ನೈತಿಕತೆ ಬಿಟ್ಟು ಮಹಿಳಾ ಸ್ಪರ್ಧಿಗೆ ಲಿಪ್​ ಕಿಸ್​ ಮಾಡಿದ ಗಾಯಕಿ; ಎತ್ತ ಸಾಗುತ್ತಿದೆ ಬಿಗ್​ ಬಾಸ್​?

ಟಾಸ್ಕ್​ ಸಲುವಾಗಿ ಗಾಯಕಿ ನೇಹಾ ಭಾಸೀನ್ ಅವರು ನಟಿ ರಿಧಿಮಾ ಪಂಡಿತ್​ ತುಟಿಗೆ ಮುತ್ತಿಟ್ಟಿದ್ದಾರೆ. ಅವರ ಸಮ್ಮತಿ ಇಲ್ಲದೆ ಈ ರೀತಿ ಕಿಸ್​ ಮಾಡಿದ್ದು ಎಷ್ಟು ಸರಿ ಎಂಬ ವಾದ ಬಿಗ್​ ಬಾಸ್​ ಓಟಿಟಿ ವೀಕ್ಷಕರ ವಲಯದಲ್ಲಿ ನಡೆಯುತ್ತಿದೆ.

ನೈತಿಕತೆ ಬಿಟ್ಟು ಮಹಿಳಾ ಸ್ಪರ್ಧಿಗೆ ಲಿಪ್​ ಕಿಸ್​ ಮಾಡಿದ ಗಾಯಕಿ; ಎತ್ತ ಸಾಗುತ್ತಿದೆ ಬಿಗ್​ ಬಾಸ್​?
ನೈತಿಕತೆ ಬಿಟ್ಟು ಮಹಿಳಾ ಸ್ಪರ್ಧಿಗೆ ಲಿಪ್​ ಕಿಸ್​ ಮಾಡಿದ ಗಾಯಕಿ ನೇಹಾ
Follow us
TV9 Web
| Updated By: ಮದನ್​ ಕುಮಾರ್​

Updated on:Aug 14, 2021 | 10:01 AM

ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಡುತ್ತಿರುವ ಬಿಗ್​ ಬಾಸ್​ ಓಟಿಟಿ (Bigg Boss OTT) ಶೋ ಸಾಕಷ್ಟು ಹೈಪ್​ ಪಡೆದುಕೊಳ್ಳುತ್ತಿದೆ. ಇದು ನೇರವಾಗಿ ಓಟಿಟಿಯಲ್ಲಿ ಪ್ರಸಾರ ಆಗುತ್ತಿರುವುದರಿಂದ ಸೆನ್ಸಾರ್​ನ ಹಂಗಿಲ್ಲದೇ ಸಾಗುತ್ತಿದೆ. ಸಾಕಷ್ಟು ಬೋಲ್ಡ್​ ಆದಂತಹ ವಿಚಾರಗಳಿಂದ ಈ ಕಾರ್ಯಕ್ರಮ ಸದ್ದು ಮಾಡುತ್ತಿದ್ದೆ. ಬಿಗ್​ ಬಾಸ್​ ಓಟಿಟಿ ಸಿಕ್ಕಾಪಟ್ಟೆ ಹಾಟ್​ ಆಗಿರಲಿದೆ ಎಂದು ಈ ಮೊದಲು ಬಿಡುಗಡೆಯಾದ ಪ್ರೋಮೋದಲ್ಲಿಯೇ ಸ್ಪಷ್ಟಪಡಿಸಲಾಗಿತ್ತು. ಅದು ಇತ್ತೀಚಿನ ಎಪಿಸೋಡ್​ನಲ್ಲಿ ಪ್ರೇಕ್ಷಕರ ಗಮನಕ್ಕೂ ಬಂದಿದೆ. ಒಂದೇ ಒಂದು ಸಣ್ಣ ಟಾಸ್ಕ್​ ಗೆಲ್ಲುವ ಸಲುವಾಗಿ ಸಿಂಗರ್​ ನೇಹಾ ಭಾಸೀನ್​ (, Neha Bhasin) ಅವರು ನಟಿ ರಿಧಿಮಾ ಪಂಡಿತ್​ (Ridhima Pandit) ತುಟಿಗೆ ಮುತ್ತಿಟ್ಟಿದ್ದಾರೆ!

ಬಿಗ್​ ಬಾಸ್​ ಓಟಿಟಿ ಸ್ಪರ್ಧಿಗಳನ್ನು ಎರಡು ಟೀಮ್​ಗಳನ್ನಾಗಿ ವಿಭಾಗಿಸಲಾಗಿದೆ. ಒಂದು ಟೀಮ್​ನವರು ಸ್ಟಾಚ್ಯೂ (statue) ರೀತಿ ನಿಂತುಕೊಳ್ಳಬೇಕು. ಅವರನ್ನು ಕದಡಿಸಲು ಇನ್ನೊಂದು ಟೀಮ್​ನವರು ಪ್ರಯತ್ನಿಸಬೇಕು. ಈ ವೇಳೆ ಸ್ಪರ್ಧಿಗಳು ಅನೇಕ ಕಸರತ್ತುಗಳನ್ನು ಮಾಡಿದ್ದಾರೆ. ನಟಿ ರಿಧಿಮಾ ಪಂಡಿತ್​ ಅವರ ಏಕಾಗ್ರತೆಯನ್ನು ಕೆಡಿಸಲು ನೇಹಾ ಭಾಸೀನ್​ ಪ್ರಯತ್ನ ಪಟ್ಟರು. ಅದಕ್ಕಾಗಿ ಅವರು ನೈತಿಕತೆಯನ್ನೂ ಬದಿಗಿಟ್ಟರು ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ.

ಎಷ್ಟೇ ಪ್ರಯತ್ನಿಸಿದರೂ ರಿಧಿಮಾ ಪಂಡಿತ್​ ಕದಲಾಡಲಿಲ್ಲ. ಆಗ ನೇಹಾ ಆಯ್ಕೆ ಮಾಡಿಕೊಂಡಿದ್ದರು ಕಿಸ್​ ಮಾಡುವ ತಂತ್ರವನ್ನು! Statue ಆಗಿ ನಿಂತಿದ್ದ ರಿಧಿಮಾ ತುಟಿಗೆ ತುಟಿ ಸೇರಿಸಿ ನೇಹಾ ಮುತ್ತಿಟ್ಟರು. ಒಬ್ಬರ ಸಮ್ಮತಿ ಇಲ್ಲದೆ ಈ ರೀತಿ ಕಿಸ್​ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಬಿಗ್​ ಬಾಸ್​ ಓಟಿಟಿ ವೀಕ್ಷಕರ ವಲಯದಲ್ಲಿ ಕೇಳಿಬರುತ್ತಿದೆ. ನೇಹಾ ಹೀಗೆ ನೈತಿಕತೆಯ ಗಡಿ ಮೀರಿ ಕಿಸ್​ ಮಾಡಿದರೂ ಕೂಡ ರಿಧಿಮಾ ಅವರನ್ನು ಸೋಲಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂಬುದು ಬೇರೆ ಮಾತು.

ಕೇವಲ ಆರು ವಾರಗಳ ಕಾಲ ನಡೆಯಲಿರುವ ‘ಬಿಗ್​ ಬಾಸ್​ ಓಟಿಟಿ’ ಶೋ ವೂಟ್​ನಲ್ಲಿ ಮಾತ್ರ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮ ತುಂಬ ವಿವಾದಾತ್ಮಕವಾಗಿದ್ದು, ಹಲವು ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ. ಬಳಿಕ ಸಲ್ಮಾನ್​ ಖಾನ್​ ನಡೆಸಿಕೊಡುವ ‘ಬಿಗ್​ ಬಾಸ್ ಹಿಂದಿ ಸೀಸನ್​ 15’ ಆರಂಭ ಆಗಲಿದೆ. ಅಲ್ಲಿಯವರೆಗೂ ಕರಣ್​ ಜೋಹರ್​ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಾರೆ.

ಇದನ್ನೂ ಓದಿ:

‘ಒಮ್ಮೆ ಅವನು ನನ್ನ ಜತೆ ಲಿಮಿಟ್​ ಕ್ರಾಸ್​ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ

ಕೈಯಲ್ಲಿ ಸಿನಿಮಾಗಳೇ ಇಲ್ಲದಿದ್ರೂ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ 35 ಕೋಟಿ ಆಸ್ತಿಯ ಒಡತಿ; ಹೇಗೆ ಗೊತ್ತಾ?

(Bigg Boss OTT singer Neha Bhasin kisses actress Ridhima Pandit in a task)

Published On - 9:56 am, Sat, 14 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ