಕ್​ ಆದೇಶ ನೀಡಿದ್ದಾರೆ. ‘ನೀನು ಡೈಪರ್​ ಹಾಕ್ಕೋ’ ಎಂದು ನೇರವಾಗಿ ಹೇಳಿದ್ದಾರೆ. ಏನಿದು ಘಟನೆ? ಇಲ್ಲಿದೆ ವಿವರ.

ಬಿಗ್ ಬಾಸ್​ ಓಟಿಟಿ ಕಾರ್ಯಕ್ರಮವನ್ನು ಶಮಿತಾ ಶೆಟ್ಟಿ ತುಂಬ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿ ಅವರು ಎಲ್ಲ ಟಾಸ್ಕ್​ನಲ್ಲಿಯೂ ಆ್ಯಕ್ಟೀವ್​ ಆಗಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಬಗ್ಗೆ ಯಾರಾದರೂ ಇಲ್ಲಸಲ್ಲದ ಆರೋಪ ಮಾಡಲು ಬಂದರೆ ನೇರವಾಗಿ ಜಗಳಕ್ಕೆ ಇಳಿಯುತ್ತಿದ್ದಾರೆ. ಇದೆಲ್ಲದರ ನಡುವೆ ತಮ್ಮ ಟೀಮ್​ನವರ ಕಾರಣದಿಂದ ಟಾಸ್ಕ್​ನಲ್ಲಿ ಹಿನ್ನಡೆ ಉಂಟಾದರೆ ಅವರು ಅದನ್ನು ಕಿಂಚಿತ್ತೂ ಸಹಿಸುತ್ತಿಲ್ಲ. ಇದೇ ವಿಚಾರವಾಗಿ ಅವರು ಸಹ-ಸ್ಪರ್ಧಿ ರಾಕೇಶ್​ ಬಾಪಟ್​ಗೆ ಎಚ್ಚರಿಕೆ ನೀಡಿದ್ದಾರೆ. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ.

ಬಿಗ್​ ಬಾಸ್​ ಮನೆಯಲ್ಲಿ ವೈಯಕ್ತಿಕ ಟಾಸ್ಕ್​ ಮಾತ್ರವಲ್ಲದೇ ಕೆಲವು ಸಲ ಎರಡು ಟೀಮ್​ಗಳ ನಡುವೆ ಪೈಪೋಟಿ ಬೀಳುತ್ತದೆ. ಆಗ ಒಬ್ಬರು ಮಾಡುವ ತಪ್ಪಿನಿಂದಾಗಿ ಅದೇ ತಂಡದ ಇನ್ನೊಬ್ಬರು ಸೋಲಬೇಕಾಗುತ್ತದೆ. ಶಮಿತಾ ಶೆಟ್ಟಿಗೆ ಇತ್ತೀಚೆಗಿನ ಟಾಸ್ಕ್​ನಲ್ಲಿ ಹೀಗೆಯೇ ಆಗಿದೆ. ಟಾಸ್ಕ್​ ಮಧ್ಯೆ ರಾಕೇಶ್ ಬಾಪಟ್​ ಅವರು ಪದೇಪದೇ ಶೌಚಾಲಯಕ್ಕೆ ಹೋಗಿ ಬಂದಿರುವುದನ್ನು ಶಮಿತಾ ವಿರೋಧಿಸಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುವಾಗ ಅವರು ಕೊಂಚ ಖಾರವಾಗಿಯೇ ಮಾತನಾಡಿದ್ದಾರೆ.

‘ನನ್ನ ಮತ್ತು ನಿನ್ನ ನಡುವೆ ಕಮ್ಯೂನಿಕೇಷನ್​ ಗ್ಯಾಪ್​ ಇದೆ. ಟಾಸ್ಕ್​ ಮಧ್ಯೆದಲ್ಲಿ ನೀನು ಶೌಚಾಲಯಕ್ಕೆ ಹೋದರೆ ಹುಷಾರ್​! ನೀನು ಇಲ್ಲಿಗೆ ಯಾಕೆ ಬಂದಿದ್ದೀಯಾ? ಊಟ-ನಿದ್ರೆ ಮಾಡಿ, ಶೌಚಾಲಯಕ್ಕೆ ಹೋಗುತ್ತ ಟೈಮ್​ ಪಾಸ್​ ಮಾಡೋಕಾ? ಎಲ್ಲವನ್ನೂ ಕಂಟ್ರೋಲ್​ ಮಾಡಿಕೋ ಅಥವಾ ಡೈಪರ್​ ಬೇಕಾದ್ರೆ ಹಾಕ್ಕೋ. ಐ ಡೋಂಟ್​​ ಕೇರ್​’ ಎಂದು ಶಮಿತಾ ಕೂಗಾಡಿದ್ದಾರೆ. ‘ಡೈಪರ್​ ಇದ್ದಿದ್ದರೆ ನಾನು ಖಂಡಿತಾ ಧರಿಸುತ್ತಿದ್ದೆ. ಬಿಗ್​ ಬಾಸ್​ ನನಗೆ ದಯವಿಟ್ಟು ಡೈಪರ್​ ಕಳಿಸಿಕೊಡಿ’ ಎಂದು ರಾಕೇಶ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

‘ರಾಜ್ ಕುಂದ್ರಾ ರಾತ್ರಿಯ ಯೋಗ ಪೋಸ್​ ಕಲಿಸುತ್ತಾರೆ’; ಶಿಲ್ಪಾ ಶೆಟ್ಟಿ ತಂಗಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

ಶಿಲ್ಪಾ ಶೆಟ್ಟಿಯಿಂದಾಗಿ ತಾವು ಅನುಭವಿಸಿದ ಹಿಂಸೆ ಬಗ್ಗೆ ವಿವರಿಸಿ ಗಳಗಳನೆ ಅತ್ತ ತಂಗಿ ಶಮಿತಾ ಶೆಟ್ಟಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ