ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಚೀರಾಟ, ಹಾರಾಟ; ಇಂಥ ಪರಿಸ್ಥಿತಿಗೆ ಕಾರಣ ಏನು?

ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕೆಲವರು ಶಮಿತಾ ಶೆಟ್ಟಿಗೆ ಕಮೆಂಟ್​ಗಳ ಮೂಲಕ ಬೆಂಬಲ ಸೂಚಿಸಿದ್ದರೆ, ಮತ್ತೆ ಕೆಲವರು ಕಾಲೆಳೆಯುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಚೀರಾಟ, ಹಾರಾಟ; ಇಂಥ ಪರಿಸ್ಥಿತಿಗೆ ಕಾರಣ ಏನು?
ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಚೀರಾಟ, ಹಾರಾಟ; ಇಂಥ ಪರಿಸ್ಥಿತಿಗೆ ಕಾರಣ ಏನು?
Follow us
TV9 Web
| Updated By: ಮದನ್​ ಕುಮಾರ್​

Updated on: Aug 10, 2021 | 9:25 AM

ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಉದ್ಯಮಿ ರಾಜ್​ ಕುಂದ್ರಾ ಅರೆಸ್ಟ್​ ಆದ ನಂತರ ಅವರ ಪತ್ನಿ ಶಿಲ್ಪಾ ಶೆಟ್ಟಿ ಹಾಗೂ ಇಡೀ ಕುಟುಂಬವೇ ಸಂಕಷ್ಟ ಎದುರಿಸುವಂತಾಯಿತು. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕೂಡ ನೆಟ್ಟಿಗರಿಂದ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಈ ನಡುವೆ ಅವರು ಮತ್ತೊಂದು ಪ್ರಮುಖ ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದಾರೆ. ಈಗ ಅವರು ‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿದ್ದಾರೆ. ಕರಣ್​ ಜೋಹರ್​ ನಡೆಸಿಕೊಡುತ್ತಿರುವ ಈ ಶೋ ಆ.9ರಿಂದ ಆರಂಭ ಆಗಿದ್ದು, ಮೊದಲ ದಿನವೇ ಶಮಿತಾ ಶೆಟ್ಟಿ ಕೂಗಾಟ, ಹಾರಾಟ ಶುರುಮಾಡಿಕೊಂಡಿದ್ದಾರೆ. ಸಹ ಸ್ಪರ್ಧಿಗಳ ವಿರುದ್ಧ ಅವರು ಹರಿಹಾಯ್ದಿದ್ದಾರೆ.

ಬಿಗ್​ ಬಾಸ್​ ಎಂದರೆ ಅಲ್ಲಿ ಜಗಳಗಳು ಮಾಮೂಲು. ಅದರಲ್ಲೂ ಈ ಬಾರಿ ‘ಬಿಗ್​ ಬಾಸ್​ ಓಟಿಟಿ’ ತುಂಬ ಖಾರವಾಗಿದೆ. ಸಿಕ್ಕಾಪಟ್ಟೆ ಬೋಲ್ಡ್​ ಆಗಿ ಕೂಡ ಇರಲಿದೆ ಎಂಬುದಕ್ಕೆ ಪ್ರೋಮೋನಲ್ಲೇ ಸುಳಿವು ಸಿಕ್ಕಿತ್ತು. ಅದಕ್ಕೆ ತಕ್ಕಂತೆಯೇ ಸ್ಪರ್ಧಿಗಳು ಕೂಡ ಸ್ಟ್ರಾಂಗ್​ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಲಿಟ್ಟು ಎರಡು ದಿನ ಕಳೆಯುವುದರೊಳಗೆ ಶಮಿತಾ ಶೆಟ್ಟಿ ಗರಂ ಆಗಿದ್ದಾರೆ. ಬಿಗ್​ ಬಾಸ್​ ಮನೆಯೊಳಗಿನ ಕೆಲಸ ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಆಗಿದೆ. ಆಗ ಶಮಿತಾ ಕಿರುಚಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕೆಲವರು ಶಮಿತಾ ಶೆಟ್ಟಿಗೆ ಕಮೆಂಟ್​ಗಳ ಮೂಲಕ ಬೆಂಬಲ ಸೂಚಿಸಿದ್ದರೆ, ಮತ್ತೆ ಕೆಲವರು ಕಾಲೆಳೆಯುತ್ತಿದ್ದಾರೆ. ತಮ್ಮ ಕುಟುಂಬದ ಸದಸ್ಯರಾದ ರಾಜ್​ ಕುಂದ್ರ ಮೇಲೆ ನೀಲಿ ಚಿತ್ರ ನಿರ್ಮಾಣದ ಆರೋಪ ಎದುರಾಗಿರುವುದರಿಂದ ಆ ವಿಷಯ ಕೂಡ ಬಿಗ್ ಬಾಸ್​ ಮನೆಯೊಳಗೆ ಶಮಿತಾಗೆ ಮುಳುವಾಗಬಹುದು. ಆದರೆ ಅದೆಲ್ಲದಕ್ಕೂ ಸಿದ್ಧರಾಗಿಯೇ ಅವರು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ.

View this post on Instagram

A post shared by MrKhabri (@mrkhabrix)

ಆರು ವಾರಗಳ ಕಾಲ ನಡೆಯಲಿರುವ ಈ ಬಿಗ್​​ ಬಾಸ್​ ಕಾರ್ಯಕ್ರಮವು ವೂಟ್​ನಲ್ಲಿ ಮಾತ್ರ ಪ್ರಸಾರ ಆಗಲಿದೆ. ಬಳಿಕ ಸಲ್ಮಾನ್​ ಖಾನ್​ ನಡೆಸಿಕೊಡುವ ‘ಬಿಗ್​ ಬಾಸ್ ಹಿಂದಿ ಸೀಸನ್​ 15’ ಆರಂಭ ಆಗಲಿದೆ. ಅಲ್ಲಿಯವರೆಗೂ ಕರಣ್​ ಜೋಹರ್​ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಾರೆ. ‘ಬಿಗ್​ ಬಾಸ್​ ಓಟಿಟಿ’ಯಲ್ಲಿ ಇರುವ ಸ್ಪರ್ಧಿಗಳೇ ‘ಬಿಗ್​ ಬಾಸ್​ 15’ರಲ್ಲೂ ಮುಂದುವರಿಯುತ್ತಾರಾ ಅಥವಾ ಹೊಸ ಸ್ಪರ್ಧಿಗಳು ಎಂಟ್ರಿ ನೀಡುತ್ತಾರಾ ಎಂಬುದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಇದನ್ನೂ ಓದಿ:

ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ವಿರುದ್ಧ ಚೀಟಿಂಗ್​ ಕೇಸ್​; ಬಂಧನ ಭೀತಿ

‘ರಾಜ್ ಕುಂದ್ರಾ ರಾತ್ರಿಯ ಯೋಗ ಪೋಸ್​ ಕಲಿಸುತ್ತಾರೆ’; ಶಿಲ್ಪಾ ಶೆಟ್ಟಿ ತಂಗಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ