ಅಕ್ಷಯ್ ಕುಮಾರ್ ನಟನೆಯ ‘ಬೆಲ್ಬಾಟಂ’ ಚಿತ್ರದ ಪೋಸ್ಟರ್ ಬೇರೆ ಚಿತ್ರದಿಂದ ಪ್ರಭಾವಿತವಾದದ್ದೇ ಅಥವಾ ಕದ್ದಿದ್ದೇ?
Bell Bottom Poster: ಬಾಲಿವುಡ್ನ ಬಹು ನಿರೀಕ್ಷೆಯ ಚಿತ್ರ ‘ಬೆಲ್ಬಾಟಂ’ನ ಪೋಸ್ಟರ್ ಕದ್ದಿದ್ದು ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ.
ಬಾಲಿವುಡ್ನಲ್ಲಿ ಸದ್ಯ ಸಖತ್ ಸೌಂಡ್ ಮಾಡುತ್ತಿದೆ ‘ಬೆಲ್ಬಾಟಂ’ ಚಿತ್ರತಂಡ. ಇತ್ತೀಚೆಗಷ್ಟೇ ಅವರು ಬಿಡುಗಡೆ ಮಾಡಿರುವ ಚಿತ್ರದ ಮೊದಲ ಹಾಡು ಅಭಿಮಾನಿಗಳಿಂದ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಆ ಚಿತ್ರದ ಪೋಸ್ಟರ್ ಒಂದರ ಕುರಿತಂತೆ ಸಿನಿಪ್ರಿಯರು ಭಿನ್ನವಾದ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾರಣವಿಷ್ಟೇ, ಆ ಪೋಸ್ಟರ್ ಇನ್ಸ್ಟಾಗ್ರಾಂನಲ್ಲಿನ ಖ್ಯಾತ ಜೋಡಿಯೊಂದರ ಫೊಟೊಗಳಿಂದ ಪ್ರಭಾವಿತವಾಗಿದೆ ಎನ್ನುವುದು. ಆ ಜೋಡಿಗಳ ಚಿತ್ರವನ್ನು ಮತ್ತು ಅಕ್ಷಯ್ ಕುಮಾರ್ ನಟನೆಯ ‘ಬೆಲ್ಬಾಟಂ’ನ ಪೋಸ್ಟರ್ಅನ್ನೂ ಅಕ್ಕಪಕ್ಕದಲ್ಲಿಟ್ಟು ಅಳೆದುತೂಗುತ್ತಿದ್ದಾರೆ ನೆಟ್ಟಿಗರು. ಅವರ ಪ್ರಕಾರ ಬೆಲ್ಬಾಟಂ ಪೋಸ್ಟರ್ನ ತೂಕ ಕಡಿಮೆಯಂತೆ. ಅಂದರೆ, ಚಿತ್ರತಂಡ ಪೋಸ್ಟರ್ ಕದ್ದಿದೆ ಎಂಬುದು ಅವರ ಅಂಬೋಣ.
ಶ್ರೀಲಂಕಾದಲ್ಲಿ ತೆಗೆಯಲಾದ ಮೂಲ ಚಿತ್ರ ಎನ್ನಲಾಗುವ ಚಿತ್ರ ಇಲ್ಲಿದೆ:
View this post on Instagram
ಈ ಕುರಿತು ಅಕ್ಷಯ್ ಕುಮಾರ್ ಮತ್ತು ಚಿತ್ರತಂಡ ಯಾವುದೇ ಹೇಳಿಕೆಗಳನ್ನು ನೀಡಿಲ್ಲವಾದರೂ, ಜಾಲತಾಣಗಳಲ್ಲಿ ಈ ವಿಷಯದ ಕುರಿತು ಪರ ವಿರೋಧದ ಚರ್ಚೆ ಕೇಳಿಬರುತ್ತಿರುವುದು ಸುಳ್ಳಲ್ಲ. ರೈಲಿನಿಂದ ಹೊರಗೆ ಬಂದು ಹಾಗೆ ಪೋಸ್ ನೀಡಿರುವ ಹಲವು ಚಿತ್ರಗಳಿವೆ. ಒಂದು ವೇಳೆ ಬೇರೆ ಚಿತ್ರದಿಂದ ಪ್ರಭಾವಿತವಾಗಿದ್ದರೂ ತಪ್ಪೇನು ಎನ್ನುವುದು ಅಕ್ಕಿ ಅಭಿಮಾನಿಗಳ ಅಭಿಪ್ರಾಯ.
ಇದನ್ನೂ ಓದಿ:
ಮಗಳ ಸಿನಿಮಾ ಶೂಟಿಂಗ್ ನೋಡಲು ಸೆಟ್ಗೆ ಬಂದ ಅಲ್ಲು ಅರ್ಜುನ್ಗೆ ಖುಷಿಯೋ ಖುಷಿ
ಬಿಗ್ ಬಾಸ್ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್ ಕೆಪಿ
(Akshay Kumars Bell Bottom new poster is copied or influenced?)
Published On - 4:41 pm, Sat, 7 August 21