AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಯಲ್ಲಿ ಸಿನಿಮಾಗಳೇ ಇಲ್ಲದಿದ್ರೂ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ 35 ಕೋಟಿ ಆಸ್ತಿಯ ಒಡತಿ; ಹೇಗೆ ಗೊತ್ತಾ?

ಹಲವು ಸಿನಿಮಾಗಳಿಗೆ ನಾಯಕಿಯಾಗಿದ್ದ ಶಮಿತಾ ಶೆಟ್ಟಿ ಅವರು ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ದೂರು ಉಳಿದುಕೊಂಡಿದ್ದಾರೆ. ಆದರೂ ಕೂಡ ಅವರ ವಾರ್ಷಿಕ ಆದಾಯ ಚೆನ್ನಾಗಿಯೇ ಇದೆ.

ಕೈಯಲ್ಲಿ ಸಿನಿಮಾಗಳೇ ಇಲ್ಲದಿದ್ರೂ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ 35 ಕೋಟಿ ಆಸ್ತಿಯ ಒಡತಿ; ಹೇಗೆ ಗೊತ್ತಾ?
ಕೈಯಲ್ಲಿ ಸಿನಿಮಾಗಳೇ ಇಲ್ಲದಿದ್ರೂ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ 35 ಕೋಟಿ ಆಸ್ತಿಯ ಒಡತಿ; ಹೇಗೆ ಗೊತ್ತಾ?
TV9 Web
| Updated By: ಮದನ್​ ಕುಮಾರ್​|

Updated on: Aug 11, 2021 | 1:30 PM

Share

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಪತಿ ರಾಜ್​ ಕುಂದ್ರಾ (Raj Kundra) ಅಶ್ಲೀಲ ಸಿನಿಮಾ ದಂಧೆಯ ಪ್ರಮುಖ ಆರೋಪಿಯಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಬಳಿಕ ಅವರ ಇಡೀ ಫ್ಯಾಮಿಲಿ ಬಗ್ಗೆ ಸುದ್ದಿ ಆಗುತ್ತಿದೆ. ಕುಟುಂಬದ ಸದಸ್ಯರ ವಾರ್ಷಿಕ ಆದಾಯದ ಕುರಿತು ಚರ್ಚೆ ನಡೆಯುತ್ತಿದೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕೂಡ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಾರೆ. ಅವರು ಹೊಂದಿರುವ ಒಟ್ಟು ಆಸ್ತಿ ಮೌಲ್ಯ ಎಷ್ಟು ಎಂದು ತಿಳಿದುಕೊಳ್ಳುವ ಬಯಕೆ ಸಿನಿಪ್ರಿಯರಿಗೆ ಇದೆ. ಸದ್ಯ ಶಮಿತಾ ಶೆಟ್ಟಿ (Shamita Shetty) ಅವರು ಬಿಗ್​ ಬಾಸ್​ ಓಟಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಆ ಕಾರಣದಿಂದಲೂ ಅವರ ಸಂಪಾದನೆ ಬಗ್ಗೆ ಜನರಿಗೆ ಕೌತುಕ ಮೂಡಿದೆ.

ಒಂದು ಕಾಲದಲ್ಲಿ ಶಮಿತಾ ಶೆಟ್ಟಿ ಕೂಡ ಬಾಲಿವುಡ್​ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಹಲವು ಸಿನಿಮಾಗಳಿಗೆ ನಾಯಕಿಯಾಗಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ದೂರು ಉಳಿದುಕೊಂಡಿದ್ದಾರೆ. ಆದರೂ ಕೂಡ ಅವರ ವಾರ್ಷಿಕ ಆದಾಯ ಚೆನ್ನಾಗಿಯೇ ಇದೆ. ಮೂಲಗಳ ಪ್ರಕಾರ, 35 ಕೋಟಿ ರೂ. ಆಸ್ತಿಗೆ ಅವರು ಒಡತಿ! ಹಾಗಾದರೆ ಈ ಬೆಡಗಿಗೆ ಸಂಪಾದನೆ ಹೇಗೆ ಆಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ.

ವೃತ್ತಿಪರ ಇಂಟೀರಿಯರ್​ ಡಿಸೈನರ್​ ಆಗಿ ಶಮಿತಾ ಶೆಟ್ಟಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅದರಿಂದ ಅವರಿಗೆ ಉತ್ತಮ ಆದಾಯ ಇದೆ. ಅಲ್ಲದೆ, ಮಾಡೆಲ್​ ಕೂಡ ಆಗಿರುವ ಅವರು ಹಲವು ಕಂಪನಿಗಳಿಗೆ ರೂಪದರ್ಶಿ ಆಗಿದ್ದಾರೆ. ಅಲ್ಲಿಯೂ ಅವರು ಒಳ್ಳೆಯ ಸಂಭಾವನೆ ಪಡೆಯುತ್ತಾರೆ. ಈ ಎಲ್ಲ ಕಾರಣಗಳಿಂದ ಅವರು ಕೋಟ್ಯಂತರ ರೂ. ಆಸ್ತಿ ಹೊಂದಿದ್ದಾರೆ. ಈಗ ಅವರು ಬಿಗ್​ ಬಾಸ್​ ಓಟಿಟಿಗೆ ಕಾಲಿಟ್ಟಿದ್ದು ಅವರಿಂದಲೂ ಸಂಭಾವನೆ ಸಿಗಲಿದೆ.

ಭಾವ ರಾಜ್​ ಕುಂದ್ರಾ ಸಂಕಷ್ಟದಲ್ಲಿ ಸಿಲುಕಿರುವಾಗಲೇ ಶಮಿತಾ ಬಿಗ್ ಬಾಸ್​ ಓಟಿಟಿಗೆ ಎಂಟ್ರಿ ನೀಡಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ ಅವರು ಟ್ರೋಲ್​ಗೂ ಒಳಗಾಗುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ರಾಜ್​ ಕುಂದ್ರಾ ಬಂಧನಕ್ಕೂ ಮೊದಲೇ ಬಿಗ್​ ಬಾಸ್​ ಓಟಿಟಿಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಒಪ್ಪಂದ ಆಗಿತ್ತು’ ಎಂದಿದ್ದಾರೆ. ಆದರೆ ಈ ವಾದವನ್ನು ಬಹುತೇಕರು ಒಪ್ಪುತ್ತಿಲ್ಲ. ಮೂಲಗಳ ಪ್ರಕಾರ, ಬಿಗ್​ ಬಾಸ್​ ಓಟಿಟಿ ಶುರುವಾಗುವುದಕ್ಕಿಂತ ಕೇವಲ ಒಂದು ದಿನ ಮುಂಚೆ ಅವರಿಗೆ ಈ ಆಫರ್​ ಬಂದಿತ್ತು ಎನ್ನಲಾಗಿದೆ.

ಇದನ್ನೂ ಓದಿ:

ರಾಜ್​ ಕುಂದ್ರಾಗೆ ಇನ್ನಷ್ಟು ದಿನ ಜೈಲೇ ಗತಿ; ಅಶ್ಲೀಲ ಸಿನಿಮಾ ಕೇಸ್​ನಲ್ಲಿ ಮರೀಚಿಕೆಯಾದ ಜಾಮೀನು

‘ರಾಜ್ ಕುಂದ್ರಾ ರಾತ್ರಿಯ ಯೋಗ ಪೋಸ್​ ಕಲಿಸುತ್ತಾರೆ’; ಶಿಲ್ಪಾ ಶೆಟ್ಟಿ ತಂಗಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​