‘ಶಿಲ್ಪಾ ಶೆಟ್ಟಿಗೂ ನಿಮ್ಮ ವಿಡಿಯೋ ಸಖತ್​ ಇಷ್ಟ’ ಎಂದು ಪತ್ನಿ ಹೆಸರಲ್ಲಿ ಶೆರ್ಲಿನ್​ಗೆ ಯಾಮಾರಿಸಿದ್ದ ರಾಜ್​ ಕುಂದ್ರಾ

Sherlyn Chopra: ‘ನಾನು ಆರಂಭದಲ್ಲಿ ಗ್ಲಾಮರಸ್​ ವಿಡಿಯೋ, ನಂತರ ಬೋಲ್ಡ್​ ವಿಡಿಯೋ, ಬಳಿಕ ಅರೆನಗ್ನ ವಿಡಿಯೋ ಮಾಡಿದೆ. ಕೊನೆಗೆ ಸಂಪೂರ್ಣ ನಗ್ನವಾಗಿ ನಟಿಸಬೇಕಾಯಿತು’ ಎಂದು ಹೇಳಿರುವ ಶೆರ್ಲಿನ್​ ಚೋಪ್ರಾ, ‘ಇದಕ್ಕೆಲ್ಲ ರಾಜ್​ ಕುಂದ್ರಾ ಕಾರಣ’ ಎಂದು ಆರೋಪಿಸಿದ್ದಾರೆ.

‘ಶಿಲ್ಪಾ ಶೆಟ್ಟಿಗೂ ನಿಮ್ಮ ವಿಡಿಯೋ ಸಖತ್​ ಇಷ್ಟ’ ಎಂದು ಪತ್ನಿ ಹೆಸರಲ್ಲಿ ಶೆರ್ಲಿನ್​ಗೆ ಯಾಮಾರಿಸಿದ್ದ ರಾಜ್​ ಕುಂದ್ರಾ
‘ಶಿಲ್ಪಾ ಶೆಟ್ಟಿಗೂ ನಿಮ್ಮ ವಿಡಿಯೋ ಸಖತ್​ ಇಷ್ಟ’ ಎಂದು ಪತ್ನಿ ಹೆಸರಲ್ಲಿ ಶೆರ್ಲಿನ್​ಗೆ ಯಾಮಾರಿಸಿದ್ದ ರಾಜ್​ ಕುಂದ್ರಾ
Follow us
TV9 Web
| Updated By: ಮದನ್​ ಕುಮಾರ್​

Updated on:Aug 07, 2021 | 3:32 PM

ಉದ್ಯಮಿ ರಾಜ್ ಕುಂದ್ರಾ ನೀಲಿ ಚಿತ್ರಗಳ ಹಗರಣದಲ್ಲಿ ಜೈಲು ಪಾಲಾಗಿದ್ದು, ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ತಮ್ಮ ಅಶ್ಲೀಲ ಸಿನಿಮಾ ದಂಧೆಯಲ್ಲಿ ಯುವತಿಯರನ್ನು ಯಾಮಾರಿಸಲು ಪತ್ನಿ ಶಿಲ್ಪಾ ಶೆಟ್ಟಿ (Shilpa Shetty) ಹೆಸರನ್ನೂ ಕೂಡ ರಾಜ್​ ಕುಂದ್ರಾ (Raj Kundra) ಉಪಯೋಗಿಸಿಕೊಳ್ಳುತ್ತಿದ್ದರು ಎಂಬ ಸತ್ಯ ಈಗ ಬಯಲಾಗಿದೆ. ರಾಜ್​ ಕುಂದ್ರಾ ಜೊತೆ ನಟಿ ಶೆರ್ಲಿನ್​ ಚೋಪ್ರಾ ಕೂಡ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶೆರ್ಲಿನ್​ (Sherlyn Chopra) ಹಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಅಶ್ಲೀಲ ಸಿನಿಮಾ ದಂಧೆಯ ಪ್ರಮುಖ ಆರೋಪಿ ಆಗಿರುವ ರಾಜ್​ ಕುಂದ್ರಾ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ಅವರು ನೀಡಿದ್ದಾರೆ.

ಇಂಥ ದಂಧೆಗೆ ಬರುವುವಂತೆ ತಮ್ಮನ್ನು ಮನವೊಲಿಸಿದ್ದೇ ರಾಜ್​ ಕುಂದ್ರಾ ಎಂದ್ರ ಶೆರ್ಲಿನ್​ ಚೋಪ್ರಾ ಆರೋಪ ಹೊರಿಸಿದ್ದಾರೆ. ಆ ಬಗ್ಗೆ ಅವರು ವಿವರವಾಗಿ ಮಾತನಾಡಿದ್ದಾರೆ. ‘ರಾಜ್​ ಕುಂದ್ರಾ ಅವರೇ ನನ್ನ ಗುರು. ಬರೀ ಗ್ಲಾಮರ್​ಗಾಗಿ ಶೂಟಿಂಗ್​ ಮಾಡುತ್ತಿದ್ದೇವೆ ಎಂದು ಅವರು ನನ್ನ ದಾರಿ ತಪ್ಪಿಸಿದರು. ನನ್ನ ಫೋಟೋ ಮತ್ತು ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ಕೂಡ ಇಷ್ಟಪಟ್ಟಿದ್ದಾರೆ ಅಂತ ರಾಜ್​ ಕುಂದ್ರಾ ನನಗೆ ಹೇಳಿದ್ದರು. ಅರೆ ನಗ್ನ ಮತ್ತು ನೀಲಿ ಸಿನಿಮಾಗಳು ತುಂಬ ಕಾಮನ್​. ಅದನ್ನು ಎಲ್ಲರೂ ಮಾಡುತ್ತಾರೆ ಅಂತ ನನ್ನನ್ನು ಅವರು ನಂಬಿಸಿದರು’ ಎಂದು ಶೆರ್ಲಿನ್​ ಹೇಳಿದ್ದಾರೆ.

‘ಇದೆಲ್ಲ ಹೇಗೆ ಶುರುವಾಯಿತು ಎಂಬುದೇ ನನಗೆ ಗೊತ್ತಿಲ್ಲ. ಒಂದು ದಿನ ಇಂಥ ಹಗರಣದಲ್ಲಿ ನಾನು ಸಿಕ್ಕಿಕೊಳ್ಳುತ್ತೇನೆ ಮತ್ತು ಪೊಲೀಸರ ಎದುರಿನಲ್ಲಿ ಹೇಳಿಕೆ ನೀಡಬೇಕಾಗುತ್ತದೆ ಎಂಬ ಅರಿವೇ ನನಗೆ ಇರಲಿಲ್ಲ. ಮೊದಲ ಬಾರಿಗೆ ನಾನು ರಾಜ್​ ಕುಂದ್ರಾ ಅವರನ್ನು ಭೇಟಿ ಆದಾಗ ನನ್ನ ಬದುಕೇ ಬದಲಾಗುತ್ತದೆ ಎಂದುಕೊಂಡಿದ್ದೆ. ನನಗೆ ದೊಡ್ಡ ಯಶಸ್ಸು ಸಿಗುತ್ತೆ ಅಂತ ಭಾವಿಸಿದ್ದೆ. ಶಿಲ್ಪಾ ಶೆಟ್ಟಿ ಗಂಡ ನನ್ನಿಂದ ಕೆಟ್ಟ ಕೆಲಸ ಮಾಡಿಸುತ್ತಾರೆ ಎಂಬುದನ್ನು ನಾನು ಊಹಿಸಿಯೇ ಇರಲಿಲ್ಲ’ ಎಂದು ಶೆರ್ಲಿನ್​ ಚೋಪ್ರಾ ಹೇಳಿದ್ದಾರೆ.

‘ಮೊದಲಿಗೆ ನಾನು ಅವರ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ನಟಿಸಲು ಶುರುಮಾಡಿದೆ. ಆರಂಭದಲ್ಲಿ ಗ್ಲಾಮರಸ್​ ವಿಡಿಯೋ, ನಂತರ ಬೋಲ್ಡ್​ ವಿಡಿಯೋ, ಬಳಿಕ ಅರೆ ನಗ್ನ ವಿಡಿಯೋ ಮಾಡಿದೆ. ಕೊನೆಗೆ ಸಂಪೂರ್ಣ ನಗ್ನವಾಗಿ ನಟಿಸಬೇಕಾಯಿತು. ಇದನ್ನು ಎಲ್ಲರೂ ಮಾಡುತ್ತಾರೆ. ಹಾಗಾಗಿ ಇದರಲ್ಲಿ ತಪ್ಪೇನೂ ಇಲ್ಲ ಅಂತ ನನ್ನನ್ನು ನಂಬಿಸಲಾಗಿತ್ತು’ ಎಂದು ರಾಜ್​ ಕುಂದ್ರಾ ಮೇಲೆ ಶೆರ್ಲಿನ್​ ಚೋಪ್ರಾ ಗೂಬೆ ಕೂರಿಸಿದ್ದಾರೆ.

ಇದನ್ನೂ ಓದಿ:

ಪೊಲೀಸರು ನನ್ನಿಂದ ಬಲವಂತವಾಗಿ ರಾಜ್​ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ

ಪತಿ ರಾಜ್​ ಕುಂದ್ರಾ ನೀಲಿ ಚಿತ್ರ ಕರ್ಮಕಾಂಡದಿಂದ ಶಿಲ್ಪಾ ಶೆಟ್ಟಿಗೆ ಆಗುತ್ತಿದೆ ಕೋಟಿ ಕೋಟಿ ನಷ್ಟ

Published On - 3:11 pm, Sat, 7 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ